ಭಾರತದ ’ ಈಓಎಸ್ – ೩’ ಉಪಗ್ರಹದ ಉಡಾವಣೆ ವಿಫಲ

ಶ್ರೀಹರಿಕೋಟಾ (ಆಂಧ್ರಪ್ರದೇಶ) – ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (’ಇಸ್ರೋ’ದ ) ’ಅರ್ಥ್ ಅಬ್ಸರ್ವೇಶನ್ ಸ್ಯಾಟಲೈಟ್’ (ಪೃಥ್ವಿಯ ನಿರೀಕ್ಷಣೆ ಮಾಡುವ ಉಪಗ್ರಹ) ’ಈಓಎಸ್ – ೩’ನ ಉಡಾವಣೆಯ ವಿಫಲವಾಯಿತು. ಈ ಉಪಗ್ರಹವು ಶ್ರೀಹರಿಕೋಟಾದಲ್ಲಿ ಸತೀಶ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಅಗಸ್ಟ್ ೧೨ ರ ಬೆಳಿಗ್ಗೆ ೫.೪೩ಕ್ಕೆ ಉಡಾವಣೆ ಮಾಡಿತು; ಆದರೆ ನಿಶ್ಚಿತ ಅವಧಿಯ ಕೆಲವೇ ಸೆಕೆಂಡುಗಳ ಮೊದಲೇ ಮೂರನೇ ಹಂತದಲ್ಲಿ ’ಕ್ರಯೋಜನಿಕ್ ಎಂಜಿನ್’ ನಲ್ಲಿ ತೊಡಕು ಉಂಟಾಗಿದ್ದರಿಂದ ಉಪಗ್ರಹವು ನಿರ್ಧರಿತ ಕಕ್ಷೆಯಲ್ಲಿ ಸ್ಥಾಪಿತವಾಗಲಿಲ್ಲ. ತಾಂತ್ರಿಕ ತೊಡಕುಗಳಿಂದಾಗಿ ಉಪಗ್ರಹದ ನಿಯಂತ್ರಣ ಕಕ್ಷೆಯಿಂದ ಸಂಪರ್ಕ ಸ್ಥಗಿತಗೊಂಡಿತು.

ಅನಂತರ ‘ಇಸ್ರೋ’ದ ಪ್ರಮುಖರಾದ ಕೆ. ಶಿವನ್ ಇವರು ಉಡಾವಣೆಯ ವಿಫಲವಾಗಿದೆ ಎಂಬ ಮಾಹಿತಿಯನ್ನು ನೀಡಿದರು. ವಿಶೇಷವೆಂದರೆ ಈ ಉಪಗ್ರಹದ ಉಡಾವಣೆಯನ್ನು ಈ ಮೊದಲು ಮೂರು ಬಾರಿ ಸ್ಥಗಿತಗೊಳಿಸಲಾಗಿತ್ತು. ಈ ಉಪಗ್ರಹದಿಂದ ಭಾರತದೊಂದಿಗೆ ಚೀನಾ ಮತ್ತು ಪಾಕಿಸ್ತಾನದ ಗಡಿ ಪ್ರದೇಶಗಳ ಮೇಲೆ ನಿಗಾ ಇಡಲು ಸಾಧ್ಯವಾಗುತ್ತಿತ್ತು.