ಬಾಡಮೆರ ( ರಾಜಸ್ಥಾನ) ಇಲ್ಲಿ ಮಿಗ್- ೨೧ ಯುದ್ಧ ವಿಮಾನ ಪತನ

ವೈಮಾನಿಕ ಸುರಕ್ಷಿತ !

ಹಾರಾಡುವ ಶವಪೆಟ್ಟಿಗೆಗಳಾಗಿರುವ ಭಾರತದ ವಾಯುದಳದಲ್ಲಿರುವ ವಿಮಾನಗಳು ! ಕಳೆದ ಅನೇಕ ದಶಕಗಳಿಂದ ಇದೇ ಸ್ಥಿತಿ ಇದೆ ಹಾಗೂ ಯಾವುದೇ ರಾಜಕೀಯ ಪಕ್ಷ ಆಡಳಿತಕ್ಕೆ ಬಂದರೂ ಅದರಲ್ಲಿ ಬದಲಾವಣೆ ಮಾಡುತ್ತಿಲ್ಲ ಎಂಬುದು ಲಜ್ಜಾಸ್ಪದ ! – ಸಂಪಾದಕರು

ಬಾಡಮೆರ (ರಾಜಸ್ಥಾನ) – ಇಲ್ಲಿ ೨೫ ಆಗಸ್ಟ ರಂದು ಸಂಜೆ ಭಾರತೀಯ ವಾಯುದಳದ ‘ಮಿಗ್-೨೧ ಬಾಯಾಸನ’ ಈ ಯುದ್ಧ ವಿಮಾನವು ನೆಲಕ್ಕೆ ಅಪ್ಪಳಿಸಿದೆ. ಇದರಲ್ಲಿ ಅದೃಷ್ಟವಶಾತ ಇದರಲ್ಲಿದ್ದ ವೈಮಾನಿಕನು ಸುರಕ್ಷಿತವಾಗಿದ್ದಾನೆ. ಪ್ರಶಿಕ್ಷಣದ ಸಮಯದಲ್ಲಿ ಈ ಅಪಘಾತವು ನಡೆದಿದೆ. ಬಾಡಮೆರ ಜಿಲ್ಲೆಯಿಂದ ೩೫ ಕಿಮಿ ದೂರ ಇರುವ ಮಾತಸರ ಎಂಬ ಊರಿನ ಹತ್ತಿರ ಈ ದುರ್ಘಟನೆಯು ನಡೆದಿದೆ.