ಹವಾಮಾನ ಬದಲಾವಣೆಯಿಂದ ಪಶ್ಚಿಮ ಘಟ್ಟದಲ್ಲಿನ ಶೇಕಡಾ ೩೩ರಷ್ಟು ಜೀವವೈವಿಧ್ಯವು ೨೦೫೦ ಇಸವಿಯವರೆಗೆ ನಾಶವಾಗಲಿದೆ – ವಿಜ್ಞಾನಿಗಳ ಹೇಳಿಕೆ

ಭೌತಿಕ ವಿಕಾಸದಿಂದ ನಿಸರ್ಗವು ನಾಶವಾಗಲಿದೆ ಎಂದು ಈಗ ತಜ್ಞರು ಹೇಳುತ್ತಿದ್ದಾರೆ. ರಾಜಕಾರಣಿಗಳು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು ಹಾಗೆಯೇ ಇವರು ವಿಜ್ಞಾನವನ್ನು ಹಾಡಿಹೊಗಳುವ ವೈಜ್ಞಾನಿಕ ಸಂಶೋಧನೆಗಳ ಅನಿಯಂತ್ರಿತ ಉಪಯೋಗದಿಂದಾಗುವ ಹಾನಿಗಳ ಬಗ್ಗೆ ಸಮಾಜವನ್ನು ಎಂದಿಗೂ ಜಾಗೃತಗೊಳಿಸಿಲ್ಲ.

ಪಣಜಿ, ೧೬ ಅಗಸ್ಟ್ (ವಾರ್ತೆ.) – ಹವಾಮಾನ ಬದಲಾವಣೆಯಿಂದ (’ಕ್ಲೈಮೇಟ್ ಚೇಂಜ್’) ಕರ್ನಾಟಕದಲ್ಲಿನ ಉತ್ತರ ಪೂರ್ವ ಭಾಗದಲ್ಲಿ, ಹಾಗೆಯೇ ಪಶ್ಚಿಮಘಟ್ಟದೊಂದಿಗೆ ಜೋಡಿಸಿಕೊಂಡಿರುವ ಜಿಲ್ಲೆಗಳಲ್ಲಿ ಕಡಿಮೆ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆ ಬೀಳುವುದರಿಂದ ಪಶ್ಚಿಮ ಘಟ್ಟದಲ್ಲಿನ ಶೇಕಡ ೩೩ರಷ್ಟು ಜೀವವೈವಿಧ್ಯವು ೨೦೫೦ ಇಸವಿಯವರೆಗೆ ನಾಶವಾಗಲಿದೆ ಎಂದು ’ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್’ನ ವಿಜ್ಞಾನಿ ಪ್ರಾ. (ನಿವೃತ್ತ) ಎನ್. ಎಚ್. ರವೀಂದ್ರನಾಥ ಮತ್ತು ಪ್ರಾ. ಜಿ. ಗಾಲ ಇವರು ಹೇಳಿದ್ದಾರೆ. ವಿಜ್ಞಾನಿಗಳ ಒಂದು ಗುಂಪು ಇತ್ತೀಚೆಗೆ ’ಯುನೈಟೆಡ್ ನೇಶನ್ ಕ್ಲೈಮೇಟ್ ಚೇಂಜ್’ ಈ ವರದಿಯನ್ನು ಸಿದ್ಧಪಡಿಸಿದೆ. ವಿಜ್ಞಾನಿಗಳ ಈ ಗುಂಪಿನಲ್ಲಿ ಪ್ರಾ. (ನಿವೃತ್ತ) ಎನ್. ಎಚ್. ರವೀಂದ್ರನಾಥ ಮತ್ತು ಪ್ರಾ. ಜಿ. ಗಾಲ ಇವರೂ ಇದ್ದರು. ಕಳೆದ ವಾರ ಪ್ರಸಿದ್ಧವಾದ ಈ ವರದಿಯಲ್ಲಿ ಹವಾಮಾನ ಬದಲಾವಣೆಯಿಂದಾಗಿ ಜಗತ್ತು ಭೀಷಣ ದುಷ್ಪರಿಣಾಮಗಳನ್ನು ಎದುರಿಸಬೇಕಾಗುವುದು ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.

’ಬೆಂಗಳೂರು ಕ್ಲೈಮೇಟ್ ಚೇಂಜ್ ಇನಿಷಿಯೇಟಿವ್ -ಕರ್ನಾಟಕ’ ಇವರು ಹವಾಮಾನ ಬದಲಾವಣೆಯ ವಿಷಯದಲ್ಲಿ ಇತ್ತೀಚೆಗೆ ಒಂದು ಚರ್ಚಾ ಕೂಟವನ್ನು ಆಯೋಜಿಸಿದ್ದರು. ಈ ಚರ್ಚಾಕೂಟದಲ್ಲಿ ವಿಜ್ಞಾನಿಗಳಾದ ಪ್ರಾ. (ನಿವೃತ್ತ) ಎನ್. ಎಚ್. ರವೀಂದ್ರನಾಥ ಮತ್ತು ಪ್ರಾ. ಜಿ. ಗಾಲ ಇವರು ’ಕರ್ನಾಟಕ ಸರಕಾರವು ಪ್ರತಿಯೊಂದು ವಿಕಾಸ ಯೋಜನೆಯನ್ನು ನಡೆಸುವಾಗ ಅದರಿಂದ ಹವಾಮಾನ ಬದಲಾವಣೆಯ ಮೇಲೆ ದೀರ್ಘಕಾಲ ಯಾವ ದುಷ್ಪರಿಣಾಮಗಳಾಗಬಹುದು ಎಂಬುದರ ವಿಚಾರ ಮಾಡಿ ಮುಂದುವರಿಯಬೇಕು. ನಾವು ’ ಸಿ ಓ ಪೀ – ೨೫’ ಒಪ್ಪಂದದ ಪಾಲನೆ ಮಾಡಿ ’ಗ್ರೀನ್ಹೌಸ್ ಗ್ಯಾಸ್ ಎಮಿಷನ್’ ಕಡಿಮೆ ಮಾಡಿದರೂ ಮುಂದಿನ ೨೦ರಿಂದ ೩೦ ವರ್ಷಗಳಲ್ಲಿ ಆಗುವ ಬದಲಾವಣೆಯು ವಿನಾಶಕಾರಿಯಾಗಲಿದೆ. ಏಕೆಂದರೆ ನಾವು ಮಾಡಲಿರುವ ಪ್ರಯತ್ನಗಳಿಂದ ಈ ಹಿಂದೆ ಆಗಿರುವ ಹಾನಿಯನ್ನು ಭರಿಸಲು ಸಾಧ್ಯವಿಲ್ಲ. ವಿದ್ಯುತ್ ಉತ್ಪಾದನೆ, ಸಿಮೆಂಟ್, ಸ್ಟೀಲ್ ಮತ್ತು ಇತರ ಉದ್ಯೋಗಗಳಲ್ಲಿ ತಕ್ಷಣ ಸುಧಾರಣೆ ಮಾಡುವುದು ಅವಶ್ಯಕವಾಗಿದೆ. ಹವಾಮಾನ ಬದಲಾವಣೆಯಿಂದಾಗಿ ಕರ್ನಾಟಕ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಲಿದೆ ಮತ್ತು ಈ ಹಾನಿಯನ್ನು ಭರಿಸಲು ಸಾಧ್ಯವಿಲ್ಲ. ಅರಳಿರುವ ವನಸಂಪತ್ತು ನಾಶವಾಗುವುದು. ಸಮುದ್ರದಲ್ಲಿ ನೀರು ಹರಿದು ಹೋಗದಿರಲು ಪರಿಸರದ ದೃಷ್ಟಿಯಿಂದ ಸಂವೇದನಾಶೀಲವಾಗಿರುವ ಪಶ್ಚಿಮಘಟ್ಟದ ವಿಭಾಗದಲ್ಲಿ ೧೪೦೦ ಅಣೆಕಟ್ಟುಗಳನ್ನು ಕಟ್ಟುವ ಪ್ರಸ್ತಾಪವಿದೆ. ಈ ಯೋಜನೆಗಳಿಂದ ಈ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ವಿನಾಶವಾಗಲಿದೆ’ ಎಂದು ಹೇಳಿದ್ದಾರೆ.