|
ಮಹಾರಾಷ್ಟ್ರದ ಉಪರಾಜಧಾನಿಯಲ್ಲಿ ಈ ರೀತಿಯ ಘಟನೆಗಳಾಗುವುದು ಹಿಂದೂಗಳಿಗೆ ಲಜ್ಜಾಸ್ಪದ ! – ಸಂಪಾದಕರು
ನಾಗಪುರ – ಇಲ್ಲಿನ ‘ಸಿವ್ಹಿಲ ಲಾಯಿನ್ಸ ಭಾಗದಲ್ಲಿ ‘ವಾಕರ್ಸ್ ಸ್ಟ್ರೀಟ್ನಲ್ಲಿ ಸಪ್ಟೆಂಬರ ೪ರಂದು ಮುಂಜಾನೆ ೫ ರಿಂದ ಬೆಳಿಗ್ಗೆ ೬ ಘಂಟೆಯ ಸಮಯದಲ್ಲಿ ಕೆಲವು ಬುರಖಾಧಾರೀ ಮಹಿಳೆಯರು ಹೊಗುವ-ಬರುವ ಹಿಂದು ಯುವತಿಯರನ್ನು ಸುತ್ತುಗಟ್ಟಿ ಪತ್ರಕಗಳನ್ನು ವಿತರಣೆ ಮಾಡುತ್ತಿದ್ದರು, ಹಾಗೂ ಅವರನ್ನು ಹಿಜಾಬ ಧರಿಸಲು ಹೇಳುತ್ತಿದ್ದರು ಎಂಬ ಆಘಾತಕಾರಿ ಘಟನೆಯು ಬೆಳಕಿಗೆ ಬಂದಿದೆ. ಇದು ಕೆಲವು ಜಾಗರೂಕ ನಾಗರಿಕರ ಗಮನಕ್ಕೆ ಬಂದ ತಕ್ಷಣ ಅವರು ಆ ಮಾಹಿತಿಯನ್ನು ವಿಶ್ವ ಹಿಂದು ಪರಿಷತ್ತಿನ ಕಾರ್ಯಕರ್ತರಿಗೆ ತಿಳಿಸಿದರು. (ಧರ್ಮರಕ್ಷಣೆಗಾಗಿ ಎಚ್ಚರಿಕೆಯಿಂದಿರುವ ನಾಗರಿಕರಿಗೆ ಅಭಿನಂದನೆಗಳು ! – ಸಂಪಾದಕರು) ಕಾರ್ಯಕರ್ತರು ಘಟನಾಸ್ಥಳಕ್ಕೆ ಆಗಮಿಸಿ ಬುರಖಾಧಾರೀ ಮಹಿಳೆಯರನ್ನು ಗದರಿಸಿದರು. (ಬುರಖಾಧಾರೀ ಮಹಿಳೆಯರನ್ನು ಆಗಲೇ ಗದರಿಸಿ ಧರ್ಮಹಾನಿಯನ್ನು ತಡೆಗಟ್ಟಿದ ವಿಶ್ವಹಿಂದೂ ಪರಿಷತ್ತಿನ ಕಾರ್ಯಕರ್ತರಿಗೆ ಅಭಿನಂದನೆಗಳು ! – ಸಂಪಾದಕರು) ಪ್ರಕರಣವು ತಮ್ಮ ಮೈ ಮೇಲೆ ಬರಲಿದೆ, ಎಂಬುದು ಗಮನಕ್ಕೆ ಬಂದ ತಕ್ಷಣ ಮಹಿಳೆಯರು ಅಲ್ಲಿಂದ ಸ್ವಲ್ಪ ಅಂತರದಲ್ಲಿ ನಿಂತುಕೊಂಡಿದ್ದ ಕೆಲವು ಯುವಕರ ದ್ವಿಚಕ್ರ ವಾಹನದ ಮೇಲೆ ಕುಳಿತುಕೊಂಡು ಅಲ್ಲಿಂದ ಪಲಾಯನ ಮಾಡಿದರು.
Maharashtra: Muslim women distribute pamphlets, get minor non-Muslim girls to wear hijab in Nagpur near CM house https://t.co/d31qZm3ViG
— OpIndia.com (@OpIndia_com) September 5, 2021
೧. ವಿಶ್ವಹಿಂದು ಪರಿಷತ್ತಿನ ಕಾರ್ಯಕರ್ತರು ಬೈದದ್ದರಿಂದ ಮಹಿಳೆಯರು ಹಾರಿಕೆಯ ಉತ್ತರವನ್ನು ನೀಡಿದರು, ಹಾಗೂ ಅಮಾಯಕರಂತೆ ವರ್ತಿಸುತ್ತಾ, “ಜಾಗತಿಕ ಹಿಜಾಬ ದಿನವಿರುವುದರಿಂದ ನಾವು ಹಿಜಾಬನ್ನು ಹಂಚುತ್ತಿದ್ದೇವೆ. ನಾವು ಯಾರಿಗೆ ಹಿಜಾಬ ನೀಡಿದೆವೋ, ಅವರು ಸ್ವತಃ ಅದನ್ನು ಧರಿಸಿದರು’ ಎಂದು ನುಡಿದರು.
೨. ಸ್ವಲ್ಪ ಸಮಯದ ಬಳಿಕ ಆ ಮಹಿಳೆಯರು ವಿಶ್ವ ಹಿಂದು ಪರಿಷತ್ತಿನ ಕಾರ್ಯಕರ್ತರನ್ನು ಹಾಗೂ ನಾಗರಿಕರನ್ನು ಆರೋಪಿಸಲು ಪ್ರಾರಂಭಿಸಿದರು. (ಮತಾಂಧರ ಕುಯುಕ್ತಿ ! – ಸಂಪಾದಕರು) ಕಾರ್ಯಕರ್ತರು ಆ ಮಹಿಳೆಯರಿಂದ ಕುರಾನಿನಲ್ಲಿ ಹಿಜಾಬಿನ ವಿಷಯದಲ್ಲಿನ ಮಾಹಿತಿಯಿರುವ ಪತ್ರಕಗಳನ್ನು ವಶಪಡಿಸಿಕೊಂಡರು.
೩. ಆ ಮಹಿಳೆಯರ ಪರಿಚಯ ತಿಳಿದು ಬರಲಿಲ್ಲ; ಆದರೆ ನಾಗರಿಕರು ಆ ಯುವಕರೊಂದಿಗೆ ಪಲಾಯನ ಮಾಡುತ್ತಿದ್ದಾಗ, ಅವರ ದ್ವಿಚಕ್ರ ವಾಹನದ ಕ್ರಮಾಂಕವನ್ನು ಬರೆದುಕೊಂಡರು.
೪. ಘಟನೆಯ ಗಾಂಭೀರ್ಯತೆಯನ್ನು ಗಮನಕ್ಕೆ ತಂದುಕೊಂಡು ಕಾರ್ಯಕರ್ತರು ಆ ಪ್ರಕರಣದ ಬಗ್ಗೆ ಪೊಲೀಸು ಠಾಣೆಯಲ್ಲಿ ದೂರನ್ನು ನೊಂದಾಯಿಸಿದ್ದಾರೆ.
೫. ‘ಸಾರ್ವಜನಿಕ ಸ್ಥಳದಲ್ಲಿ ಬಲವಂತವಾಗಿ ಹಿಂದೂ ಯುವತಿಯರಿಗೆ ಹಿಜಾಬ ತೊಡುವಂತೆ ಮಾಡುವುದು, ಇದು ಒಂದು ರೀತಿಯಲ್ಲಿ ಮತಾಂತರದ ಷಡ್ಯಂತ್ರವಾಗಿದ್ದು ಇದು ಅತ್ಯಂತ ಗಂಭೀರವಾಗಿದೆ. ಈ ಪ್ರಕರಣದ ಬಗ್ಗೆ ವಿಸ್ತಾರವಾದ ಅನ್ವೇಷಣೆ ನಡೆಸಿ ಆರೋಪಿಗಳು ಹಾಗೂ ಅವರ ಸೂತ್ರಧಾರರ ಮೇಲೆ ಶೀಘ್ರವಾಗಿ ಕಠಿಣ ಕ್ರಮ ಕೈಗೊಳ್ಳಬೇಕು, ಎಂದು ವಿಶ್ವ ಹಿಂದು ಪರಿಷತ್ತು ಬಜರಂಗದಳ ಹಾಗೂ ಧರ್ಮಜಾಗರಣೆ ಮಂಚ ಎಂಬ ಸಂಘಟನೆಗಳ ಸಹಿತ ಕೆಲವು ನಾಗರಿಕರು ಬೇಡಿಕೆ ಮಾಡಿದ್ದಾರೆ.
ಹಿಜಾಬ ಧರಿಸಿ ‘ಸೆಲ್ಫಿ ತೆಗೆದ ಹಿಂದೂ ಯುವತಿಯರು !
ಇದರಿಂದ ಹಿಂದೂ ಯುವತಿಯರಿಗೆ ಧರ್ಮಶಿಕ್ಷಣ ನೀಡುವುದು ಎಷ್ಟು ಅಗತ್ಯ, ಎಂಬುದು ಗಮನಕ್ಕೆ ಬರುತ್ತದೆ ! ಈಗಲೇ ಧರ್ಮ ಶಿಕ್ಷಣ ನೀಡದೆ ಹೋದರೆ, ಮುಂದೆ ಆ ಹಿಜಾಬ ಧರಿಸಿ ತಿರುಗಾಡಿದರೆ ಆಶ್ಚರ್ಯವೆನಿಸುವುದು ಬೇಡ ! – ಸಂಪಾದಕರು