ಧಾರ (ಮಧ್ಯಪ್ರದೇಶ) ಹನುಮಂತ ದೇವಸ್ಥಾನದ ಅರ್ಚಕನನ್ನು ಅಜ್ಞಾತರು ಅಮಾನುಷವಾಗಿ ಹೊಡೆದು ಹತ್ಯೆ!

ಭಾಜಪದ ಆಡಳಿತವಿರುವ ರಾಜ್ಯದಲ್ಲಿ ಈ ರೀತಿ ಅರ್ಚಕರ ಹತ್ಯೆಯಾಗುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ! – ಸಂಪಾದಕರು 

ಧಾರ (ಮಧ್ಯಪ್ರದೇಶ) – ಧಾರ ಜಿಲ್ಲೆಯ ಜ್ಞಾನಪುರದಲ್ಲಿರುವ ಹನುಮಂತ ದೇವಾಲಯದಲ್ಲಿ ಅರ್ಚಕರಾಗಿದ್ದ 65 ವರ್ಷದ ಅರುಣದಾಸರನ್ನು ಅಜ್ಞಾತರು ಅಮಾನುಷವಾಗಿ ಹೊಡೆದು ಹತ್ಯೆ ಮಾಡಿದ್ದಾರೆ. ದೇವಾಲಯದ ಅರ್ಚಕರನ್ನು ಕಾಪಾಡಲು ಬಂದ ದೇವಾಲಯದ ಕಾವಲುಗಾರನು ಗಾಯಗೊಂಡಿದ್ದಾನೆ.

ಸಪ್ಟೆಂಬರ 12 ರಂದು ದೇವಾಲಯದ ಸಮೀಪದಲ್ಲಿದ್ದ ಕೆಲವರನ್ನು ಅರ್ಚಕ ಅರುಣದಾಸರವರು ‘ಇಲ್ಲಿ ನೀವೇನು ಮಾಡುತ್ತಿರುವಿರಿ?’, ಎಂದು ವಿಚಾರಿಸಿದ್ದಕ್ಕೆ ಅವರು ಅರ್ಚಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೋಲುಗಳಿಂದ ಅಮಾನುಷವಾಗಿ ಹೊಡೆದರು. ಅದೇ ಸಮಯದಲ್ಲಿ ಅವರನ್ನು ಕಾಪಾಡಲು ಬಂದ ಕಾವಲುಗಾರ ರಾಹುಲರವರನ್ನು ಸಹ ಹೊಡೆದಿದ್ದಾರೆ. ಆ ಊರಿನವರು ಗಾಯಗೊಂಡ ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಿದರು. ಅಲ್ಲಿ ಅರ್ಚಕ ಅರುಣದಾಸರು ಕೊನೆಯುಸಿರೆಳೆದರು. ಮೂಲತಃ ಉತ್ತರ ಪ್ರದೇಶದವರಾದ ಅರುಣದಾಸರವರು ಕಳೆದ 6-7 ವರ್ಷಗಳಿಂದ ದೇವಾಲಯದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು.