ಧರ್ಮಪ್ರಭುತ್ವದ ಸ್ಥಾಪನೆಗಾಗಿ ದೇಶದಲ್ಲಿನ ಸಾಧು ಸಂತರು ಸಂಘಟಿತರಾಗುತ್ತಿದ್ದಾರೆ ! – ಮಾಜಿ ಐ.ಪಿ.ಎಸ್. ಅಧಿಕಾರಿ ಡಿ.ಜಿ. ವಂಜಾರಾ

ಮಾಜಿ ಐ.ಪಿ.ಎಸ್. ಅಧಿಕಾರಿ ಡಿ.ಜಿ. ವಂಜಾರಾ

ದ್ವಾರಕಾ (ಗುಜರಾತ) – ಧರ್ಮಶಾಸನ ಹಾಗೂ ರಾಜಪ್ರಭುತ್ವವು ಒಂದಾಗಿ ಸಾಗುತ್ತಿರುತ್ತವೆ. ಸ್ವಾತಂತ್ರ್ಯದ ಬಳಿಕ ರಾಜಪ್ರಭುತ್ವದ ಸ್ಥಾಪನೆಯಾಯಿತು; ಆದರೆ ಧರ್ಮಪ್ರಭುತ್ವದ ಸ್ಥಾಪನೆಯಾಗಲಿಲ್ಲ. ಈಗ ಅದೇ ಧರ್ಮಪ್ರಭುತ್ವದ ಸ್ಥಾಪನೆಗೋಸ್ಕರ ದೇಶದಲ್ಲಿನ ಸಾಧುಗಳು ಹಾಗೂ ಸಂತರು ಸಂಘಟಿತರಾಗುತ್ತಿದ್ದಾರೆ ಎಂದು ಗುಜರಾತಿನ ಮಾಜಿ ಐ.ಪಿ.ಎಸ್. ಅಧಿಕಾರಿ ಡಿ.ಜಿ. ವಂಜಾರಾರವರು ಇಲ್ಲಿ ಆಯೋಜಿಸಲಾದ ಧರ್ಮಸಭೆಯಲ್ಲಿ ಮಾತನಾಡುವಾಗ ಪ್ರತಿಪಾದಿಸಿದರು. ಸನಾತನ ಸೇವಾ ಮಂಡಳದ ಮಾಧ್ಯಮದಿಂದ ವಂಜಾರಾರವರೇ ಈ ಸಭೆಯನ್ನು ಆಯೋಜಿಸಿದ್ದರು. ವಂಜಾರಾರವರು ಸತತವಾಗಿ ಗುಜರಾತನ ಸಾಧು ಸಂತರನ್ನು ಭೇಟಿಯಾಗುತ್ತಿದ್ದಾರೆ. ಅವರನ್ನು ಸಂಘಟಿಸಲು ಪ್ರಯತ್ನಿಸುತ್ತಿದ್ದಾರೆ. ಮುಂದಿನ ವರ್ಷ ಗುಜರಾತಿನಲ್ಲಿ ವಿಧಾನಸಭೆ ಚುನಾವಣೆಯು ನಡೆಯಲಿದೆ.

ಡಿ.ಜಿ. ವಂಜಾರಾರವರು ತಮ್ಮ ಮಾರ್ಗದರ್ಶನದಲ್ಲಿ ‘ಮುಂದೆ ಗುಜರಾತ ಹಾಗೂ ಇಡೀ ದೇಶದಲ್ಲಿ ಧರ್ಮಪ್ರಭುತ್ವದ ಸ್ಥಾಪನೆಯಾಗಬೇಕು. ರಾಜಪ್ರಭುತ್ವದೊಂದಿಗೆ ಧರ್ಮಪ್ರಭುತ್ವವಿತ್ತು ಎಂಬುದಕ್ಕೆ ರಾಷ್ಟ್ರೀಯ ಪರಂಪರೆಯಿದೆ. ಕಳೆದ ವರ್ಷದಿಂದ ದೇಶದಲ್ಲಿ ಧರ್ಮಪ್ರಭುತ್ವವನ್ನು ಸ್ಥಾಪಿಸಲು ಪ್ರಯತ್ನ ನಡೆಯುತ್ತಿದೆ. ಧರ್ಮಪ್ರಭುತ್ವದ ಸ್ಥಾಪನೆಯಾದರೆ, ಆಗ ನಮ್ಮ ದೇಶ ಹಾಗೂ ಹಿಂದೂಗಳು ಹಾಗೂ ಅನ್ಯ ಮತದವರು ತಮ್ಮ ಸಮಸ್ಯೆಗಳಿಂದ ಮುಕ್ತರಾಗುವರು’ ಎಂದು ಹೇಳಿದರು.