‘ಬ್ರಾಹ್ಮಣರನ್ನು ನಿಮ್ಮ ಊರಿಗೆ ಬರಲು ಬಿಡಬೇಡಿ’, ಎಂದು ಕರೆ ನೀಡಿದ ಛತ್ತೀಸಗಡ ಕಾಂಗ್ರೆಸ ಸರಕಾರದ ಮುಖ್ಯಮಂತ್ರಿ ಭೂಪೇಶ ಬಘೇಲರ ತಂದೆಯ ಬಂಧನ !

ಇಂತಹ ಜಾತಿದ್ವೇಷದಿಂದಲೇ ಭಾರತದಲ್ಲಿ ಜಾತಿಪಾತಿಗಳು ಇನ್ನೂ ಕೂಡ ಹಾಗೆಯೇ ಉಳಿದಿದೆ. ಜಾತಿಪಾತಿಯನ್ನೇನಾದರೂ ನಾಶ ಮಾಡಬೇಕೆಂದರೆ ಆ ರೀತಿಯ ಸೇಡುಬುದ್ಧಿಯ ಮಾನಸಿಕತೆಯನ್ನು ಮೊದಲು ನಾಶ ಮಾಡುವುದು ಅಗತ್ಯ !

ರಾಯಪೂರ (ಛತ್ರೀಸಗಡ) – ನಾನು ಭಾರತದಲ್ಲಿನ ಎಲ್ಲಾ ಊರಿನವರಿಗೂ ಕರೆ ನೀಡುವುದೇನೆಂದರೆ ಬ್ರಾಹ್ಮಣರನ್ನು ನಿಮ್ಮ ಮನೆಗೆ ಬರಲು ಬಿಡಬೇಡಿರಿ. ನಾನು ಎಲ್ಲಾ ಸಮುದಾಯದವರೊಂದಿಗೆ ಈ ವಿಷಯವಾಗಿ ಮಾತನಾಡುವೆನು, ಇದರಿಂದ ನಾವು ಅವರ ಮೇಲೆ ಬಹಿಷ್ಕರಿಸಬಹುದು. ಬ್ರಾಹ್ಮಣರನ್ನು ‘ವ್ಹೋಲ್‌ಗಾ ನದಿಯ ತೀರಕ್ಕೆ ವಾಪಸ್ಸು ಕಳುಹಿಸುವ ಅವಶ್ಯಕತೆಯಿದೆ ಎಂದು ಛತ್ರೀಸಗಡ ರಾಜ್ಯದ ಕಾಂಗ್ರೆಸ ಸರಕಾರದ ಮುಖ್ಯಮಂತ್ರಿ ಭೂಪೇಶ ಬಘೇಲರ ತಂದೆ ನಂದಕುಮಾರ ಬಘೇಲರವರು ಇತ್ತೀಚೆಗೆ ಹೇಳಿಕೆಯನ್ನು ನೀಡಿದ್ದರು. (‘ವ್ಹೋಲಗಾ ನದಿ ರಶ್ಶಿಯಾದಲ್ಲಿದ್ದು ಯುರೋಪಿನಲ್ಲಿ ಅತ್ಯಂತ ದೊಡ್ಡ ನದಿಯೆಂದು ಗುರುತಿಸಲ್ಪಡುತ್ತದೆ.) ಈ ಪ್ರಕರಣದ ಮೇರೆಗೆ ಅವರ ಮೇಲೆ ಅಪರಾಧ ದಾಖಲಿಸಿಕೊಂಡ ಬಳಿಕ ಅವರನ್ನು ಅಲ್ಲಿಯ ಪೊಲೀಸರು ಬಂಧಿಸಿದ್ದಾರೆ. ಅವರಿಗೆ ೧೪ ದಿನಗಳ ನ್ಯಾಯಾಂಗ ಬಂಧನ ಇರಿಸುವಂತೆ ನ್ಯಾಯಾಲಯವು ಆದೇಶಿಸಿದೆ. ನಂದ ಕುಮಾರ ಬಘೆಲರು ಉತ್ತರಪ್ರದೇಶದ ಒಂದು ಕಾರ್ಯಕ್ರಮದಲ್ಲಿ ಈ ರೀತಿಯ ಹೇಳಿಕೆಯನ್ನು ನೀಡಿದ್ದರು.

ನನ್ನ ತಂದೆಯೇ ಆಗಿದ್ದರೂ ಕಾನೂನಿಗಿಂತ ಮೇಲಿನವರಲ್ಲ ! ಮುಖ್ಯಮಂತ್ರಿ ಭೂಪೇಶ ಬಘೇಲ

ಈ ವಿಷಯವಾಗಿ ಮುಖ್ಯಮಂತ್ರಿ ಭೂಪೇಶ ಬಘೇಲರವರು ಹೀಗೆಂದಿದ್ದಾರೆ, ಈ ದೇಶದಲ್ಲಿ ಕಾನೂನೇ ಸರ್ವೋಚ್ಚವಾಗಿದೆ. ಯಾರೂ ಕಾನೂನಿಗಿಂತ ಮೇಲಿನವರಲ್ಲ. ನನ್ನ ತಂದೆಗೆ ೮೬ ವರ್ಷವಾಗಿದ್ದರೂ ಅವರು ಒಂದು ನಿರ್ದಿಷ್ಟ ಸಮುದಾಯದ ವಿರುದ್ಧ ಟಿಪ್ಪಣಿ ಮಾಡಿದ್ದಾರೆ. ಅವರು ಸಾಂಪ್ರದಾಯಿಕ ಶಾಂತಿಯನ್ನು ಭಂಗ ಮಾಡಿದ್ದು ಅವರ ಹೇಳಿಕೆಯಿಂದ ನನಗೂ ದುಃಖವಾಗಿದೆ. ನನ್ನ ಹಾಗೂ ನನ್ನ ತಂದೆಯ ರಾಜಕೀಯ ವಿಚಾರಗಳು ಮತ್ತು ವಿಶ್ವಾಸ ವಿಭಿನ್ನವಾಗಿದೆ. ಒಬ್ಬ ಮಗನಾಗಿ ನಾನು ಅವರಿಗೆ ಗೌರವ ನೀಡ ಬಹುದು; ಆದರೆ ಈ ರೀತಿ ತಪ್ಪು ಮಾಡಿದ ಬಳಿಕ ನಾನು ಅವರನ್ನು ಕ್ಷಮಿಸಲಾರೆ. ಆದ್ದರಿಂದ ರಾಜ್ಯದಲ್ಲಿನ ಸಾರ್ವಜನಿಕ ಸುವ್ಯವಸ್ಥೆ ಬಿಗಡಾಯಿಸುವ ಸಾಧ್ಯತೆಯಿದೆ.