ಸೂರತ (ಗುಜರಾತ) – ರಾಜ್ಯದ ಖೇಡಾ ಜಿಲ್ಲೆಯಲ್ಲಿರುವ ಹಾಗೂ ಮಾಹಿ ಮತ್ತು ಗಲತಿ ಎಂಬ ನದಿಯ ಸಂಗಮದಲ್ಲಿರುವ ಪ್ರಾಚೀನ ಗಲತೇಶ್ವರ ಮಹಾದೇವ ದೇವಸ್ಥಾನವು ಇತ್ತೀಚೆಗೆ ಜೀರ್ಣೋದ್ಧಾರಗೊಂಡಿದೆ. 12 ನೇ ಶತಮಾನದ ಈ ದೇವಸ್ಥಾನದ ಮೇಲೆ 75 ಅಡಿ ಎತ್ತರದ ಗೋಪುರವನ್ನು ನಿರ್ಮಿಸಲಾಗಿದೆ. ಶ್ರಾವಣ ಮಾಸದ ಕೊನೆಯ ದಿನದಂದು ಅಂದರೆ ಸೋಮವತಿ ಅಮಾವಾಸ್ಯೆಯಂದು ಈ ಗೋಪುರದ ಮೇಲೆ ಸಂತ-ಮಹಂತರ ಉಪಸ್ಥಿತಿಯಲ್ಲಿ 52 ಗಜ (150 ಅಡಿ) ಹಿಂದೂ ಧ್ವಜವನ್ನು ಹಾರಿಸಲಾಯಿತು.
Gujarat: ASI restores Shikhara of ancient Galteshwar Mahadev temple, flag hoisted for the first time in centurieshttps://t.co/GEU2gBqqZz
— OpIndia.com (@OpIndia_com) September 8, 2021
1. ಈ ದೇವಸ್ಥಾನವು ಸೊಳಂಕಿ ಯುಗದ್ದಾಗಿದೆ ಎಂದು ತಿಳಿದುಬರುತ್ತದೆ. ಭಾರತದ ಪುರಾತತ್ವ ಇಲಾಖೆಯು ಮುದ್ರಿಸಿದ ಮಾಹಿತಿಗನುಸಾರ ಈ ದೇವಸ್ಥಾನದ ಶೈಲಿ ಮತ್ತು ಮೂರ್ತಿಕಲೆಗೂ ಪ್ರಾಚೀನ ಸೋಮನಾಥ ದೇವಸ್ಥಾನದ ಶೈಲಿಗೂ ಬಹಳ ಹೋಲಿಕೆಯಿದೆ. ಈ ದೇವಸ್ಥಾನದ ಕಟ್ಟಡಕಾಮಗಾರಿಯಲ್ಲಿ ಮಾಳವಾ ಮತ್ತು ಚಾಲುಕ್ಯ ಶೈಲಿಯ ಅತ್ಯಂತ ಸುಂದರ ಪದ್ಧತಿಯ ಮಿಶ್ರಣವು ಕಂಡುಬರುತ್ತದೆ.
2. ದೇವಸ್ಥಾನದ ವ್ಯವಸ್ಥಾಪಕ ರಾಮದೇಸ ಮಹಾರಾಜ ಇವರು, ‘ಪ್ರಧಾನಿ ನರೇಂದ್ರ ಮೋದಿ ಇವರು ಈ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಅನುಮತಿ ನೀಡಿದ್ದರು. ಈ ಸ್ಥಳವು ಡಾಕೋರ ಎಂಬ ಮುಖ್ಯ ತೀರ್ಥಕ್ಷೇತ್ರಕ್ಕೆ ಸಮೀಪವಿರುವುದರಿಂದ ಈ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ಜನಜಂಗುಳಿ ಇರುತ್ತದೆ,’ ಎಂದು ಹೇಳಿದರು.