ಹಣೆಗೆ ತಿಲಕ ಹಚ್ಚಿ ಬರುವ ಹಿಂದೂ ವಿದ್ಯಾರ್ಥಿಯನ್ನು ಇತರ ಜನರ ಮೂಲಕ ಅಮಾನುಷವಾಗಿ ಹೊಡೆಸಿದ ಧರ್ಮಾಂಧ ಶಿಕ್ಷಕಿ!

ಪೊಲೀಸರಲ್ಲಿ ದೂರು ದಾಖಲಿಸಿದ ನಂತರ ವಿಚಾರಣೆ ಪ್ರಾರಂಭ!

ಗುಂಪುಗಳಿಂದಾಗುವ ಹೊಡೆದಾಟಗಳಿಂದ ಹಿಂದೂಗಳನ್ನು ಅಸಹಿಷ್ಣು ಎಂದು ನಿರ್ಧರಿಸಿ ಪ್ರಶಸ್ತಿಗಳನ್ನು ಹಿಂತಿರುಗಿಸುವ ಸಾಹಿತಿಗಳು, ನಟರು ಇವರೆಲ್ಲ ಈ ಘಟನೆಯ ಬಗ್ಗೆ ಮಾತ್ರ ಯಾಕೆ ಬಾಯಿಮುಚ್ಚಿಕೊಂಡಿದ್ದಾರೆ? – ಸಂಪಾದಕರು 

ವಿದ್ಯಾರ್ಥಿ ಪವನ ಸೇನ

ರಾಯಸೇನ (ಮಧ್ಯಪ್ರದೇಶ) – ಇಲ್ಲಿನ ಸರಕಾರೀ ಶಾಲೆಯಲ್ಲಿ 8 ನೆಯ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ ಪವನ ಸೇನ ಇವನು ಯಾವಾಗಲೂ ಹಣೆಗೆ ತಿಲಕವನ್ನಿಟ್ಟು ಶಾಲೆಗೆ ಹೋಗುತ್ತಿದ್ದನು. ಅವನಿಗೆ ಮತಾಂಧ ಶಿಕ್ಷಕಿ ನಿಶಾತ ಬೇಗಂ ಇವಳು ಹೊರಗಿನ ಜನರಿಗೆ ಹೇಳಿ ಅಮಾನುಷವಾಗಿ ಹೊಡೆಯುವಂತೆ ಹೇಳಿದ ಘಟನೆಯೊಂದು ಬಹಿರಂಗವಾಗಿದೆ. ಈ ಹೊಡೆತದಿಂದ ಮೂರ್ಛಿತನಾದ ಪವನನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪವನನ ಹೆತ್ತವರು ಪೊಲೀಸರಲ್ಲಿ ದೂರನ್ನು ದಾಖಲಿಸಿದ ನಂತರ ಪೊಲೀಸರು ತಪಾಸಣೆಯನ್ನು ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಶಿಕ್ಷಕಿ ನಿಶಾತ ಬೇಗಂ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದಾಳೆ.

ಪವನನು ಶಾಲೆಗೆ ಹೋಗುವಾದ ದಾರಿಯಲ್ಲಿರುವ ದೇವಸ್ಥಾನಕ್ಕೆ ಹೋಗಿ ಹೋಗುತ್ತಿದ್ದನು. ಅಲ್ಲಿ ಅವನು ಹಣೆಗೆ ತಿಲಕವನ್ನು ಹಚ್ಚುತ್ತಿದ್ದನು. ಅವನಿಗೆ ಶಿಕ್ಷಕಿ ನಿಶಾತ ಬೇಗಂ ಇವಳು ಅನೇಕ ಸಲ ತಿಲಕವನ್ನು ಹಚ್ಚಬಾರದೆಂದು ಹೇಳಿದ್ದಳು. ಆದರೆ ಪವನನು ಮಾತ್ರ ತಿಲಕವನ್ನು ಹಚ್ಚಿಯೇ ಶಾಲೆಗೆ ಬರುತ್ತಿದ್ದನು.