ಪ್ರತಿಯೊಂದು ಮನೆಯಲ್ಲಿ ಅನುಮತಿ ಪಡೆದ ಶಸ್ತ್ರಗಳನ್ನು ಇಟ್ಟುಕೊಳ್ಳಬೇಕು ! – ಮಧ್ಯಪ್ರದೇಶದ ಶಾಸಕಿ ಊಷಾ ಠಾಕುರ ಇವರ ಕರೆ

  • ಸಮಾಜದಲ್ಲಿ ಕೊಲೆ, ಅತ್ಯಾಚಾರ ಇವುಗಳ ಪ್ರಮಾಣವು ಹೆಚ್ಚುತ್ತಿದೆ. ಇದನ್ನು ತಡೆಯಲು ಸರಕಾರಿ ವ್ಯವಸ್ಥೆ ವಿಫಲವಾಗಿದೆ, ಇದನ್ನು ಗಮನಕ್ಕೆ ತೆಗೆದುಕೊಂಡು ಈಗ ಸಮಾಜವೇ ತನ್ನ ರಕ್ಷಣೆ ಮಾಡಿಕೊಳ್ಳಲು ಸಿದ್ಧರಾಗುವ ಅವಶ್ಯಕತೆಯಿದೆ !
  • ಬಹಳಷ್ಟು ಮತಾಂಧರ ಹತ್ತಿರ ಅನುಮತಿ ಇಲ್ಲದ ಶಸ್ತ್ರಗಳಿವೆ ಮತ್ತು ಅದನ್ನು ಹಿಂದೂಗಳ ಮೇಲೆ ದಾಳಿ ಮಾಡಲು ಉಪಯೋಗಿಸುತ್ತಾರೆ, ಇದನ್ನು ತಡೆಯಲು ಸರಕಾರವು ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

ಭೋಪಾಲ(ಮಧ್ಯ ಪ್ರದೇಶ) – ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚುತ್ತಿರುವ ಅಪಾಯವನ್ನು ನೋಡುತ್ತಿದ್ದರೆ ಪ್ರತಿಯೊಂದು ಮನೆಗೆ ಅನುಮತಿ ಇರುವ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳುವ ಅವಶ್ಯಕತೆ ಇದೆ ಎಂದು ಮಧ್ಯಪ್ರದೇಶದ ರಾಜ್ಯ ಸಚಿವೆ ಉಷಾ ಠಾಕೂರ ಇವರು ಹೇಳಿದ್ದಾರೆ. ಅವರು ಅಲ್ಲಿಯ ಒಂದು ಸಮಾರಂಭದಲ್ಲಿ ಮಾತನಾಡುತ್ತಿದ್ದರು. ‘ಮಕ್ಕಳಿಗೆ ಸಂಸ್ಕಾರ ಕೊಡುವುದು ಮತ್ತು ಕುಟುಂಬಕ್ಕೆ ಉತ್ತಮ ಆರೋಗ್ಯ ಕೊಡಲು ಆಧ್ಯಾತ್ಮಿಕ ಶಿಕ್ಷಣ ಮತ್ತು ನಿಯಮಿತ ಪೂಜೆ ಯಜ್ಞ ಇವೆಲ್ಲವುಗಳನ್ನು ಮಾಡಬೇಕು’, ಎಂದು ಕೂಡ ಸಲಹೆಯನ್ನು ನೀಡಿದರು.

ಉಷಾ ಠಾಕೂರ ಇವರು, ಕೇಸರಿ ಬಣ್ಣ ಇದು ಶಾಂತಿಯ ಪ್ರತೀಕವಾಗಿದೆ. ಅದರಿಂದ ಸಂಪೂರ್ಣ ಜಗತ್ತೇ ಕೇಸರಿಯಾದರೆ ಎಲ್ಲೆಡೆ ಆನಂದ ಮತ್ತು ಶಾಂತಿಯ ವಾತಾವರಣವಿರುತ್ತದೆ ಎಂದು ಸಹ ಹೇಳಿದರು.