ಸಿಕರೀ (ರಾಜಸ್ಥಾನ) ಜಿಲ್ಲೆಯಲ್ಲಿ ಮಾನಸಿಕ ಅಸ್ವಸ್ಥ ಮಹಿಳೆಯ ಮೇಲೆ ಪೊಲೀಸನಿಂದ ಬಲಾತ್ಕಾರ!

ರಾಜಸ್ಥಾನದ ಪೊಲೀಸರಿಂದ ಮಹಿಳೆಯರ ಮೇಲೆ ಮಾಡಲಾದ ಅತ್ಯಾಚಾರಗಳ ಅನೇಕ ಪ್ರಕರಣಗಳು ಬಹಿರಂಗ !

  • ಅಪರಾಧಿಗಳಿಂದ ಜನತೆಯ ರಕ್ಷಿಸಬೇಕಾದ ಪೊಲೀಸರೇ ಜನತೆಯ ಮೇಲೆ ಅತ್ಯಾಚಾರ ಮಾಡಿದರೆ ಜನತೆಯು ಯಾರ ಬಳಿ ನ್ಯಾಯ ಕೇಳಬೇಕು ?
  • ಇಂತಹ ವಾಸನಾಂಧ ಪೊಲೀಸರಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಯಾರಾದರೂ ಬೇಡಿಕೆ ಸಲ್ಲಿಸಿದರೆ ಅದರಲ್ಲಿ ತಪ್ಪೇನಿದೆ ?

ಜಯಪುರ (ರಾಜಸ್ಥಾನ) – ಸಿಕರೀ ಜಿಲ್ಲೆಯಲ್ಲಿನ ಶ್ರೀಮಧೋಪೂರ ಪೊಲೀಸ್ ಠಾಣೆಯ ಕ್ಷೇತ್ರದಲ್ಲಿ ಮಾನಸಿಕ ಅಸ್ವಸ್ಥ ಮಹಿಳೆಯ ಮೇಲೆ ಬಲಾತ್ಕಾರ ಮಾಡಿರುವ ಪ್ರಕರಣದಲ್ಲಿ ಪೊಲೀಸ್ ಕಾನ್ ಸ್ಟೇಬಲನ್ನು ಬಂಧಿಸಲಾಗಿದೆ. ಪೊಲೀಸ್ ಉಪನಿರೀಕ್ಷಕರಾದ ಕೈಲಾಶ ಚಂದ ಇವರು ‘ಜಯಪುರದಲ್ಲಿನ ಶಾಹಪುರ ಕ್ಷೇತ್ರದಲ್ಲಿ ಚಾಲಕನೆಂದು ಕೆಲಸ ಮಾಡುತ್ತಿದ್ದ ಕಾನ್ ಸ್ಟೇಬಲ ಲಾಲಚಂದನು ಸಂತ್ರಸ್ತೆಯ ನೆರೆಹೊರೆಯವನಾಗಿದ್ದನು. ಇವನು ಆಗಸ್ಟ್ 19ರಂದು ಒಂದು ಗದ್ದೆಯಲ್ಲಿ 23ವರ್ಷದ ಮಹಿಳೆಯ ಮೇಲೆ ಬಲಾತ್ಕಾರ ಮಾಡಿದ್ದಾನೆ ಎಂಬ ಆರೋಪವಿದೆ. ಇವನನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ’ ಎಂದು ಹೇಳಿದ್ದಾರೆ.

2021 ನೇ ಇಸವಿಯಲ್ಲಿ ರಾಜಸ್ಥಾನ ಪೊಲೀಸರಿಂದ ಮಹಿಳೆಯರ ಮೇಲಾಗಿರುವ ಅತ್ಯಾಚಾರದ ಪ್ರಕರಣಗಳು

1. ಮಾರ್ಚ್ 2, 2021ರಂದು ಅಲವರದ ಖಡೆಳಿ ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ದೂರು ನೋಂದಾಯಿಸಲು ಹೋಗಿರುವ ಮಹಿಳೆಯ ಮೇಲೆ ಪೊಲೀಸ್ ಉಪನಿರೀಕ್ಷಕ ಭರತ ಸಿಂಹನು ಬಲಾತ್ಕಾರ ಮಾಡಿದ್ದನು.

2. ಮೇ 2021ರಲ್ಲಿ ಮಟೀಲಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ಮನೀರಾಮನ ಮೇಲೆ ಬಲಾತ್ಕಾರದ ಆರೋಪ ಮಾಡಿ ಓರ್ವ ಮಹಿಳೆಯು ಕಾಲುವೆಯಲ್ಲಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಳು.

3. ರಾಜಸ್ಥಾನದ ಚುರೂ ಜಿಲ್ಲೆಯಲ್ಲಿ ಸರದಾರ ಶಹರ ಪೊಲೀಸ್ ಠಾಣೆಯಲ್ಲಿ ಅಮಾನತುಗೊಂಡ ಪೊಲೀಸ್ ನಿರೀಕ್ಷಕರ ಸಹಿತ ಒಟ್ಟು 8 ಪೊಲೀಸರ ವಿರುದ್ಧ ಪ್ರಥಮ ವರ್ತಮಾನ ವರದಿಯನ್ನು ನೋಂದಾಯಿಸಲಾಗಿತ್ತು. ಇವರೆಲ್ಲರ ಮೇಲೆ ಓರ್ವ ಮಹಿಳೆಯನ್ನು ಬಂಧಿಸಿ ಆಕೆಯ ಮೇಲೆ ಬಲಾತ್ಕಾರ ಮಾಡಿರುವ ಆರೋಪವಿತ್ತು.

4. ಈ ವರ್ಷ ಪೊಲೀಸ್ ಉಪಾಯುಕ್ತ ಕೈಲಾಶ ಬೋಹರಾ ಇವರನ್ನು ‘ಓರ್ವ ಬಲಾತ್ಕಾರಕ್ಕೀಡಾದ ಸಂತ್ರಸ್ತೆಯ ಬಳಿ ಲಂಚ ಕೇಳಿದ ಮತ್ತು ಆಕೆಯ ಲೈಂಗಿಕ ಶೋಷಣೆ ಮಾಡುವ’ ಪ್ರಕರಣದಲ್ಲಿ ಬಂಧಿಸಲಾಗಿತ್ತು.