ಇಂದೂರನಲ್ಲಿ ‘ಅನಿವಾರ್ಯ’ ಸಂಸ್ಥೆಯ ವತಿಯಿಂದ ಇಡಲಾದ ಶ್ರೀ ಗಣೇಶಮೂರ್ತಿಯ ಕೈಯಲ್ಲಿ ‘ಸ್ಯಾನಿಟರಿ ನ್ಯಾಪ್ ಕಿನ್’ ನೀಡಿ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಅಸಭ್ಯ ಪ್ರಯತ್ನ !

* ಹಿಂದೂಗಳಿಗೆ ಧರ್ಮಶಿಕ್ಷಣವಿಲ್ಲದ ಕಾರಣ, ಹಿಂದೂಗಳು ಯಾವ ಮಟ್ಟಕ್ಕೆ ಹೋಗಿ ದೇವತೆಗಳನ್ನು ಅವಮಾನಿಸುತ್ತಿದ್ದಾರೆ, ಎಂಬುದು ಗಮನಕ್ಕೆ ಬರುತ್ತದೆ ! – ಸಂಪಾದಕರು 

* ಹಿಂದೂಗಳಿಗೆ ಇಲ್ಲಿಯವರೆಗೆ ಹಿಂದೂಗಳ ಸಂಘಟನೆಗಳು, ಧಾರ್ಮಿಕ ಸಂಘಟನೆಗಳು, ಧರ್ಮಗುರುಗಳು ಇವರೆಲ್ಲ ಧರ್ಮಶಿಕ್ಷಣವನ್ನು ನೀಡದಿರುವ ಪರಿಣಾಮವಾಗಿದೆ. ಇತರ ಧರ್ಮಿಯರಿಗೆ ಧರ್ಮಶಿಕ್ಷಣ ಸಿಗುತ್ತಿರುವುದರಿಂದ, ಅವರು ಯಾವತ್ತೂ ತಮ್ಮ ಶ್ರದ್ಧಾಸ್ಥಾನಗಳನ್ನು ಅವಮಾನಿಸುವುದಿಲ್ಲ. ಹಾಗೂ ಯಾರಾದರೂ ಪ್ರಯತ್ನಿಸಿದರೆ, ಅವರು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತಾರೆ ! – ಸಂಪಾದಕರು 

* ಮಾಸಿಕ ಸರದಿಯ ಬಗ್ಗೆ ಜಾಗೃತಿ ಮೂಡಿಸಲು ಕೇವಲ ಹಿಂದೂ ದೇವತೆಗಳು ಮಾತ್ರ ಸಿಕ್ಕಿದರೇನು ? ಬೇರೆ ಏನೂ ಇರಲಿಲ್ಲವೇ ? ಜನಪ್ರಿಯತೆಗಾಗಿ ಈ ರೀತಿಯ ಕೃತಿಯನ್ನು ಮಾಡಿರುವಂತೆ ತೋರುತ್ತದೆ ! ಮಧ್ಯಪ್ರದೇಶದ ಬಿಜೆಪಿ ಸರಕಾರವು ಈ ಬಗ್ಗೆ ಪ್ರಕರಣವನ್ನು ದಾಖಲಿಸಬೇಕು ಮತ್ತು ಅಂತಹವರಿಗೆ ಕಠಿಣ ಶಿಕ್ಷೆಯಾಗಲು ಪ್ರಯತ್ನಿಸಬೇಕು ! – ಸಂಪಾದಕರು 

ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗೆ ನೋವನುಂಟು ಮಾಡುವುದಾಗಿರದೆ, ಮಾಹಿತಿಯನ್ನು ನೀಡುವ ಉದ್ದೇಶದಿಂದ ಪ್ರಕಟಿಸಲಾಗಿದೆ – ಸಂಪಾದಕ

ಇಂದೂರ (ಮಧ್ಯಪ್ರದೇಶ) – ಜಿಲ್ಲೆಯ ಮಹೂ ನಗರದಲ್ಲಿ ಗಣೇಶೋತ್ಸವದ ನಿಮಿತ್ತ ‘ಅನಿವಾರ್ಯ’ ಎಂಬ ಹೆಸರಿನ ಖಾಸಗಿ ಸಂಸ್ಥೆಯಿಂದ ಶ್ರೀ ಗಣೇಶಮೂರ್ತಿಯನ್ನು ಸ್ಥಾಪಿಸಲಾಗಿದೆ. ಈ ಮೂರ್ತಿಯ ಕೈಯಲ್ಲಿ ಮಾಸಿಕ ಸರದಿಯ ಸಮಯದಲ್ಲಿ ಮಹಿಳೆಯರು ಬಳಸುವ ‘ಸ್ಯಾನಿಟರಿ ನ್ಯಾಪ್ ಕಿನ್’ ಇಟ್ಟಿರುವುದರಿಂದ ಹಿಂದೂಗಳಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ‘ಮಾಸಿಕ ಸರದಿಯ ಬಗ್ಗೆ ಜಾಗೃತಿ ನಿರ್ಮಿಸಲು ಹೀಗೆ ಮಾಡಲಾಗಿದೆ’, ಎಂದು ಸಂಸ್ಥೆಯು ಹೇಳುತ್ತಾ ಈ ಹಿಂದೂ ವಿರೋಧಿ ಕೃತ್ಯವನ್ನು ಬಲವಾಗಿ ಬೆಂಬಲಿಸಿದೆ, (‘ಮಾಸಿಕ ಸರದಿಯ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ವಿಧಾನಗಳಿವೆ. ಅವುಗಳನ್ನು ಉಪಯೋಗಿಸದೇ ಹಿಂದೂಗಳ ದೇವತೆಗಳನ್ನು ಬಳಸುವುದು ಮತ್ತು ಅದರ ಅಸಭ್ಯವಾಗಿ ಬೆಂಬಲಿಸುವುದು, ಇದು ಧರ್ಮದ್ರೋಹವೇ ಆಗಿದೆ ! – ಸಂಪಾದಕರು) ‘ಶ್ರೀ ಗಣೇಶನನ್ನು ಒಬ್ಬ ಜವಾಬ್ದಾರಿಯುತ ಪತಿ ಎಂದು ತೋರಿಸಲು ಪ್ರಯತ್ನಿಸಲಾಗಿದೆ’, ಎಂದು ಸಂಸ್ಥೆಯು ಹೇಳಿದೆ. (ಶ್ರೀ ಗಣೇಶ ಜವಾಬ್ದಾರಿಯುತ ಪತಿ ಎಂದು ತೋರಿಸಲು ಆತನ ಕೈಯಲ್ಲಿ ‘ಸ್ಯಾನಿಟರಿ ನ್ಯಾಪ್ ಕಿನ್’ ನೀಡುವ ಅವಶ್ಯಕತೆ ಏನಿದೆ ? ಈ ಸಂಸ್ಥೆಯು ಗಣೆಶೋತ್ಸವದ ಕಾಲದಲ್ಲಿ ಗಣೇಶ ಪುರಾಣ ಇತ್ಯಾದಿ ಗ್ರಂಥಗಳನ್ನು ಓದುವ ಆಯೋಜನೆ ಮಾಡಬಹುದಿತ್ತು, ಹಾಗೂ ಶ್ರೀ ಗಣೇಶನ ವಿವಿಧ ಗುಣಗಳು ಸಮಾಜಕ್ಕೆ ತಿಳಿಯುತ್ತಿತ್ತು. ಸ್ತ್ರೀಮುಕ್ತಿ ಮತ್ತು ಪ್ರಗತಿಪರ ಇವರ ಗಾಳಿ ಬೀಸಿದ್ದರಿಂದಲೇ ‘ಅನಿವಾರ್ಯ’ ಸಂಸ್ಥೆಯು ಈ ರೀತಿಯ ಹುರುಳಿಲ್ಲದ ಹೇಳಿಕೆಯನ್ನು ನೀಡುತ್ತದೆ ! – ಸಂಪಾದಕ) ಈ ಗಣೇಶ ಮೂರ್ತಿಯ ಅಕ್ಕಪಕ್ಕದಲ್ಲಿ ರಿದ್ಧಿ ಮತ್ತು ಸಿದ್ದಿಯನ್ನು ತೋರಿಸಲಾಗಿದೆ. ಈ ಬಗ್ಗೆ ಹಿಂದೂಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರತಿಭಟನೆ ಮಾಡುತ್ತಿದ್ದಾರೆ.

ಈ ಸಂಸ್ಥೆಯ ಸಂಸ್ಥಾಪಕ ಮತ್ತು ಲೇಖಕ ಅಂಕಿತ ಬಾಗಡಿ ಇವರು, ‘ಬಾಹುಬಲಿ’ ಚಿತ್ರದ ಯಶಸ್ಸಿನಿಂದಾಗಿ, ಶ್ರೀ ಗಣೇಶನನ್ನು ‘ಬಾಹುಬಲಿ’ ರೂಪದಲ್ಲಿ ತೋರಿಸಲಾಗಿತ್ತು. ಆ ಸಮಯದಲ್ಲಿ, ಮಾಸಿಕ ಸರದಿಯ ಬಗ್ಗೆ ಅರಿವು ಮೂಡಿಸಲು ಶ್ರೀಗಣೇಶ ಮೂರ್ತಿಯನ್ನು ಉಪಯೋಗಿಸಬೇಕು, ಎಂದು ವಿಚಾರಬಂತು ನಾವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ, ಆದ್ದರಿಂದ ನಾವು ಮಹಿಳಾ ಸ್ವಾತಂತ್ರ್ಯಕ್ಕಾಗಿ ಏನಾದರೂ ಮಾಡಬೇಕು ಎಂದು ಯೋಚಿಸಿದೆವು. (ಮಹಿಳಾ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂದ್ರೋಹ ಮಾಡುವ ಇಂತಹ ಹಿಂದೂಗಳೇ ಹಿಂದೂ ಧರ್ಮದ ನಿಜವಾದ ಶತ್ರುಗಳಾಗಿದ್ದಾರೆ ! – ಸಂಪಾದಕರು)