ತಮಿಳು ಭಾಷೆ ದೇವತೆಗಳಿಗೆ ಸಂಬಂಧಪಟ್ಟಿರುವುದರಿಂದ ಪೂಜೆಯ ಸಮಯದಲ್ಲಿ ಅದರ ಬಳಕೆಯೂ ಆಗಲಿ ! ಮದ್ರಾಸ್ ಉಚ್ಚ ನ್ಯಾಯಾಲಯ

ಭಾಷೆಯ ಗೌರವದ ದೃಷ್ಟಿಯಿಂದ ಹಿಂದೂಗಳ ಭಾಷೆಗಳಲ್ಲಿ ಒಂದಾದ ತಮಿಳು ಭಾಷೆಯನ್ನು ಪುರಸ್ಕರಿಸುವುದು ಯೋಗ್ಯವೇ ಆಗಿದೆ ! ಸಂಸ್ಕೃತ ಭಾಷೆಯು ದೇವಭಾಷೆಯಾಗಿದ್ದು ಧರ್ಮಶಾಸ್ತ್ರ ಹಾಗೂ ಅಧ್ಯಾತ್ಮಶಾಸ್ತ್ರ ಈ ಎರಡೂ ಹಂತಗಳಲ್ಲಿ ಎಲ್ಲಕ್ಕಿಂತ ಸಾತ್ಫ್ವಿಕ ಹಾಗೂ ಉಪಯುಕ್ತ ಭಾಷೆಯಾಗಿದೆ. ಆದ್ದರಿಂದ ಧಾರ್ಮಿಕ ವಿಧಿ ಇತ್ಯಾದಿ ಕೃತಿ ಮಾಡುವಾಗ ಸಂಸ್ಕೃತವನ್ನು ಉಪಯೋಗಿಸುವುದು ಎಲ್ಲಕ್ಕಿಂತ ಸೂಕ್ತವಾಗಿದೆ, ಎಂದು ಹಿಂದೂಗಳಿಗೆ ಅನಿಸುತ್ತದೆ. – ಸಂಪಾದಕರು

ಚೆನ್ನೈ (ತಮಿಳುನಾಡು) – ತಮಿಳು ಜಗತ್ತಿನ ಪುರಾತನ ಭಾಷೆಯಾಗಿದೆ. ಅದೇ ರೀತಿ ಅದು ಈಶ್ವರೀ ಭಾಷೆ ಕೂಡ ಆಗಿದೆ. ತಮಿಳು ಭಾಷೆಯು ಭಗವಾನ ಶಿವನ ಡಮರುವಿನಿಂದ ಉತ್ಪನ್ನವಾಯಿತು. ಪೌರಾಣಿಕ ಕಥೆಗನುಸಾರವಾಗಿ ಶಿವನು ಮೊದಲ ಅಕಾದಮಿಯ (ಪ್ರಥಮ ತಮಿಳು ಸಂಗಮದ) ಅಧ್ಯಕ್ಷಪದವಿಯನ್ನು ನಿರ್ವಹಸಿದರು. ತಮಿಳು ಕವಿಯ ಜ್ಞಾನದ ಪರೀಕ್ಷೆಗಾಗಿ ಥಿರುವಿಲಯಾದಲ ಎಂಬ ಆಟವನ್ನು ಶಿವನು ಆಡಿದನು. ಅಂದರೆ ತಮಿಳು ಭಾಷೆಯು ದೇವತೆಗಳಿಗೆ ಸಂಬಂಧಪಟ್ಟಿದೆ. ಪೂಜೆ ಹಾಗೂ ಪಠಣ ಮಾಡುವಾಗ ಅಂತಹ ಈಶ್ವರೀಯ ಭಾಷೆಯ ಬಳಕೆಯಾಗಬೇಕು ಎಂದು ಮದ್ರಾಸ್ ಉಚ್ಚ ನ್ಯಾಯಾಲಯವು ಒಂದು ಅರ್ಜಿಯ ಆಲಿಕೆಯ ಸಮಯದಲ್ಲಿ ಸ್ಪಷ್ಟ ಪಡಿಸಿದೆ.

ನ್ಯಾಯಾಲಯವು ಮುಂದಿನಂತೆ ಹೇಳಿದೆ,

೧. ವಾಸ್ತವದಲ್ಲಿ ವಿವಿಧ ದೇಶ, ಧರ್ಮ, ವಿವಿಧ ಪರಂಪರೆಗಳು ಅಸ್ತಿತ್ವದಲ್ಲಿದ್ದವು ಹಾಗೂ ಪೂಜೆಯ ಪದ್ಧತಿ ಕೂಡ ಸಂಸ್ಕೃತಿ ಹಾಗೂ ಧರ್ಮಾನುಸಾರವಾಗಿ ಬದಲಾಗುತ್ತಿತ್ತು; ಆದರೆ ಕೇವಲ ‘ಸಂಸ್ಕೃತವನ್ನು ಮಾತ್ರ ಈಶ್ವರನ ಭಾಷೆ’ ಎಂದು ತಿಳಿಯಲಾಯಿತು. ‘ಸಂಸ್ಕೃತಕ್ಕೆ ಹೋಲಿಸುವಂತಹ ಭಾಷೆಯಿಲ್ಲ. ಸಂಸ್ಕೃತ ಪ್ರಾಚೀನ ಭಾಷೆಯಾಗಿದೆ. ಅದರಲ್ಲಿ ಅನೇಕ ಪುರಾತನ ಸಾಹಿತ್ಯಗಳ ರಚನೆಯಾಗಿದೆ, ಎಂಬ ವಿಷಯದಲ್ಲಿ ಎರಡು ಮಾತಿಲ್ಲ; ಆದರೆ ಈಶ್ವರನ ಅನುಯಾಯಿಗಳು ಪ್ರಾರ್ಥಿಸುವಾಗ ಕೇವಲ ಸಂಸ್ಕೃತದಲ್ಲಿನ ವೇದಗಳ ಪಠಣ ಮಾಡಿದ ಬಳಿಕವೇ ಅವನು ಕೇಳುತ್ತಾನೆ, ಎಂಬ ನಿಲುವಾಗಿದೆ.

೨. ಜನಸಾಮಾನ್ಯರು ಆಡುವಂತಹ ಪ್ರತಿಯೊಂದು ಭಾಷೆಯೂ ಈಶ್ವರೀ ಭಾಷೆಯಾಗಿದೆ. ಮನುಷ್ಯನು ಭಾಷೆಯನ್ನು ತಯಾರಿಸಲು ಸಾಧ್ಯವಿಲ್ಲ. ಭಾಷೆಯು ಹಲವಾರು ಶತಮಾನಗಳಿಂದ ಅಸ್ತಿತ್ವದಲ್ಲಿದೆ. ಭಾಷೆಯು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಹೋಗುತ್ತದೆ. ವರ್ತಮಾನ ಭಾಷೆಯಲ್ಲಿ ಅದರಲ್ಲಿ ಕೇವಲ ಸುಧಾರಣೆಗಳಾಗಬಹುದು. ಭಾಷೆಯ ನಿರ್ಮಾಣವಾಗಲು ಸಾಧ್ಯವಿಲ್ಲ.