20ನೇ ಶತಮಾನದ ಉರ್ದೂ ಲೇಖಕಿ ಇಸ್ಮತ ಚುಗತಯಿಯವರ ಆತ್ಮ ಕಥೆಯಲ್ಲಿನ ಹಿಂದೂ ವಿರೋಧಿ ಅಂಶಗಳನ್ನು ಈಗ ಪ್ರಸಾರ ಮಾಡಿದ ‘ಬಿಬಿಸಿ’ !
* ಮತಾಂಧರಿಗೆ ಚಿಕ್ಕಂದಿನಿಂದಲೇ ಹಿಂದೂದ್ವೇಷವನ್ನು ಕಲಿಸಲಾಗುತ್ತದೆ. ಅಂದಿನಿಂದಲೇ ಅವರ ಮಾನಸಿಕತೆಯು ಹಿಂದೂ ವಿರೋಧಿಯಾಗುತ್ತದೆ. ಇದರಿಂದ ‘ಸರ್ವಧರ್ಮಸಮಭಾವ’ದ ಸಂಕಲ್ಪನೆಯು ಎಷ್ಟು ಪೊಳ್ಳಾಗಿದೆ ಮತ್ತು ಅದನ್ನು ಅಂಗೀಕರಿಸುವ ಹಿಂದೂಗಳು ಎಷ್ಟು ಅಜ್ಞಾನಿಗಳಾಗಿದ್ದಾರೆ, ಎಂಬುದು ಗಮನಕ್ಕೆ ಬರುತ್ತದೆ ! – ಸಂಪಾದಕರು * ಇಸ್ಮತ ಚುಗತಯಿಯವರನ್ನು ಹೊಗಳುವ ಜಾತ್ಯಾತೀತವಾದಿಗಳು ಮತ್ತು ಪೂರೋ(ಅಧೋ)ಗಾಮಿಗಳು ಈಗೇಕೆ ಸುಮ್ಮನಿದ್ದಾರೆ ? ಈ ಮೌನವು ಚುಗತಯಿಯವರು ಮಾಡಿರುವುದು ಸರಿ ಇದೆ ಎಂಬುದಕ್ಕೆ ಸಮ್ಮತಿಯನ್ನು ದರ್ಶಿಸುತ್ತದೆಯೇ ? – ಸಂಪಾದಕರು * ಹಿಂದೂಗಳನ್ನು ಆಕ್ರಮಣಕಾರಿಗಳೆಂದು ನಿರ್ಧರಿಸಿ ಪ್ರಶಸ್ತಿಯನ್ನು ಹಿಂತಿರುಗಿಸುವ ಸಾಹಿತಿಗಳು ಈಗೇಕೆ ಈ ವಿಷಯದಲ್ಲಿ ಮಾತನಾಡುವುದಿಲ್ಲ ? – ಸಂಪಾದಕರು |
ನವದೆಹಲಿ – ಹಣ್ಣುಗಳು, ದಾಲ ಮೋಟ (ಎಣ್ಣೆ ಅಥವಾ ತುಪ್ಪದಲ್ಲಿ ಹುರಿದ ಬೇಳೆ) ಮತ್ತು ಬಿಸ್ಕೆಟಗಳಲ್ಲಿ ಮುಟ್ಟಬಾರದಾದ ಯಾವುದೇ ಪದಾರ್ಥವಿರುವುದಿಲ್ಲ; ಎಂದು ಹೇಳಿ ನಾನು ಶ್ರೀಕೃಷ್ಣ ಜಯಂತಿಯಂದು ನನ್ನ ಹಿಂದೂ ಸ್ನೇಹಿತೆಯಾದ ಸುಶಿಯನ್ನು ಮೋಸಗೊಳಿಸಿ ಮಾಂಸ ತಿನ್ನಲು ಕೊಡುತ್ತಿದ್ದೆ. ಇದರಿಂದ ನನಗೆ ಶಾಂತವೆನಿಸುತ್ತಿತ್ತು ಎಂದು ಉರ್ದೂ ಲೇಖಕಿ ಇಸ್ಮತ ಚುಗತಯಿ ತನ್ನ ಆತ್ಮಚರಿತ್ರೆಯಲ್ಲಿ ಬರೆದಿದ್ದಾಳೆ. ಶ್ರೀಕೃಷ್ಣ ಜಯಂತಿಯ ನಿಮಿತ್ತ ‘ಬಿಬಿಸಿ’ ವಾರ್ತಾ ಜಾಲತಾಣವು ಭಾರತೀಯ ಉರ್ದೂ ಲೇಖಕಿ ಇಸ್ಮತ ಚುಗತಯಿಯ ‘ಕಾಗಜೀ ಹೈ ಪೈರಹನ’ ಈ ಆತ್ಮಚರಿತ್ರೆಯಲ್ಲಿನ ಕೆಲವು ಭಾಗಗಳನ್ನು ಪ್ರಕಾಶಿಸಿದೆ. ಈ ಆತ್ಮಚರಿತ್ರೆಯಲ್ಲಿ ಇಸ್ಮತಳು ತನ್ನ ಬಾಲ್ಯದ ನೆನಪುಗಳನ್ನು ನಮೂದಿಸಿದ್ದಾಳೆ. ಚುಗತಯಿಯು 1915 ರಲ್ಲಿ ಉತ್ತರಪ್ರದೇಶದಲ್ಲಿನ ಬದಾಯೂಂ ಜಿಲ್ಲೆಯಲ್ಲಿ ಜನಿಸಿದ್ದರು, ಮತ್ತು 1991 ರಲ್ಲಿ ಅವರ ಮೃತ್ಯು ಆಯಿತು. (‘ ಬಿಬಿಸಿ ‘ ವಾರ್ತಾವಾಹಿನಿ ಮತ್ತು ಅದರ ಜಾಲತಾಣಗಳು ಹಿಂದೂಧರ್ಮ ಮತ್ತು ದೇವತೆಗಳನ್ನು ಬಹಿರಂಗವಾಗಿ ವಿಡಂಬನೆ ಮಾಡುತ್ತವೆ. ಆದುದರಿಂದಲೇ ‘ಶ್ರೀಕೃಷ್ಣ ಜಯಂತಿಯಂತಹ ಪವಿತ್ರದಿನವನ್ನು ಹುಡುಕಿ ಜಗತ್ತು ಮರೆತಿರುವ 20ನೇ ಶತಮಾನದ ಓರ್ವ ಲೇಖಕಿಯ ಆತ್ಮಚರಿತ್ರೆಯಲ್ಲಿನ ಇಂತಹ ಅಂಶಗಳನ್ನು ಪ್ರಕಾಶಿಸುವ ಅವಶ್ಯಕತೆ ಏನಿತ್ತು ? ಇದರಿಂದ ಬಿಬಿಸಿಯ ಸಂಪಾದಕ ಮಂಡಳಿ ಮತ್ತು ಪತ್ರಕರ್ತರ ನರನಾಡಿಗಳಲ್ಲಿ ಹಿಂದೂ ದ್ವೇಷವು ಎಷ್ಟರಮಟ್ಟಿಗೆ ತುಂಬಿದೆ ಎಂಬುದು ಗಮನಕ್ಕೆ ಬರುತ್ತದೆ ! ಹಿಂದೂಗಳು ಇಂತಹ ಬಿಬಿಸಿಯನ್ನು ಬಹಿಷ್ಕರಿಸಬೇಕು ! – ಸಂಪಾದಕರು)
ಆತ್ಮಚರಿತ್ರೆಯಲ್ಲಿ ಲೇಖಕಿ ಇಸ್ಮತ ಚುಗತಯಿ ಹೀಗೆ ಹೇಳಿದ್ದಾರೆ
1. ಬಕ್ರೀದಿನಂದು ನನ್ನ ಮನೆಯಲ್ಲಿ ಕುರಿಯನ್ನು ಕೊಯ್ಯಲಾಗುತ್ತಿತ್ತು. ಈ ಮಾಂಸವನ್ನು ಅನೇಕ ದಿನಗಳವರೆಗೆ ಹಂಚಲಾಗುತ್ತಿತ್ತು. ಆ ದಿನದಂದು ನನ್ನ ಹಿಂದೂ ಸ್ನೇಹಿತೆಯಾದ ಸುಶಿಯ ಪಾಲಕರು ತಮ್ಮ ಮನೆಯ ಬಾಗಿಲುಗಳನ್ನು ಹಾಕಿಡುತ್ತಿದ್ದರು.
2. ಹಿಂದೂಗಳು ಶ್ರೀ ಕೃಷ್ಣ ಜಯಂತಿಯನ್ನು ಅತ್ಯಂತ ಆನಂದದಿಂದ ಆಚರಿಸುತ್ತಿದ್ದರು. ಎಲ್ಲ ಕಡೆಗಳಲ್ಲಿ ಖಾದ್ಯ ಪದಾರ್ಥಗಳ ಸುಗಂಧ ಹರಡಿರುತ್ತಿತ್ತು. ಇದರಿಂದಾಗಿ ನನಗೆ ಹಿಂದೂಗಳ ಮನೆಗೆ ಹೋಗುವ ಇಚ್ಛೆಯಾಗುತ್ತಿತ್ತು. ಒಂದು ದಿನ ನಾನು ಸುಶಿಯ ಮನೆಯ ಅಂಗಳದಲ್ಲಿ ಹೋದೆನು. ಅಲ್ಲಿ ಪೂಜೆಯ ಸಮಯದಲ್ಲಿ ಪ್ರತಿಯೊಬ್ಬರಿಗೂ ಗಂಧವನ್ನು ಹಚ್ಚುವಾಗ ಓರ್ವ ಮಹಿಳೆಯು ನನಗೂ ಗಂಧ ಹಚ್ಚಿದಳು. ನನ್ನ ಹಣೆಯ ಮೇಲೆ ಗಂಧದ ತಿಲಕವಿದ್ದುದರಿಂದ ನಾನು ಹಿಂಜರಿಯದೆ ದೇವರ ಕೋಣೆಗೆ ಹೋಗಿ ಅಲ್ಲಿರುವ ಬೆಳ್ಳಿಯ ತೊಟ್ಟಿಲಲ್ಲಿರುವ ಭಗವಾನ ಶ್ರೀಕೃಷ್ಣನ ಮೂರ್ತಿಯನ್ನು ಕದ್ದೆನು. ಆದರೆ ಅದು ಸುಶಿಯ ಅಜ್ಜಿಯ ಗಮನಕ್ಕೆ ಬಂದಿತ್ತು. ಆದುದರಿಂದ ಅವರು ನನ್ನನ್ನು ಮನೆಯಿಂದ ಹೊರಗೆ ಹಾಕಿದರು. (ಇದರಿಂದ ಹಿಂದೂಗಳು ತಮ್ಮ ಮನೆಗೆ ಯಾರಿಗೆ ಪ್ರವೇಶ ನೀಡಬೇಕು ಯಾರಿಗೆ ನೀಡಬಾರದು ಎಂಬುದನ್ನು ಗಮನದಲ್ಲಿಡಬೇಕು ! – ಸಂಪಾದಕರು)
3. ಅನೇಕ ವರ್ಷಗಳ ನಂತರ ನಾನು ಅಲಿಗಡದಿಂದ ಆಗ್ರಾಕ್ಕೆ ಹಿಂದಿರುಗಿದೆ. ಆಗ ನಾನು ಸುಶಿಯ ಅರಸಿನ/ಹಳದಿಯ ಕಾರ್ಯಕ್ರಮಕ್ಕೆ ಹೋಗಿದ್ದೆನು. ನಾನು ಸುಶಿಯ ಕೋಣೆಗೆ ಹೋದನು. ಅಲ್ಲಿ ಶ್ರೀಕೃಷ್ಣನ ಮಂದಿರವಿತ್ತು. ನಾನು ಮುಸಲ್ಮಾನಳಿದ್ದೇನೆ ಮತ್ತು ಇಸ್ಲಾಂನಲ್ಲಿ ಮೂರ್ತಿಪೂಜೆಯು ಅಪರಾಧವಾಗಿದೆ. (ಹೀಗಿರುವುದರಿಂದಲೇ ಕಳೆದ ಒಂದು ಸಾವಿರ ವರ್ಷಗಳಿಂದ ಭಾರತದಲ್ಲಿ ಮತಾಂಧರಿಂದ ಹಿಂದೂ ದೇವತೆಗಳ ಮೂರ್ತಿಗಳನ್ನು ಒಡೆದುಹಾಕಲಾಯಿತು, ದೇವಸ್ಥಾನಗಳನ್ನು ಧ್ವಂಸಗೊಳಿಸಲಾಯಿತು, ಆಗಾಗ ಧರ್ಮದ ವಿಡಂಬನೆ ಮಾಡಲಾಯಿತು. ಇದನ್ನು ಧರ್ಮಾಭಿಮಾನ ಶೂನ್ಯ ಹಿಂದೂಗಳು ಯಾವಾಗ ಗಮನಕ್ಕೆ ತೆಗೆದುಕೊಳ್ಳುವರು ? – ಸಂಪಾದಕರು)