ತಮಿಳುನಾಡಿನಲ್ಲಿನ ದೇವಸ್ಥಾನಗಳ 1 ಸಾವಿರ ಕೋಟಿ ರೂಪಾಯಿ ಮೌಲ್ಯದ ಭೂಮಿಯು 4 ತಿಂಗಳಿನಲ್ಲಿ ಅತಿಕ್ರಮಣದಿಂದ ಮುಕ್ತ !

* ತಮಿಳುನಾಡಿನಲ್ಲಿ ನಾಸ್ತಿಕವಾದಿ ದ್ರಮುಕ ಸರಕಾರವಿರುವಾಗ ೪ ತಿಂಗಳೊಳಗೆ ದೇವಸ್ಥಾನಗಳ ಭೂಮಿಯನ್ನು ಅತಿಕ್ರಮಣದಿಂದ ಮುಕ್ತಗೊಳಿಸಲಾಗುತ್ತದೆ ಎಂದಾದರೆ ಇತರ ರಾಜ್ಯಗಳ ಸರಕಾರದಿಂದಲೂ ಇಂತಹ ಪ್ರಯತ್ನಗಳೇಕೆ ಆಗುತ್ತಿಲ್ಲ?- ಸಂಪಾದಕರು 

* ಇಷ್ಟು ವರ್ಷಗಳವರೆಗೆ ದೇವಸ್ಥಾನಗಳ ಭೂಮಿಯ ಮೇಲೆ ಅತಿಕ್ರಮಣವಾಗಲು ಬಿಟ್ಟು ದೇವಸ್ಥಾನಗಳ ಲಕ್ಷಾಂತರ ಕೋಟಿ ರೂಪಾಯಿಗಳ ಉತ್ಪನ್ನವನ್ನು ಮುಳುಗಿಸಿದವರನ್ನು ಜೀವನಪೂರ್ತಿ ಜೈಲಿಗೆ ಅಟ್ಟಬೇಕು !- ಸಂಪಾದಕರು 

* ದೇವಸ್ಥಾನಗಳ ಭೂಮಿಯನ್ನು ಅತಿಕ್ರಮಣದಿಂದ ಮುಕ್ತಗೊಳಿಸಿದ್ದರೂ ಅದರ ಮೇಲೆ ಅಧಿಕಾರದಲ್ಲಿರುವ ದ್ರಮುಕ ಪಕ್ಷದ ‘ಸರಕಾರಿ’ ಅತಿಕ್ರಮಣವು ನಿರಂತರವಾಗಿರುವುದು, ಈ ಬಗ್ಗೆ ಏನು ಮಾಡಬಹುದು ?- ಸಂಪಾದಕರು 

ಚೆನ್ನೈ (ತಮಿಳುನಾಡು) – ತಮಿಳುನಾಡು ರಾಜ್ಯದಲ್ಲಿ ಕಳೆದ ನಾಲ್ಕು ತಿಂಗಳುಗಳಿಂದ ನಡೆಸಲಾದ ಅತಿಕ್ರಮಣ ವಿರೋಧಿ ಅಭಿಯಾನದಿಂದ ದೇವಸ್ಥಾನಗಳ 1 ಸಾವಿರ ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ಅತಿಕ್ರಮಣ ಮುಕ್ತಗೊಳಿಸುವಲ್ಲಿ ಯಶಸ್ಸು ದೊರೆತಿದೆ. ದ್ರಮುಕ ಸರಕಾರವು ಆಡಳಿತಕ್ಕೆ ಬಂದ ನಂತರ ಈ ಭೂಮಿಯನ್ನು ಅತಿಕ್ರಮಣ ಮುಕ್ತಗೊಳಿಸುವ ನಿರ್ಣಯವನ್ನು ತೆಗೆದುಕೊಂಡು ಅದರಂತೆಯೇ ಆದೇಶ ನೀಡಿತ್ತು. ರಾಜ್ಯದಲ್ಲಿ 44000 ದೇವಸ್ಥಾನಗಳಿದ್ದು ಅವುಗಳ ಮಾಹಿತಿಯನ್ನು ಡಿಜಿಟಲ್ (ಸಂಗಣಕೀಯ ಪದ್ಧತಿಯಂತೆ ಸಂಗ್ರಹಿಸಲಾದ) ಮಾಡಲಾಗಿದೆ.

ರಾಜ್ಯದ ಮಂತ್ರಿ ಪಿ.ಕೆ. ಶೇಖರ ಬಾಬುರವರು ‘ನನ್ನ ವಿಭಾಗದ ಅಧಿಕಾರಿಗಳು ದೇವಸ್ಥಾನಗಳ ಸಂಪತ್ತಿನ ಬಗೆಗಿನ ಕಾಗದಪತ್ರಗಳನ್ನು ಡಿಜಿಟಲ್ ಮಾಡುತ್ತಿದ್ದಾರೆ. ಈ ಮೂಲಕ ದೇವಸ್ಥಾನಗಳ ಭೂಮಿಯ ಮಾಹಿತಿಯನ್ನು ಸಾರ್ವಜನಿಕಗೊಳಿಸಲಾಗುವುದು’ ಎಂದು ಹೇಳಿದ್ದಾರೆ