ಅದಾನಿ ಕಂಪನಿಗೆ ಶ್ರೀಲಂಕಾದಲ್ಲಿ ‘ಕಂಟೇನರ್ ಟರ್ಮಿನಲ್ ‘ತಯಾರಿಸುವ ಕಾಂಟ್ರಾಕ್ಟ್ !

ಚೀನಾವು ಕಟ್ಟುತ್ತಿರುವ ಬಂದರನ ಸಮೀಪದಲ್ಲಿಯೇ ಇರಲಿದೆ ಟರ್ಮಿನಲ್ !

ಕೊಲಂಬೊ (ಶ್ರೀಲಂಕಾ) – ಶ್ರೀಲಂಕಾ ಸಮುದ್ರದಲ್ಲಿ ಕಂಟೇನರ್ ಟರ್ಮಿನಲ್ ನಿರ್ಮಿಸುವ ಕಾಂಟ್ರಾಕ್ಟ್ ಭಾರತದ ಅದಾನಿ ಕಂಪನಿಗೆ ಸಿಕ್ಕಿದೆ. ಶ್ರೀಲಂಕಾ ಪೋರ್ಟ್ ಅಥಾರಿಟಿಯಿಂದ ವಿಷಯವಾಗಿ ಒಪ್ಪಂದ ಮಾಡಲಾಗಿದೆ. ವಿಶೇಷವೆಂದರೆ ಚೀನಾವು ಪ್ರಸ್ತುತ ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿ ಬಂದರು ಕಟ್ಟುತ್ತಿದೆ. ಅದರ ಹತ್ತಿರದಲ್ಲಿಯೇ ಟರ್ಮಿನಲ್ ನಿರ್ಮಾಣ ಮಾಡಲಾಗುವುದು. ಅದಾನಿ ಕಂಪನಿಯು ಸ್ಥಳೀಯ ಕಂಪನಿ ಜಾನ್ ಕಿಲ್ಸ್ ಜೊತೆ ಕೆಲಸ ಮಾಡಿ ಪ್ರಸ್ತುತ ಟರ್ಮಿನಲ್ ನಿರ್ಮಾಣ ಮಾಡಲಿದೆ.