* ಹೀಗೆ ಮಾಡುತ್ತಿರುವ ಪ್ರತಿಯೊಬ್ಬರ ಮೇಲೆ ಕ್ರಮಕೈಗೊಂಡು ಮತ್ತು ಅದರ ಮಾಹಿತಿಯನ್ನು ಮುಖ್ಯಮಂತ್ರಿಗಳು ದೇಶಕ್ಕೆ ನೀಡಬೇಕು.- ಸಂಪಾದಕರು * ರಾಜ್ಯದಲ್ಲಿ ಭಾಜಪದ ಸರಕಾರ ಇರುವಾಗ ಮತಾಂಧರಿಂದ ಈ ರೀತಿಯ ಪ್ರಯತ್ನಗಳಾಗುವುದು ಹಿಂದೂಗಳಿಗೆ ಅಪೇಕ್ಷಿತ ಇಲ್ಲ.- ಸಂಪಾದಕರು |
ಗೌಹಾತಿ (ಅಸ್ಸಾಂ)- ಅಸ್ಸಾಂ ರಾಜ್ಯದಲ್ಲಿ ಜನಸಂಖ್ಯೆಯ ಸ್ಥಿತಿಯನ್ನು ಪಂಥಕ್ಕನುಸಾರ ಬದಲಾಯಿಸಿ ೨೦೫೦ ರೊಳಗೆ ರಾಜ್ಯದಲ್ಲಿ ಅಧಿಕಾರ ಪಡೆಯಲು ಮತಾಂಧರಿಂದ ಪ್ರಯತ್ನಗಳಾಗುತ್ತಿದೆ ಎಂಬ ಅಭಿಪ್ರಾಯವನ್ನು ಅಸ್ಸಾಂನ ಮುಖ್ಯಮಂತ್ರಿ ಹಿಮ್ಮತ್ ಬಿಸ್ವ ಸರಮಾ ಇವರು ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳ ಮೊದಲು ದರಂಗ ಜಿಲ್ಲೆಯ ಸಿಪಾಝಾರ ಇಲ್ಲಿ ಮತಾಂಧರಿಂದ ಪೊಲೀಸ್ ಮತ್ತು ಅತಿಕ್ರಮಣ ವಿರೋಧಿ ಪಡೆಯ ಮೇಲಾದ ಆಕ್ರಮಣದ ಹಿನ್ನೆಲೆಯಲ್ಲಿ ಅವರು ಮಾತನಾಡುತ್ತಿದ್ದರು.
CM Himanta Biswa Sarma claims conspiracy to ‘alter Assam’s demography by 2050’ https://t.co/6byUHgJxNY
— Republic (@republic) September 30, 2021
ಮುಖ್ಯಮಂತ್ರಿ ಸರಮಾ ಇವರು ಮುಂದೆ ಮಾತನಾಡುತ್ತಾ, ‘ಆಕ್ರಮಣ ನಡೆಸಿದವರಲ್ಲಿ ಹೆಚ್ಚಿನವರು ಜನರು ರಾಜ್ಯದ ಹೊರಗಿನವರಾಗಿದ್ದರು. ಅವರು ನಿಧಾನವಾಗಿ ಭೂಮಿಯ ಮೇಲೆ ಅತಿಕ್ರಮಣ ನಡೆಸುವ ಷಡ್ಯಂತ್ರ ಮಾಡುತ್ತಿದ್ದರು. ಈಗ ಹೋಜಾಯಿ ಜಿಲ್ಲೆಯ ಲುಮಡಿಂಗ್ ಮತ್ತು ಸೋನಿತಪುರ ಇಲ್ಲಿಯ ಭೂಮಿಯ ಮೇಲೆ ಅತಿಕ್ರಮಣ ಮಾಡುವುದು ಇದು ಅವರ ಉದ್ದೇಶವಾಗಿದೆ. ಅವರು ನಾಗವಾದ ಬಾಟದರೋಬಾ ಇಲ್ಲಿ ಮೊದಲೇ ನಿಯಂತ್ರಣ ಪಡೆದಿದ್ದು, ಈ ರೀತಿಯಲ್ಲಿ ಅವರು ಜನಸಂಖ್ಯೆಯ ಸ್ಥಿತಿ ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ ಎಂದೂ ಹೇಳಿದರು.