ಹಿಂದೂ ಜನಜಾಗೃತಿ ಸಮಿತಿಯ ಅಂತರ್ಗವಾಗಿ ಸ್ವರಕ್ಷಣೆ ತರಬೇತಿಯ ಅಭಿಯಾನದ ಮಾಧ್ಯಮದಿಂದ ಆಗಸ್ಟ್ 1 ರಿಂದ ಆಗಸ್ಟ್ 14ರ ಸಮಯಮಿತಿಯಲ್ಲಿ ‘ಆನ್‍ಲೈನ್ ಸ್ವಾತಂತ್ರ್ಯಗಾಥಾ
* ಶೌರ್ಯ ಹಾಗೂ ರಾಷ್ಟ್ರಭಕ್ತಿಭರಿತ ವಾತಾವರಣದಲ್ಲಿ ನೆರವೇರಿದ ಶೌರ್ಯಜಾಗೃತಿ ವ್ಯಾಖ್ಯಾನ !
* 100ಕ್ಕಿಂತ ಹೆಚ್ಚು ವ್ಯಾಖ್ಯಾನಗಳ ಮೂಲಕ ಹಿಂದೂ ಜಾಗೃತಿಯ ಆವಿಷ್ಕಾರ ! |
ಮುಂಬೈ – ಭಾರತಮಾತೆಯ ಸ್ವಾತಂತ್ರ್ಯಕ್ಕಾಗಿ ಅನೇಕ ಕ್ರಾಂತಿಪುತ್ರರು ತಮ್ಮ ಪ್ರಾಣಗಳ ಆಹುತಿಯನ್ನು ನೀಡಿದರು, ಮನೆಮಠದ ಮೇಲೆ ತುಳಸಿದಳವಿರಿಸಿ ಈ ಮಾತೃಭೂಮಿಗೋಸ್ಕರ ಶೌರ್ಯ ತೋರಿಸಿದರು; ಆದರೆ ಇಂದಿನ ಸ್ಥಿತಿಯನ್ನು ನಾವು ನೋಡಿದರೆ, ಯಾವ ರಾಷ್ಟ್ರಪುರುಷರು ಹಾಗೂ ಕ್ರಾಂತಿಕಾರರು ಆ ಭಾರತಮಾತೆಗೋಸ್ಕರ ಸರ್ವಸ್ವವನ್ನು ತ್ಯಾಗ ಮಾಡಿದರೋ, ಅವರ ಶೌರ್ಯಶಾಲಿ ಇತಿಹಾಸವನ್ನು ಕಲಿಸಿಕೊಡುವುದಿಲ್ಲ. ಕಳೆದ 74 ವರ್ಷಗಳಲ್ಲಿ ನಮಗೆ ಸರಿಯಾದ ಶೌರ್ಯಶಾಲಿ ಇತಿಹಾಸವನ್ನು ಕಲಿಸಿಕೊಡದ ಕಾರಣ ಇಂದು ಮತ್ತೊಮ್ಮೆ ಭಾರತಮಾತೆಯನ್ನು ವಿಭಜಿಸಲಾಗುತ್ತಿದೆ. ಹಿಂದುಗಳಲ್ಲಿ ಯುಗಯುಗಾಂತರದಿಂದ ಅವರ ರಕ್ತದಲ್ಲಿರುವ ಶೌರ್ಯವನ್ನು ಜಾಗೃತಗೊಳಿಸುವ ಸಮಯವು ಬಂದಿದೆ. ಭಾರತ ಮಾತೆಗೆ ಮತ್ತೊಮ್ಮೆ ತನ್ನ ಗತವೈಭವವನ್ನು ಗಳಿಸಿಕೊಡುವುದು ಅಗತ್ಯವಾಗಿದೆ. ಇಂದಿನ ಯುವಕರು ವಿದೇಶೀ ಆಕರ್ಷಣೆಗೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ನಾವೆಲ್ಲರೂ ಮತ್ತೊಮ್ಮೆ ಭಾರತಕ್ಕೆ ಮಾತೆಯ ಸ್ವರೂಪ ನೀಡಿ ಅವಳ ಮಸ್ತಕದ ಮೇಲೆ ಹಿಂದೂ ರಾಷ್ಟ್ರದ ಕಿರೀಟವನ್ನು ತೊಡಿಸುವ ನಿಶ್ಚಯ ಮಾಡೋಣ, ಎಂದು ಹಿಂದೂ ಜನಜಾಗೃತಿ ಸಮಿತಿಯ ಅಂತರ್ಗತ ಸ್ವರಕ್ಷಣೆ ತರಬೇತಿ ಅಭಿಯಾನದ ಮಾಧ್ಯಮದಿಂದ ತೆಗೆದುಕೊಳ್ಳಲಾದ ‘ಆನ್‍ಲೈನ್ ಸ್ವಾತಂತ್ರ್ಯಗಾಥೆ ಶೌರ್ಯಜಾಗೃತಿ ವ್ಯಾಖ್ಯಾನ’ಗಳಲ್ಲಿ ಮಾಡಲಾಗಿದೆ. ಆಗಸ್ಟ್ 1 ರಿಂದ ಆಗಸ್ಟ್ 14 ರವರೆಗಿನ ಸಮಯಮಿತಿಯಲ್ಲಿ ಸ್ವಾತಂತ್ರ್ಯದಿನದ ನಿಮಿತ್ತ ಕ್ರಾಂತಿಪುತ್ರರಿಗೆ ವಿನಮ್ರ ಪ್ರಣಾಮಗಳನ್ನು ಸಲ್ಲಿಸಲು ಮೇಲಿನ ವ್ಯಾಖ್ಯಾನಗಳ ಆಯೋಜನೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡಲಾಗಿತ್ತು. ಭಗವಾನ್ ಶ್ರೀಕೃಷ್ಣನ ಕೃಪೆಯಿಂದ 100ಕ್ಕಿಂತ ಹೆಚ್ಚು ವ್ಯಾಖ್ಯಾನಗಳ ಮಾಧ್ಯಮದಿಂದ ಹಿಂದೂ ಯುವಕರಲ್ಲಿ ರಾಷ್ಟ್ರಭಕ್ತಿಯ ಬೀಜವನ್ನು ಬಿತ್ತಲು ಪ್ರಯತ್ನಿಸಲಾಯಿತು. ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕದಲ್ಲಿನ 1 ಸಾವಿರ 700 ಕ್ಕಿಂತ ಹೆಚ್ಚು ಜನರು ಈ ವ್ಯಾಖ್ಯಾನಗಳ ಲಾಭವನ್ನು ಪಡೆದುಕೊಂಡರು.
ಕ್ಷಣಚಿತ್ರಗಳು
1. ವ್ಯಾಖ್ಯಾನದಿಂದ ಪ್ರೇರಣೆ ಪಡೆದುಕೊಂಡು ಅನೇಕ ಯುವಕರು ಸ್ವರಕ್ಷಣೆ ತರಬೇತಿ ವರ್ಗಗಳಿಗೆ ಹಾಗೂ ರಾಷ್ಟ್ರ ಹಾಗೂ ಧರ್ಮದ ಕಾರ್ಯದಲ್ಲಿ ಭಾಗವಹಿಸುವ ಇಚ್ಛೆಯನ್ನು ವ್ಯಕ್ತ ಪಡಿಸಿದರು.
2. ಹಲವರು ‘ಈ ರೀತಿಯ ಜಾಗೃತಿಯು ಸತತವಾಗಿ ನಡೆಯಬೇಕು. ಇದು ಕಾಲಾನುಸಾರ ಅಗತ್ಯವಾಗಿದೆ’, ಎಂಬ ಅಭಿಪ್ರಾಯವನ್ನು ತಿಳಿಸಿದರು.
3. ಸಂಪೂರ್ಣ ವ್ಯಾಖ್ಯಾನದ ಆಯೋಜನೆಯಲ್ಲಿ ಸ್ವರಕ್ಷಣ ತರಬೇತಿಯ ಅಭಿಯಾನದಲ್ಲಿ ಎಲ್ಲಾ ಧರ್ಮಪ್ರೇಮಿಗಳೂ ಕೂಡ ಉತ್ಸಾಹದಿಂದ ಹಾಗೂ ತಳಮಳದಿಂದ ಸೇವೆಯನ್ನು ಮಾಡಿದರು.