ಪಂಜಶಿರ ‘ನ್ಯಾಶನಲ್ ರೆಸಿಸ್ ಟೆನ್ಸ್ ಫ್ರಂಟ್’ನ ವಕ್ತಾರ ಫಹೀಮ ದಶ್ತಿ ಹತರಾಗಲು ಬಿಬಿಸಿ ಕಾರಣ ಎಂದು ಸಾಮಾಜಿಕ ಮಾಧ್ಯಮಗಳಿಂದ ಆರೋಪ

ಬಿಬಿಸಿ ಯ ಮೇಲೆ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆ

ಈ ಪ್ರಕರಣವನ್ನು ಗಂಭೀರವಾಗಿ ವಿಚಾರಣೆ ನಡೆಸಿ ಇದರಲ್ಲಿ ಒಂದು ವೇಳೆ ಬಿಬಿಸಿಯು ಉದ್ದೇಶಪೂರ್ವಕವಾಗಿ ತಾಲಿಬಾನಿಗಳಿಗೆ ಸಹಾಯ ಮಾಡಿದ್ದು ಬಹಿರಂಗವಾದಲ್ಲಿ ಬಿಬಿಸಿಯ ಮೇಲೆ ಕಠೋರ ಕ್ರಮ ಕೈಗೊಳ್ಳಬೇಕು !

ಕಾಬೂಲ – ಅಫಘಾನಿಸ್ತಾನದ ಪಂಜಶಿರ ಪ್ರಾಂತ್ಯದ ಮೇಲೆ ೫ ಸಪ್ಟಂಬರನಂದು ತಾಲಿಬಾನ್ ನಡೆಸಿದ ದಾಳಿಯಲ್ಲಿ ‘ನ್ಯಾಶನಲ್ ರೆಸಿಸ್ ಟೆನ್ಸ್ ಫ್ರಂಟ್’ನ ವಕ್ತಾರ ಫಹೀಮ ದಶ್ತಿ ಮತ್ತು ಕಮಾಂಡರ್ ಜನರಲ್ ಸಾಹಿಬ ಅಬ್ದುಲ ವದೂದ ಇವರು ಹತರಾದರು. ಇವರಿಬ್ಬರೂ ಈ ಫ್ರಂಟ್ ನ ಮುಖಂಡರಾಗಿದ್ದರು. ಇದರಿಂದ ಫ್ರಂಟ್ ಗೆ ಅಪಾರ ಹಾನಿಯಾಗಿದೆ. ಸಾಮಾಜಿಕ ಮಾಧ್ಯಮಗಳಿಂದ ಈ ಮೃತ್ಯುವಿಗೆ ಬಿಬಿಸಿಯಿಂದಾದ ತಪ್ಪು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ತಾಲಿಬಾನಿಗೆ ಫಹೀಮರ ಬಗ್ಗೆ ಮಾಹಿತಿಯು ಹೇಗೆ ಸಿಕ್ಕಿತು ಎಂಬ ಅಂಶದ ಬಗ್ಗೆ ಬಿಬಿಸಿಯತ್ತ ಬೆರಳು ತೋರಿಸಲಾಗುತಿದೆ. ಜನರ ಹೇಳಿಕೆಯಂತೆ ಬಿಬಿಸಿಯೇ ಫಹೀಮ ದಶ್ತಿಯ ಸೆಟಲೈಟ್ ಕ್ರಮಾಂಕವನ್ನು ಸಾರ್ವಜನಿಕಗೊಳಿಸಿತ್ತು. ಹಾಗಾಗಿ ದಶ್ತಿಯು ಎಲ್ಲಿ ಅಡಗಿದ್ದಾನೆಂದು ತಾಲಿಬಾನಿಗೆ ಹುಡುಕಲು ಸುಲಭವಾಯಿತು ಮತ್ತು ಅದು ಅವನ ಮೇಲೆ ದಾಳಿ ನಡೆಸಿತು. ಇದರಿಂದ ಬಿಬಿಸಿಯ ಮೇಲೆ ಕ್ರಮಕೈಗೊಳ್ಳಬೇಕು ಎಂದು ಸಂಯುಕ್ತ ರಾಷ್ಟ್ರಕ್ಕೆ ಬೇಡಿಕೆಯನ್ನು ಸಲ್ಲಿಸಲಾಗುತ್ತಿದೆ.