ಚುನಾವಣೆಯ ಪ್ರಚಾರಕ್ಕೆ ಹೆಚ್ಚು ಹಣ ಖರ್ಚು ಮಾಡಿದ್ದಕ್ಕೆ ಫ್ರಾನ್ಸ್‌ನ ಮಾಜಿ ರಾಷ್ಟ್ರಪತಿಗಳಿಗೆ ಶಿಕ್ಷೆ !

ಭಾರತವು ಫ್ರಾನ್ಸ್‌ನ ಆದರ್ಶವನ್ನಿಟ್ಟುಕೊಂಡು ಚುನಾವಣೆ ಪ್ರಚಾರದಲ್ಲಿ ಹೆಚ್ಚು ಹಣ ಖರ್ಚು ಮಾಡುವವರಿಗೆ ಶಿಕ್ಷೆ ವಿಧಿಸಬೇಕು – ಸಂಪಾದಕರು 

ಫ್ರಾನ್ಸ್‌ನ ಮಾಜಿ ರಾಷ್ಟ್ರಪತಿ ನಿಕೊಲಸ್ ಸರ್ಕೊಝಿ

ಪ್ಯಾರಿಸ್ (ಫ್ರಾನ್ಸ್) – ಚುನಾವಣೆ ಆಯೋಗವು ನಿಶ್ಚಿತಪಡಿಸಿದ ಮೊತ್ತಕ್ಕಿಂತ ಹೆಚ್ಚು ಮೊತ್ತವನ್ನು ಚುನಾವಣೆಯಲ್ಲಿ ಖರ್ಚು ಮಾಡಿದ ಪ್ರಕರಣದಲ್ಲಿ ಫ್ರಾನ್ಸ್‌ನ ಮಾಜಿ ರಾಷ್ಟ್ರಪತಿ ನಿಕೊಲಸ್ ಸರ್ಕೊಝಿ ಇವರಿಗೆ ನ್ಯಾಯಾಲಯವು ೧ ವರ್ಷದ ಸೆರೆಮನೆಯ ಶಿಕ್ಷೆಯನ್ನು ವಿಧಿಸಿದೆ. ೨೦೨೧ ರಲ್ಲಿ ಅವರು ಚುನಾವಣೆಯಲ್ಲಿ ಹೆಚ್ಚು ಮೊತ್ತವನ್ನು ಖರ್ಚು ಮಾಡಿದ್ದರು. ಸರ್ಕೊಝಿ ಇವರು ಈ ನಿರ್ಣಯದ ವಿರುದ್ಧ ಮೇಲಿನ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಅವರನ್ನು ಗೃಹಬಂಧನದಲ್ಲಿಡಲಾಗಿದೆ. ಅವರ ಕೈಯಲ್ಲಿ ಇಲೆಕ್ಟ್ರಾನಿಕ್ ‘ಬ್ರೆಸಲೆಟ್’ (ಮಣಿಕಟ್ಟಿನಲ್ಲಿ ಹಾಕಲಾಗುವ ಒಂದು ರೀತಿಯ ಬಳೆ ಅಥವಾ ಕಡಗ) ಹಾಕಲಾಗಿದೆ. ಈ ಮೂಲಕ ಸರ್ಕೊಝಿಯವರು ಎಲ್ಲಿದ್ದಾರೆ ?, ಅವರು ಯಾರನ್ನೆಲ್ಲಾ ಭೇಟಿಯಾಗುತ್ತಾರೆ ?, ಇವುಗಳೊಂದಿಗೆ ಇತರ ಮಾಹಿತಿಯೂ ಪೊಲೀಸರಿಗೆ ಸಿಗುತ್ತದೆ. ಆದುದರಿಂದ ಅವರು ಎಲ್ಲಿಗೂ ಹೋಗಲು ಸಾಧ್ಯವಾಗುವುದಿಲ್ಲ.