ಕೊರೊನಾದ ಮೂರನೆಯ ಅಲೆ ಬರುವ ಸಾಧ್ಯತೆ ನಗಣ್ಯವಾಗಿದೆ

ಭಾರತೀಯ ವೈದ್ಯಕೀಯ ಸಂಶೋಧನೆ ಪರಿಷತ್ತಿನ (ಐ.ಸಿ. ಎಂ.ಆರ್. ನ) ಮಾಜಿ ವಿಜ್ಞಾನಿ ಡಾ. ರಮಣ ಗಂಗಾಖೇಡಕರ ಇವರ ದಾವೆ

ಮಾಜಿ ವಿಜ್ಞಾನಿ ಡಾ. ರಮಣ ಗಂಗಾಖೇಡಕರ

ನಾಗಪುರ – ಕೊರೊನಾದ ಮೊದಲನೇ ಅಲೆ ಮುಗಿದು ಎರಡನೇ ಅಲೆ ಮುಗಿಯುವ ಸ್ಥಿತಿ ಇರುವಾಗ ಮೂರನೆಯ ಅಲೆ ಬರುವ ಸಾಧ್ಯತೆಯ ಬಗ್ಗೆ ಹೇಳಲಾಗುತ್ತಿದೆ. ಆದರೆ ದೇಶದಲ್ಲಿ ಮೂರನೆಯ ಅಲೆ ಬರುವ ಸಾಧ್ಯತೆ ನಗಣ್ಯವಾಗಿದೆ, ಹೀಗೆಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ ಮಾಜಿ ವಿಜ್ಞಾನಿ ಡಾ. ಗಂಗಾಖೇಡಕರ ಇವರು ಪ್ರತಿಪಾದಿಸಿದ್ದಾರೆ. ಏನಾದರೂ ಮೂರನೇ ಅಲೆ ಬಂದರೆ, ಅದು ಎರಡನೆಯ ಅಲೆಯ ತುಲನೆಯಲ್ಲಿ ಬಹಳ ದುರ್ಬಲವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.

ಡಾ. ಗಂಗಾಖೇಡಕರ ಇವರು ಮಾತನ್ನು ಮುಂದುವರೆಸುತ್ತಾ ಹೀಗೆಂದಿದ್ದಾರೆ

1. ಶಾಲೆಗಳನ್ನು ಮತ್ತೆ ತೆರೆಯುವ ನಿರ್ಣಯವನ್ನು ಗಡಿಬಿಡಿಯಲ್ಲಿ ತೆಗೆದುಕೊಳ್ಳಬಾರದು. ಏಕೆಂದರೆ ಚಿಕ್ಕ ಮಕ್ಕಳಲ್ಲಿ ಕೊರೊನಾದ ಪ್ರಭಾವ ಬಹಳ ಕಾಲದವರೆಗೂ ಇರುತ್ತದೆ, ಹೀಗೆ ಅಧ್ಯಯನದಿಂದ ತಿಳಿದುಬಂದಿದೆ. ಆದಕಾರಣ ಶಾಲೆಯನ್ನು ತೆರೆಯುವ ನಿರ್ಣಯ ತೆಗೆದುಕೊಳ್ಳಬೇಕಾದರೆ ಯೋಚನೆ ಮಾಡುವ ಅಗತ್ಯವಿದೆ.

2. ಅನೇಕ ವಿಜ್ಞಾನಿಗಳ ಪ್ರಕಾರ, ಕೊರೊನಾ ಇನ್ನು ಮುಂದೆ ನಿಯಮಿತ ವಿಷಾಣು ಆಗಬಹುದು, ಯಾರು ಎರಡು ಡೋಸ್ ಲಸಿಕೆಗಳನ್ನು ತೆಗೆದುಕೊಂಡಿರುವರೋ, ಅವರಿಗೆ ಕೊರೊನಾ ಸೊಂಕು ತಗಲಿದರೂ ಲಕ್ಷಣಗಳು ಕಾಣುವುದಿಲ್ಲ. ಆದರೆ ಕಡಿಮೆ ಲಕ್ಷಣಗಳು ಕಾಣಿಸಬಹುದು. ಆದಕಾರಣ ಲಸಿಕೆ ತೆಗೆದುಕೊಂಡ ನಂತರ ಕೂಡ ಮಾಸ್ಕ್ ಧರಿಸುವುದು ಮತ್ತು ಸುರಕ್ಷಿತ ಅಂತರದ ಪಾಲನೆ ಮಾಡುವುದು ಆವಶ್ಯಕವಾಗಿದೆ.

3. ಲಸಿಕೆಯು ವಿಷಾಣುವಿನ ಸೊಂಕನ್ನು ತಡೆಗಟ್ಟಲಾರದು. ಆದರೆ ಅಪಾಯದ ಪ್ರಮಾಣವನ್ನು ಅಲ್ಪಗೊಳಿಸುತ್ತದೆ. ಎಲ್ಲಿಯವರೆಗೂ ಕೊರೊನಾದ ಯಾವುದೇ ಹೊಸ ವಿಧ ಬರುವುದಿಲ್ಲವೋ ಅಲ್ಲಿಯವರೆಗೂ ಲಸಿಕೆಯ ಪ್ರಭಾವ ಕಡಿಮೆ ಆಗುವುದಿಲ್ಲ. ಅಲ್ಲಿಯವರೆಗೂ ಕೊರೊನಾದ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ಹೆದರುವ ಅವಶ್ಯಕತೆ ಇಲ್ಲ. ವಿಷಾಣುವಿನ ಪ್ರಸಾರವು ಯಾವ ಸ್ಥಳದಲ್ಲಿ ಮೊದಲ ಮತ್ತು ಎರಡನೆಯ ಅಲೆಯ ಪ್ರಭಾವವು ಅಲ್ಪವಾಗಿತ್ತು, ಅಲ್ಲಿ ಇರಬಹುದು. ಕೊರೊನಾ ವಿಷಾಣುವಿನ ಲಸಿಕೆ ಯಾರು ಹಾಕಿಸಿಕೊಂಡಿಲವೋ  ಅವರನ್ನು ಗುರಿ ಮಾಡಬಹುದು.