ತುಮಕೂರಿನಲ್ಲಿ ನಡೆದ ಘಟನೆ
* ಷರಿಯತ ಕಾನೂನಿನ ಪ್ರಕಾರ, ಇಂತಹ ಕಾಮಾಂಧ ಶಿಕ್ಷಕರನ್ನು ಕಲ್ಲಿನಿಂದ ಹೊಡೆದು ಸಾಯಿಸಬೇಕೆಂದು ಯಾರಾದರು ಒತ್ತಾಯಿಸಿದರೆ ಅದರಲ್ಲಿ ಆಶ್ಚರ್ಯವೇನು ? – ಸಂಪಾದಕರು * ಇಲ್ಲಿಯವರೆಗೆ ಮದರಸಾಗಳಿಂದ ಅನೇಕ ವಿದ್ಯಾರ್ಥಿಗಳು ಭಯೋತ್ಪಾದಕರು ತಯಾರಾಗುತ್ತಿರುವ ಅನೇಕ ಉದಾಹರಣೆಗಳು ಬೆಳಕಿಗೆ ಬಂದಿದೆ. ಮದರಸಾಗಳಲ್ಲಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಮತ್ತು ಅಸಹಜ ಲೈಂಗಿಕ ಶೋಷಣೆಯ ಹಲವಾರು ಘಟನೆಗಳು ನಡೆದಿವೆ. ಇಂತಹ ಅಸಹ್ಯಕರ ಪ್ರಕಾರಗಳನ್ನು ಶಾಶ್ವತವಾಗಿ ತಡೆಗಟ್ಟಲು ಮತ್ತು ಮುಸಲ್ಮಾನ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ತರಲು ಮದರಸಾಗಳನ್ನು ಏಕೆ ನಿಷೇಧಿಸಬಾರದು ಎಂದು ಯಾರಾದರೂ ಯೋಚಿಸಿದರೆ ತಪ್ಪೇನಿದೆ ? – ಸಂಪಾದಕರು |
ತುಮಕೂರು – ಜಿಲ್ಲೆಯಲ್ಲಿ ಓರ್ವ ಅಪ್ರಾಪ್ತ ಹುಡುಗನಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬೆಂಗಳೂರಿನ ವಿಶೇಷ ನ್ಯಾಯಾಲಯವು ಮದರಸಾ ಶಿಕ್ಷಕನಿಗೆ 11 ವರ್ಷಗಳ ಜೈಲು ಶಿಕ್ಷೆ ಮತ್ತು 30,000 ರೂಪಾಯಿ ದಂಡವನ್ನು ವಿಧಿಸಿದೆ. ಅದರೊಂದಿಗೆ ‘ಜಿಲ್ಲಾ ವಿಧಿ ಸೇವೆಯ ಪ್ರಾಧಿಕಾರ’ಕ್ಕೆ ಸಂತ್ರಸ್ತ ಬಾಲಕನಿಗೆ 5 ಲಕ್ಷ ರೂ. ಪರಿಹಾರ ನೀಡಲು ನ್ಯಾಯಾಲಯವು ಆದೇಶಿಸಿದೆ.
ವರದಿಗಳ ಪ್ರಕಾರ, ಉತ್ತರಪ್ರದೇಶದಲ್ಲಿ ವಾಸಿಸುತ್ತಿರುವ ಮುಷರ್ರಫ್, ಕರ್ನಾಟಕದ ತುಮಕೂರಿನಲ್ಲಿ ಮದರಸಾದಲ್ಲಿ ಶಿಕ್ಷಕನಾಗಿದ್ದ. ಆತ ಏಪ್ರಿಲ್ 17, 2015 ರಂದು ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ್ದ. ಹುಡುಗನ ತಾಯಿ ಆತನನ್ನು ಭೇಟಿಯಾಗಲು ಮದರಸಾಕ್ಕೆ ಹೋದಾಗ, ಅವನು ನಡೆದದ್ದನ್ನೆಲ್ಲ ಹೇಳಿದನು. ತಾಯಿಯು ದೂರು ನೀಡಿದ ನಂತರ ಆರೋಪಿ ಶಿಕ್ಷಕನನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಆತನ ವಿರುದ್ಧ ‘ಪೋಕ್ಸೋ’ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲಾಗಿತ್ತು.
ಅಪ್ರಾಪ್ತ ಬಾಲಕನಿಗೆ ಲೈಂಗಿಕ ದೌರ್ಜನ್ಯ; ಸಲಿಂಗಕಾಮಿ ಮದರಸಾ ಶಿಕ್ಷಕನಿಗೆ 11 ವರ್ಷ ಜೈಲು ಶಿಕ್ಷೆ
#Tumkur https://t.co/QSqBLDnhaI— vijaykarnataka (@Vijaykarnataka) August 2, 2021
ಮುಷರ್ರಫ್‍ಗೆ ಕನ್ನಡ ಬಾರದ ಕಾರಣ, ಹುಡುಗನನ್ನು ರೈಲು ಟಿಕೆಟ್ ಪಡೆಯಲು ತುಮಕೂರು ರೈಲು ನಿಲ್ದಾಣಕ್ಕೆ ಕರೆದುಕೊಂಡು ಹೋಗಿದ್ದನು. ನಂತರ, ಆತ ಅಲ್ಲಿಯೇ ರಾತ್ರಿ ಹೊಟೇಲ್‍ನಲ್ಲಿ ಹುಡುಗನೊಂದಿಗೆ ಅಯೋಗ್ಯವಾಗಿ ಕಿರುಕುಳ ನೀಡಿದ್ದನು.