ನುಸುಳುಖೋರ ರೋಹಿಂಗ್ಯಾ ದೇಶಕ್ಕೆ ಅಪಾಯಕಾರಿ ! – ಕೇಂದ್ರ ಸರಕಾರ

ರೋಹಿಂಗ್ಯಾ, ಬಾಂಗ್ಲಾದೇಶಿಯರು ಇತ್ಯಾದಿ ನುಸುಳುಖೋರರು ದೇಶಕ್ಕೆ ಅಪಾಯಕಾರಿ ಇರುವುದು ಸ್ಪಷ್ಟವಾಗಿದೆ; ಆದರೆ ಸರಕಾರವು ಅವರನ್ನು ಆದಷ್ಟು ಪತ್ತೆ ಹಚ್ಚಿ ದೇಶದಿಂದ ಹೊರಗಟ್ಟಬೇಕು, ಎಂದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತದೆ !

ನವ ದೆಹಲಿ – ಭಾರತದಲ್ಲಿ ನುಸುಳಿ ವಾಸಿಸುತ್ತಿರುವ ರೋಹಿಂಗ್ಯಾ ದೇಶದ ಭದ್ರತೆಗೆ ಅಪಾಯಕಾರಿಯಾಗಿದ್ದಾರೆ. ಈ ನುಸುಳುಖೋರ ರೋಹಿಂಗ್ಯಾ ದೇಶದಲ್ಲಿ ಪ್ರತಿದಿನ ಒಂದಲ್ಲೊಂದು ಅಪರಾಧಿ ಕೃತ್ಯಗಳಲ್ಲಿ ತೊಡಗಿರುವುದು ಮಾಹಿತಿ ಬರುತ್ತಿದೆ. ಅವರನ್ನು ಗುರುತಿಸಲು ರಾಜ್ಯಗಳಿಗೆ ಆದೇಶ ನೀಡಲಾಗಿದ್ದು, ಈ ವಿಷಯವಾಗಿ ಕಾರ್ಯ ನಡೆಯುತ್ತಿದೆ ಎಂದು ಕೇಂದ್ರೀಯ ರಾಜ್ಯ ಗೃಹರಾಜ್ಯಮಂತ್ರಿ ನಿತ್ಯಾನಂದ ರಾಯ್ ಇವರು ಲೋಕಸಭೆಯಲ್ಲಿ ಮಾಹಿತಿ ನೀಡಿದರು.

ಕೇಂದ್ರೀಯ ರಾಜ್ಯ ಗೃಹರಾಜ್ಯಮಂತ್ರಿ ನಿತ್ಯಾನಂದ ರಾಯ್

ಇಡೀ ದೇಶದಲ್ಲಿ ರಾಷ್ಟ್ರೀಯ ಪೌರತ್ವದ ನೋಂದಣಿ (ಎನ್.ಅರ್.ಸಿ) ಜಾರಿ ಮಾಡುವ ಸಲುವಾಗಿ ಇಲ್ಲಿಯವರೆಗೆ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಸರಕಾರದಿಂದ 2021 ರ ಜನಗಣತಿಯ ಮೊದಲನೆಯ ಹಂತದಲ್ಲಿ ರಾಷ್ಟ್ರೀಯ ಜನಸಂಖ್ಯೆ ನೋಂದಣಿ (ಎನ್.ಪಿ.ಆರ್) ಅಪ್‍ಡೇಟ್ ಮಾಡುವ ನಿರ್ಣಯ ಕೈಕೊಂಡಿದೆ.