ಎಹ್.ಪಿ. ಯ ‘ಇಂಡಿಯಾ ಗೇಮಿಂಗ್ ಲ್ಯಾಂಡ್ಸ್ಕೇಪ್’ ಸಮೀಕ್ಷೆಯ ವರದಿ
|
|
ನಾಗಪುರ – ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಎಚ್.ಪಿ (ಹೇವ್ಲೆಟ್ ಪೇಕಾರ್ಡ್) ಈ ಸಂಸ್ಥೆಯು ರಾಜ್ಯದ ಪ್ರಮುಖ ನಗರಗಳಲ್ಲಿ ಗಣಕಯಂತ್ರದ ಆಟ (ಕಂಪ್ಯೂಟರ್ ಗೇಮ್) ಆಡುವ ವಿಷಯದಲ್ಲಿ ‘ಇಂಡಿಯಾ ಗೇಮಿಂಗ್ ಲ್ಯಾಂಡ್ಸ್ಕೇಪ್’ ಸಮೀಕ್ಷೆಯನ್ನು ನಡೆಸಿದೆ. ಇದರಲ್ಲಿ ಪುರುಷರ ತುಲನೆಯಲ್ಲಿ ಮಹಿಳೆಯರಿಗೆ ಗಣಕಯಂತ್ರದ ಆಟಗಳನ್ನು ಆಡುವ ಮತ್ತು ಅದನ್ನೇ ವೃತ್ತಿ ಮಾಡಿಕೊಳ್ಳುವ ಆಸಕ್ತಿಯು ಹೆಚ್ಚಾಗಿದೆ’ ಎಂಬ ಮಾಹಿತಿಯು ಗಮನಕ್ಕೆ ಬಂದಿದೆ. ಈ ಸಮೀಕ್ಷೆಯಲ್ಲಿ ಶೇ. 87 ರಷ್ಟು ಪುರುಷರು ಮತ್ತು ಶೇ. 91ರಷ್ಟು ಮಹಿಳೆಯರಿಗೆ ಇಂತಹ ಆಟಗಳಲ್ಲಿ ಆಸಕ್ತಿ ಇದೆ ಎಂಬುದು ತಿಳಿದುಬಂದಿದೆ.
ಕಳೆದ ಅನೇಕ ವರ್ಷಗಳಿಂದ ‘ಆನ್ಲೈನ್’ಆಟಗಳನ್ನು ಆಡುವಲ್ಲಿ ಗಮನಾರ್ಹ ಹೆಚ್ಚಳವಾಗಿದೆ. ಎಚ್.ಪಿ ಮಾಡಿರುವ ಸಮೀಕ್ಷೆಯಲ್ಲಿ ನಾಗಪುರದಲ್ಲಿನ ಆನ್ಲೈನ್ ಆಟಗಳನ್ನು ಆಡುವ ಶೇ. 96 ರಷ್ಟು ಜನರಲ್ಲಿ ಇದರಲ್ಲಿಯೇ ವೃತ್ತಿ ಮಾಡಿಕೊಳ್ಳುವ ಆಸಕ್ತಿಯಿದೆ. ಮುಂಬೈನಲ್ಲಿ ಈ ಪ್ರಮಾಣವು ಶೇ. 95 ರಷ್ಟಿದ್ದರೆ ಪುಣೆಯಲ್ಲಿ ಶೇ. 75 ರಷ್ಟಿದೆ. ಗಣಕಯಂತ್ರದ ಆಟಗಳನ್ನು ಆಡಲು ಗಣಕಯಂತ್ರಗಳ ಖರೀದಿಯ ಪ್ರಮಾಣವು ಮುಂಬೈನಲ್ಲಿ ಶೇ. 78ರಷ್ಟು ಆದರೆ ನಾಗಪುರದಲ್ಲಿ ಶೇ. 65ರಷ್ಟು ಹಾಗೂ ಪುಣೆಯಲ್ಲಿ ಶೇ. 53 ರಷ್ಟಿದೆ.