ಎಲ್ಲಿಯವರೆಗೂ ನಾವು ಚೀನಾದ ಮೇಲೆ ಅವಲಂಬಿಸಿರುತ್ತೇವೆಯೋ, ಅಲ್ಲಿಯವರೆಗೂ ಅದರ ಮುಂದೆ ಬಾಗಬೇಕಾಗುತ್ತದೆ ! – ಸರಸಂಘಚಾಲಕ ಡಾ. ಮೋಹನ ಭಾಗವತ

ಕೇಂದ್ರದ ಬಿಜೆಪಿ ಸರಕಾರವು ಸರಸಂಘಚಾಲಕರ ಈ ಹೇಳಿಕೆಯ ಕಡೆಗೆ ಗಾಂಭೀರ್ಯದಿಂದ ಗಮನಕೊಟ್ಟು ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ಪ್ರಯತ್ನಿಸಬೇಕು, ಎಂದು ಜನರಿಗೆ ಅನಿಸುತ್ತದೆ ! -ಸಂಪಾದಕರು 

ಡಾ. ಮೋಹನ ಭಾಗವತ

ಮುಂಬಯಿ – ನಾವು ಇಂಟರ್ ನೆಟ್ ಮತ್ತು ತಂತ್ರಜ್ಞಾನವನ್ನು ಉಪಯೋಗಿಸುತ್ತಿದ್ದರೂ, ಅದರ ಮೂಲ ಭಾರತದಲ್ಲಿ ಇಲ್ಲ, ಅದು ಹೊರಗಿನಿಂದ ಬಂದಿರುವುದಾಗಿದೆ. ನಾವು ಚೀನಾದ ವಿರೋಧದಲ್ಲಿ ಎಷ್ಟೇ ಕೂಗಾಡಿದರು, ನಮ್ಮ ಸಂಚಾರವಾಣಿಗಳಲ್ಲಿರುವ ವಸ್ತುಗಳೆಲ್ಲ ಚೀನಾದಿಂದ ಬರುತ್ತವೆ. ಎಲ್ಲಿಯವರೆಗೆ ಚೀನಾದ ಮೇಲೆ ಅವಲಂಬಿಸಿರುತ್ತೇವೆಯೋ, ಅಲ್ಲಿಯವರೆಗೂ ಚೀನಾದ ಮುಂದೆ ಬಾಗಬೇಕಾಗುತ್ತದೆ, ಎಂದು ಸರಸಂಘಚಾಲಕ ಡಾ. ಮೋಹನ ಭಾಗವತ ಅವರು ಇಲ್ಲಿಯ ಐ.ಇ.ಎಸ್. ರಾಜಾ ಶಿವಾಜಿ ಶಾಲೆಯ ಧ್ವಜಾರೋಹಣ ಮಾಡುವಾಗ ಹೇಳಿದರು.