ಕಾಶ್ಮೀರಿ ಮುಸಲ್ಮಾನರಿಗಾಗಿ ಒಬ್ಬ ಮುಸಲ್ಮಾನ ಎಂದು  ಧ್ವನಿಯೆತ್ತುವುದು ನಮ್ಮ ಅಧಿಕಾರವಾಗಿದೆ ! (ಅಂತೆ) – ತಾಲಿಬಾನ

* ಚೀನಾದಲ್ಲಿರುವ ಉಘುರ ಮುಸಲ್ಮಾನರಿಗಾಗಿ ಧ್ವನಿಯೆತ್ತಲು ನಮಗೆ ಅಧಿಕಾರವಿದೆ ಎಂದು ಹೇಳುವ ಧೈರ್ಯವನ್ನು ತಾಲಿಬಾನ್ ಉಗ್ರರು ಯಾಕೆ ತೋರಿಸುವುದಿಲ್ಲ? ಇದರಿಂದ ಅವರ ತೋರಿಕೆಯ (ನಕಲಿ) ಮುಸಲ್ಮಾನ ಪ್ರೇಮ ಮತ್ತು ಭಾರತ ದ್ವೇಷವು ಕಂಡು ಬರುತ್ತದೆ. – ಸಂಪಾದಕರು 

* ಕಾಶ್ಮೀರ ಸಮಸ್ಯೆಯು ಭಾರತ ಮತ್ತು ಪಾಕಿಸ್ತಾನದ ಆಂತರಿಕ ವಿಷಯವಾಗಿದೆ; ಅಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ, ಎಂದು ಹೇಳಿದ ತಾಲಿಬಾನ್ ಇವತ್ತು ಬೇರೆಯೆ ಹೇಳಿಕೆಯನ್ನು ಕೊಡುತ್ತಿದೆ. ಇದರಿಂದ ಅವರ ಮೇಲೆ ಎಂದಿಗೂ ವಿಶ್ವಾಸ ಇಡಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗುತ್ತದೆ. – ಸಂಪಾದಕರು 

ತಾಲಿಬಾನ್ ನ ವಕ್ತಾರ ಸುಹೈಲ್ ಶಾಹಿನ್

ಲಂಡನ್ (ಬ್ರಿಟನ್) – ಒಬ್ಬ ಮುಸಲ್ಮಾನ ಎಂದು ಭಾರತದ ಕಾಶ್ಮೀರ್ ದಲ್ಲಿ ಅಥವಾ ಬೇರೆ ದೇಶಗಳಲ್ಲಿರುವ ಮುಸಲ್ಮಾನರಿಗಾಗಿ ಧ್ವನಿಯೆತ್ತುವ ಅಧಿಕಾರ ನಮಗಿದೆ, ಎಂಬ ಹೇಳಿಕೆಯನ್ನು ತಾಲಿಬಾನ್ ನ ವಕ್ತಾರ ಸುಹೈಲ್ ಶಾಹಿನ್ ಇವನು ‘ಬಿಬಿಸಿ’ಗೆ ಕೊಟ್ಟಿರುವ ಸಂದರ್ಶನದಲ್ಲಿ ಹೇಳಿದ್ದಾನೆ. ‘ನಾವು ಧ್ವನಿ ಎತ್ತುವೆವು ಮತ್ತು ಸಂಬಂಧಿತ ದೇಶಗಳಿಗೆ ಹೇಳಲು ಇಚ್ಛಿಸುವುದೇನೆಂದರೆ, ಮುಸಲ್ಮಾನರು ನಿಮ್ಮ ನಾಗರಿಕರಾಗಿದ್ದಾರೆ ಕಾನೂನಿನ ರೀತಿ ಅವರು ಸಮಾನರು, ಎಂದು ಸಹ ಹೇಳಿದನು. ಯಾವುದೇ ದೇಶದ ವಿರುದ್ಧ ಸಶಸ್ತ್ರ ಅಭಿಯಾನವನ್ನು ನಡೆಸುವುದು ನಮ್ಮ ಧೋರಣೆಯಲ್ಲ, ಹೀಗೆಂದು ಸಹ ಹೇಳಿದನು. (ಇದಕ್ಕೆ ಬೆಣ್ಣೆಯಿಂದ ಕೂದಲು ತೆಗೆದ ಹಾಗೆ ಸುಳ್ಳು ಹೇಳುವುದು ಎನ್ನುತ್ತಾರೆ! ತಾಲಿಬಾನಿಗಳ ಹೇಳಿಕೆಯಲ್ಲಿ ಜಗತ್ತಿನ ಒಂದಾದರೂ ದೇಶವು ವಿಶ್ವಾಸ ಇಡುವುದೇ ? -ಸಂಪಾದಕರು)