ಸಮಾಜ, ಸಂವಿಧಾನ ಹಾಗೂ ಸಂಪನ್ಮೂಲಗಳನ್ನು ಕಾಪಾಡಲು ‘ಜನ ಆಝಾದಿ’ ಹೋರಾಟ ನಡೆಸುವ ಸಂಕಲ್ಪ ! – ಮೇಧಾ ಪಾಟಕರ

ಪೂನಾ – ಸಮಾಜ, ಸಂವಿಧಾನ ಹಾಗೂ ಸಂಪನ್ಮೂಲಗಳನ್ನು ಕಾಪಾಡಲು ಜನಾಂದೋಲನವನ್ನು ದೇಶದಾದ್ಯಂತ ‘ಜನ ಆಝಾದಿ’ ಹೋರಾಟವನ್ನು ನಡೆಸುವ ಸಂಕಲ್ಪಪಮಾಡಲಾಗಿದೆ. ಆಗಸ್ಟ್ ೯ರ ಕ್ರಾಂತಿದಿನದಿಂದ ಸ್ವಾತಂತ್ರ್ಯದಿನದ ಅಮೃತಮಹೋತ್ಸವದ ವರೆಗೂ (ಆಗಸ್ಟ್ ೧೫, ೨೦೨೨) ದೇಶದಾದ್ಯಂತ ಸ್ವಾತಂತ್ರ್ಯಹೋರಾಟದಲ್ಲಿ ಮಹತ್ವ ಪಡೆದ ಸ್ಥಳಗಳಲ್ಲಿ ಜನಜಾಗೃತಿಯ ಆಂದೋಲನ ನಡೆಸಲಾಗುವುದು, ಎಂಬ ಮಾಹಿತಿಯನ್ನು ಆಂದೋಲನದ ರಾಷ್ಟ್ರೀಯ ಸಂಯೋಜಕ ಮುಖಂಡರಾದ ಮೇಧಾ ಪಾಟಕರ ನೀಡಿದರು. ವರ್ಷವಿಡೀ ಆನಂದೋತ್ಸವ ಆಚರಿಸುವುದಕ್ಕಿಂತ ಅಧಿಕಾರ ಹಾಗೂ ಹಕ್ಕು ನೀಡುವ ನಿಜವಾದ ಸ್ವಾತಂತ್ರ್ಯ ಬೇಕು ಎಂಬ ಅಪೇಕ್ಷೆಯನ್ನು ವ್ಯಕ್ತಪಡಿಸುತ್ತಾ ಅವರು ಕೇಂದ್ರ ಸರಕಾರದ ನೀತಿಗಳನ್ನು ಟೀಕಿಸಿದರು.

ಅವರು ‘ವನ, ಕಾಡು, ಭೂಮಿ ಇತ್ಯಾದಿಗಳ ಮೇಲೆ ಆಕ್ರಮಣ, ಮಹಿಳೆಯರ ಮೇಲೆ ಅತ್ಯಾಚಾರ, ನಿರುದ್ಯೋಗ, ಆದಿವಾಸಿ ಹಾಗೂ ದಲಿತರ ಸಮಸ್ಯೆಗಳತ್ತ ಗಮನ ಸೆಳೆದರು. ಉದಾರೀಕರಣ, ಖಾಸಗೀಕರಣ, ಜಾಗತೀಕರಣದ ಧೋರಣೆಯು ದೇಶವನ್ನು ಗುಲಾಮಗಿರಿಯತ್ತ ಕೊಂಡೊಯ್ಯುತ್ತಿದೆ. ಸಂವಿಧಾನದಲ್ಲಿ ಕಂಪನೀಕರಣಕ್ಕೆ ಸ್ಥಾನವಿಲ್ಲ; ಆದರೆ ಸರಕಾರದ ನೀತಿಗಳು ಕಂಪನೀಕರಣವನ್ನು ಪ್ರೋತ್ಸಾಹಿಸುತ್ತಿವೆ.