‘ಇಕೋ ಫ್ರೆಂಡ್ಲಿ’ಯ ಹೆಸರಿನಲ್ಲಿ ಹಿಂದೂ ಧರ್ಮದ ಮೇಲೆ ಆಘಾತ !

ಲೂಧಿಯಾನಾ (ಪಂಜಾಬ) ಇಲ್ಲಿಯ ಬೇಕರಿ ವ್ಯಾಪಾರಿಯೊಬ್ಬರಿಂದ ‘ಇಕೋ ಫ್ರೆಂಡ್ಲಿ’ ಎಂದು ಚಾಕಲೇಟಿನ ಶ್ರೀ ಗಣಪತಿ ಮೂರ್ತಿ ತಯಾರಿಕೆ !

ಕಳೆದ ಕೆಲವು ವರ್ಷಗಳಿಂದ ‘ಇಕೋ ಫ್ರೆಂಡ್ಲಿ’ ಹಬ್ಬವನ್ನು ಆಚರಿಸುವ ರೂಢಿಗಳನ್ನು ಉದ್ದೇಶಪೂರ್ವಕವಾಗಿ ಕೇವಲ ಹಿಂದೂ ಧರ್ಮದವರ ಹಣೆಗೆ ಮೆತ್ತುತ್ತಿದ್ದಾರೆ. ಮತ್ತೊಂದೆಡೆ ಮಾತ್ರ ಮೊಹರಂ, ಬಕರಿ ಈದ್ ಮುಂತಾದ ಹಬ್ಬಗಳು ಅವರ ಧರ್ಮಕ್ಕನುಸಾರ ಪರಿಸರವನ್ನು ಧಿಕ್ಕರಿಸಿ ಆಚರಿಸಲಾಗುತ್ತದೆ. ಈ ಬಗ್ಗೆ ಮಾತ್ರ ಯಾರು ಏನು ಮಾತನಾಡುವುದಿಲ್ಲ. ಯಾರಾದರೂ ಮಾತನಾಡಲು ಪ್ರಯತ್ನಿಸಿದರೆ ಅವರನ್ನು ‘ಮತಾಂಧ’ ಎಂದು ಟೀಕಿಸಿ ನಿರ್ಲಕ್ಷಿಸಲಾಗುತ್ತದೆ, ಎಂಬುದನ್ನು ಗಮನದಲ್ಲಿಡಿ !

ಲುಧಿಯಾನಾ (ಪಂಜಾಬ) – ಇಲ್ಲಿಯ ಬೇಕರಿ ವ್ಯಾಪಾರಿ ಹರಜಿಂದರ ಸಿಂಹ ಕುಕರೇಜಾ ಇವರು ಶ್ರೀ ಗಣೇಶಚತುರ್ಥಿಯ ನಿಮಿತ್ತ ಚಾಕಲೇಟಿನ ಶ್ರೀ ಗಣೇಶಮೂರ್ತಿಯನ್ನು ತಯಾರಿಸಿದ್ದಾರೆ. ಈ ಮೂರ್ತಿಯನ್ನು ನೋಡಲು ಹೆಚ್ಚಿನ ಸಂಖ್ಯೆಯ ಜನರು ಬೇಕರಿಯ ಮುಂದೆ ಸೇರುತ್ತಿದ್ದಾರೆ. ‘ಇಕೋ ಫ್ರಂಡ್ಲಿ’ ಎಂದು ಇವರು ಈ ಮೂರ್ತಿಯನ್ನು ತಯಾರಿಸಿರುವುದಾಗಿ ಹೇಳಿದ್ದಾರೆ. ಅವರು ಕಳೆದ ಆರು ವರ್ಷಗಳಿಂದ ಚಾಕೆಲೇಟಿನ ಮೂರ್ತಿ ಮಾಡುತ್ತಿದ್ದಾರೆ. ಕುಕರೆಜಾ ಅವರು ಈ ಬಗ್ಗೆ ಹೇಳುತ್ತಾ, “ಇಕೋ ಫ್ರೆಂಡ್ಲಿ’ ಪದ್ಧತಿಯಿಂದ ಗಣೇಶೋತ್ಸವವನ್ನು ಆಚರಿಸಬಹುದು’, ಹೀಗೊಂದು ಸಂದೇಶವನ್ನು ನಾವು ಈ ಮೂಲಕ ಕೊಡಬಯಸುತ್ತೇವೆ”, ಎಂದಿದ್ದಾರೆ. ‘ಪರಿಸರ ಮಾಲಿನ್ಯವಾಗುವ ಗಣೇಶಮೂರ್ತಿಗಳನ್ನು ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಬೇಕೆಂದು ಕರೆ ನೀಡಿದರು. (‘ಪರಿಸರಕ್ಕೆ ಹಾನಿಯಾಗುವ ಬಕರಿ ಈದ್ ಆಚರಿಸಬೇಡಿ’, ಎಂದು ಹೇಳುವ ಧೈರ್ಯ ಕುಕಾರೇಜಾ ನೀಡಬಹುದೇ ? – ಸಂಪಾದಕರು)