|
ಈ ಚಿತ್ರವನ್ನು ಪ್ರಕಟಿಸುವ ಉದ್ದೇಶ ಯಾರ ಧಾರ್ಮಿಕ ಭಾವನೆಗಳನ್ನು ನೋವುಂಟುಮಾಡುವುದಾಗಿರದೆ ನಿಜವಾದ ಸ್ಥಿತಿ ತಿಳಿಸುವುದಾಗಿದೆ
ಢಾಕಾ (ಬಾಂಗ್ಲಾದೇಶ) – ಇಲ್ಲಿಯ ಖುಲನಾ ಜಿಲ್ಲೆಯಲ್ಲಿರುವ ಶಿಯಾಲಿ ಗ್ರಾಮದಲ್ಲಿ ಆಗಸ್ಟ್ ೭ ರ ಮಧ್ಯಾಹ್ನ ನೂರಾರು ಮತಾಂಧರು ಜಮಾಯಿಸಿದರು. ಅವರು ಹಳ್ಳಿಯ ಹಿಂದೂಗಳ ೧೦ ದೇವಾಲಯಗಳ ಮೇಲೆ ದಾಳಿ ಮಾಡಿ ನಾಶಪಡಿಸಿದರು. ಅದರಲ್ಲಿ ೪ ದೊಡ್ಡ ಮತ್ತು ೬ ಸಣ್ಣ ದೇವಸ್ಥಾನಗಳು ಒಳಗೊಂಡಿವೆ. ಸ್ಥಳೀಯ ಹಿಂದೂಗಳು ನೀಡಿದ ಮಾಹಿತಿಯ ಪ್ರಕಾರ, ಮತಾಂಧರು ಗೋವಿಂದ ದೇವಸ್ಥಾನ, ಶಿಯಾಲಿ ಪೂರ್ವಪಾರಾ ಹರಿ ಮಂದಿರ, ಶಿಯಾಲಿ ಪೂರ್ವಪಾರಾ ದುರ್ಗಾ ದೇವಸ್ಥಾನ, ಶಿಯಾಲಿ ಮಹಾಸ್ಮಶಾನ ದೇವಸ್ಥಾನಗಳಲ್ಲಿ ದೇವತೆಗಳ ವಿಗ್ರಹಗಳ ವಿಡಂಬನೆ ಮಾಡಿದರು. ಅದರ ನಂತರ, ಮತಾಂಧರು ಹಿಂದೂಗಳ ೫೬ ಮನೆಗಳು ಮತ್ತು ಅನೇಕ ಅಂಗಡಿಗಳ ಮೇಲೆ ದಾಳಿ ಮಾಡಿ ಅವುಗಳನ್ನು ಲೂಟಿ ಮಾಡಿದರು. ಮತಾಂಧರು ಹಿಂದೂಗಳ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಅನೇಕರನ್ನು ಗಾಯಗೊಳಿಸಿದರು. ಹಸುಗಳು ಮತ್ತು ಇತರ ಸಾಕು ಪ್ರಾಣಿಗಳನ್ನು ಸಹ ತೆಗೆದುಕೊಂಡು ಹೋದರು. ಘಟನೆಯ ನಂತರ, ಸ್ಥಳೀಯ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಪ್ರಸ್ತುತ, ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
೧. ಸ್ಥಳೀಯ ಗ್ರಾಮಸ್ಥರು ಮತ್ತು ಪೂಜಾ ಪರಿಷತ್ತಿನ ನಾಯಕರು ನೀಡಿದ ಮಾಹಿತಿಯ ಪ್ರಕಾರ, ಆಗಸ್ಟ್ ೬ ರ ರಾತ್ರಿ ೯ ಗಂಟೆಗೆ, ಸ್ಥಳೀಯ ಹಿಂದೂ ಮಹಿಳೆಯರು ಕೀರ್ತನೆ ಮಾಡಲು ‘ಹರೇ ಕೃಷ್ಣ’ ಎಂದು ಹೇಳುತ್ತಾ ಹೊರಟಿದ್ದರು. ಅವರು ಒಂದು ಮಸೀದಿಯ ಹತ್ತಿರ ಬಂದಾಗ, ಇಮಾಮನು ಅವರನ್ನು ಖಂಡಿಸಿ ಮತ್ತು ನಾಮಜಪವನ್ನು ಮಾಡದಂತೆ ಬಲವಂತ ಮಾಡಿದ. ನಂತರ ಅವರ ನಡುವೆ ವಾಗ್ವಾದವಾಯಿತು. ಮರುದಿನ, ಎರಡೂ ಗುಂಪುಗಳು ರಾಜಿಮಾಡಿಕೊಳ್ಳಲು ಪೊಲೀಸ್ ಠಾಣೆಯಲ್ಲಿ ಭೇಟಿಯಾಗಲು ನಿರ್ಧರಿಸಿದವು.
೨. ಮರುದಿನ ಮಾತ್ರ ಸಮೀಪದ ಚಾಂದಪುರ ಹಳ್ಳಿಯ ನೂರಾರು ಮತಾಂಧರು, ಕೊಡಲಿ, ಕತ್ತಿ, ಚಾಕು ಮುಂತಾದ ಹರಿತ ಆಯುಧಗಳನ್ನು ತೆಗೆದುಕೊಂಡು ಶಿಯಾಲಿ ಗ್ರಾಮವನ್ನು ಪ್ರವೇಶಿಸಿದರು ಮತ್ತು ದೇವಾಲಯಗಳ ಮೇಲೆ ದಾಳಿ ಮಾಡಿದರು, ಹಾಗೆಯೇ ಹಿಂದೂಗಳ ಮನೆ ಮತ್ತು ಅಂಗಡಿಗಳನ್ನು ಲೂಟಿ ಮಾಡಿದರು.
ಮತಾಂಧರನ್ನು ಬೆನ್ನಟ್ಟಿದ ಹಿಂದೂಗಳನ್ನು ತಡೆದ ಪೋಲಿಸರು !
ಇಸ್ಲಾಮಿಕ್ ರಾಷ್ಟ್ರವಾಗಿರುವ ಬಾಂಗ್ಲಾದೇಶದ ಪೊಲೀಸರಿಂದ ಇನ್ನೇನು ನಿರೀಕ್ಷಿಸಬಹುದು ?
ರೂಪಶಾ ಠಾಣೆ ಪೂಜೋತ್ಸವ ಪರಿಷತ್ತಿನ ಅಧ್ಯಕ್ಷ ಶಕ್ತಿಪಾದ್ ಬಸು ನೀಡಿದ ಮಾಹಿತಿಯ ಪ್ರಕಾರ, ಹಿಂದೂಗಳು ದಾಳಿ ಮಾಡುವ ಮತಾಂಧರನ್ನು ಹಿಡಿಯುವಂತೆ ಪೊಲೀಸರನ್ನು ಒತ್ತಾಯಿಸಿದರು; ಆದರೆ ಪೊಲೀಸರು ಅದಕ್ಕೆ ನಿರಾಕರಿಸಿದರು. ಆದ್ದರಿಂದ, ಹಿಂದೂಗಳು ಮತಾಂಧರನ್ನು ಬೆನ್ನಟ್ಟಿ ಹಿಡಿಯಲು ಆರಂಭಿಸಿದರು, ಆಗ ಪೊಲೀಸರು ಅವರನ್ನು ತಡೆದು ಪ್ರತಿಕಾರವನ್ನು ತೆಗೆದುಕೊಳ್ಳಲು ಬಿಡಲಿಲ್ಲ.