ಶಾಲಾ ವಿದ್ಯಾರ್ಥಿಯನ್ನು ಲೈಂಗಿಕವಾಗಿ ಶೋಷಣೆಗೈದ 27 ವರ್ಷದ ಮಹಿಳೆಗೆ 20 ವರ್ಷಗಳ ಸೆರೆಮನೆ ಶಿಕ್ಷೆ !

* ಇಲ್ಲಿಯವರೆಗಿನ ಎಲ್ಲಾ ಪಕ್ಷದ ಸರಕಾರಗಳು ಜನರಿಗೆ ನೈತಿಕತೆಯ ಶಿಕ್ಷಣ ನೀಡದಿರುವುದೇ, ಇಂತಹ ವಿಕೃತಿಯುಂಟಾಗುವುದರ ಹಿಂದಿನ ಕಾರಣವಾಗಿದೆ ! – ಸಂಪಾದಕರು

* ಪುರುಷರ ಸರಿಸಮಾನವಾಗಿ ಈಗ ಮಹಿಳೆಯರೂ ಲೈಂಗಿಕ ಅತ್ಯಾಚಾರದಲ್ಲಿ ಮಂಚೂಣಿಯಲ್ಲಿದ್ದಾರೆ, ಎಂದು ಇದರ ಬಗ್ಗೆ ಹೇಳಬೇಕೆ ? – ಸಂಪಾದಕರು

ಭಾಗ್ಯನಗರ (ತೆಲಂಗಾಣ) – ಇಲ್ಲಿಯ ಜ್ಯೋತಿ ಮಂಜುಳಾ ಎಂಬ 27 ವರ್ಷದ ಮಹಿಳೆಗೆ ಸಣ್ಣ ಮಕ್ಕಳನ್ನು ಲೈಂಗಿಕ ಶೋಷಣೆಗೈದ ಪ್ರಕರಣದಲ್ಲಿ 20 ವರ್ಷ ಸೆರೆಮನೆ ವಾಸ ಮತ್ತು 20 ಸಾವಿರ ರೂಪಾಯಿ ದಂಡ, ಹೀಗೆ ಶಿಕ್ಷೆ ವಿಧಿಸಲಾಗಿದೆ. ಜ್ಯೋತಿಯ ಮೇಲೆ ಪೋಕ್ಸೋ ಕಾನೂನಿನ ಅಡಿಯಲ್ಲಿ ದೂರನ್ನು ದಾಖಲಿಸಲಾಗಿತ್ತು. ಶೋಷಣೆಗೊಳಗಾದ ಹುಡುಗನು ಓದುತ್ತಿದ್ದ ಶಾಲೆಯಲ್ಲಿ ಜ್ಯೋತಿ ಮಕ್ಕಳನ್ನು ನೋಡಿಕೊಳ್ಳುವ ಆಯಾ ಕೆಲಸ ಮಾಡುತ್ತಿದ್ದಳು. ಹುಡುಗನ ಶರೀರದ ಮೇಲೆ ಸುಟ್ಟಗಾಯಗಳ ಗುರುತು ಕಾಣಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆಯು ಹುಡುಗನಿಗೆ ಸಿಗರೇಟ್‍ನಿಂದ ಸುಟ್ಟಿದ್ದಳು.