ಹವಾಮಾನ ಬದಲಾವಣೆಯಿಂದಾಗಿ ಬ್ರಿಟನ್ ಹಿಮದ ಅಡಿಯಲ್ಲಿ ಹೂತುಹೋಗುವ ಭಯ ! – ಪ್ರಮುಖ ವಿಜ್ಞಾನಿಗಳ ಹೇಳಿಕೆ

ವಿಜ್ಞಾನವು ಮಾಡಿದ ತಥಾಕಥಿತ ಪ್ರಗತಿಯ ಪರಿಣಾಮ !

ಮುಂಬಯಿ – ವಿಶ್ವದ ಪ್ರಮುಖ ವಿಜ್ಞಾನಿ ಡಾ. ನಿಕಲಸ ಬಾಯರ್ಸ್ ಇವರು, ಸದ್ಯ ಹವಾಮಾನವು ವೇಗವಾಗಿ ಬದಲಾಗುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಬ್ರಿಟನ್ ಹಿಮದ ಅಡಿಯಲ್ಲಿ ಹೂತುಹೋಗಬಹುದು ಎಂಬ ಭಯವನ್ನು ವ್ಯಕ್ತಪಡಿಸಿದ್ದಾರೆ.

ಡಾ. ನಿಕಲಸ ಬಾಯರ್ಸ್ ಅವರು ಹೇಳಿದ ವಿಷಯಗಳು

೧. ಕಳೆದ ಒಂದು ಸಾವಿರ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ, ಕೊಲ್ಲಿ ದೇಶಗಳಿಂದ ಯುರೋಪ್‌ಗೆ ಬರುತ್ತಿರುವ ಬಿಸಿಗಾಳಿಯು ಅತ್ಯಂತ ದುರ್ಬಲವಾಗಿದೆ. ಈ ಗಾಳಿಯಿಂದ ಯುರೋಪಿನ ವಾತಾವರಣವು ಬೆಚ್ಚಗಿರುತ್ತದೆ; ಆದರೆ ಈಗ ಈ ಬಿಸಿ ಗಾಳಿಯ ಪ್ರವಾಹವು ತುಂಬಾ ಕಡಿಮೆಯಾಗುತ್ತಾ ಹೋಗುತ್ತಿದೆ. ಪರಿಣಾಮವಾಗಿ ಬ್ರಿಟನ್‌ನಲ್ಲಿ ತಾಪಮಾನವು ಕಡಿಮೆಯಾಗುತ್ತಿದೆ. ಮುಂಬರುವ ಕಾಲದಲ್ಲಿ ಪರಿಸ್ಥಿತಿಯು ಹೀಗೆ ಮುಂದುವರಿದರೆ, ಬ್ರಿಟನ್ ಶೀಘ್ರದಲ್ಲೇ ಹಿಮದ ಅಡಿಯಲ್ಲಿ ಹೂತುಹೋಗುವ ಸಾಧ್ಯತೆಯಿದೆ. ಆದ್ದರಿಂದ ಇಲ್ಲಿನ ಜೀವಸೃಷ್ಟಿಯೇ ಇಲ್ಲವಾಗಬಹುದು.

೨. ಕಳೆದ ವರ್ಷ ನಾರ್ಥಅಂಬರ್ಲ್ಯಾಂಡ್ ವಿಶ್ವವಿದ್ಯಾಲಯವು ಎಚ್ಚರಿಕೆಯನ್ನು ನೀಡಿತ್ತು. ಅದಕ್ಕನುಸಾರ, ಮುಂದಿನ ೩೦ ವರ್ಷಗಳು ಪೃಥ್ವಿಗಾಗಿ ಬಹಳ ಮುಖ್ಯವಾಗಿದೆ. ಅಂದರೆ ಮುಂಬರುವ ಕಾಲವು ಪೃಥ್ವಿಗಾಗಿ ‘ಮಿನಿ ಐಸ್ ಏಜ್’ (ಸಣ್ಣ ಹಿಮ ಯುಗ) ಆಗಿರುವುದು. ಈ ಅವಧಿಯಲ್ಲಿ ತಾಪಮಾನವು ಅತ್ಯಂತ ಕಡಿಮೆ ಇರುತ್ತದೆ. ಜಗತ್ತು ಮೈನಸ್ ೫೦ ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ತಾಪಮಾನವನ್ನು ಎದುರಿಸಬೇಕಾಗಬಹುದು.

೩. ಸೂರ್ಯನ ಶಾಖವೂ ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಸೂರ್ಯನ ತಾಪಮಾನ ಇನ್ನೂ ಕಡಿಮೆ ಯಾಗುವುದರಿಂದ ಬ್ರಿಟನ್‌ಗೆ ಸೂರ್ಯನ ಪ್ರಕಾಶ ತಲುಪಲು ಸಾಧ್ಯವಾಗುವುದಿಲ್ಲ. ಪರಿಣಾಮವಾಗಿ, ಬ್ರಿಟನ್ ತಂಪಿನಿಂದಾಗಿ ಹಿಮಗಟ್ಟಬಹುದು ಈ ಹೇಳಿಕೆಯ ನಂತರ ಜನರು ಭಯಪಡಬಾರದು, ಎಂದು ನಿಕಲಸ ಬಾಯರ್ಸ್ ಹೇಳಿದರು.
ಅನೇಕರು ‘ಮಿನಿ ಐಸ್ ಏಜ್’ ಇದೆಲ್ಲ ಕೇವಲ ವದಂತಿಯಾಗಿದೆ ಎಂದಿದ್ದಾರೆ. ಅವರ ಪ್ರಕಾರ, ಈ ಬದಲಾವಣೆ ಸಂಭವಿಸಿದಲ್ಲಿ, ಇದು ಕೇವಲ ಬ್ರಿಟನ್‌ನಲ್ಲಿ ಮಾತ್ರ ಆಗುತ್ತದೆ ಎಂದಿಲ್ಲ. ಕೇವಲ ಒಂದು ದೇಶವು ಹಿಮದಡಿಯಲ್ಲಿ ಹೋಗುವುದು, ಹೀಗಾಗಲು ಸಾಧ್ಯವಿಲ್ಲ.