ಕಾರಗಿಲ್ ಯುದ್ಧದಲ್ಲಿ ಹುತಾತ್ಮರಾದ ಕ್ಯಾಪ್ಟನ್ ವಿಕ್ರಮ್ ಬತ್ರಾರವರ ಪ್ರೇಯಸಿ ಇಂದಿಗೂ ಅವಿವಾಹಿತೆ !

ಪ್ರಿಯಕರನನ್ನು ಈ ರೀತಿ ಪ್ರೀತಿಸುವ ಪ್ರೇಯಸಿ ಅಪರೂಪವೆಂದು ಹೇಳಬೇಕಾಗುವುದು !

ನವ ದೆಹಲಿ – ಕಾರಗಿಲ್ ಯುದ್ಧದಲ್ಲಿ ಪಡೆದ ವಿಜಯಕ್ಕೆ ಜುಲೈ 26 ರಂದು 22 ವರ್ಷಗಳು ತುಂಬಿದೆ. ಕಾರಗಿಲ್ ಯುದ್ಧದಲ್ಲಿ ಹಲವಾರು ಸೈನಿಕರು ಹಾಗೂ ಅಧಿಕಾರಿಗಳು ಹುತಾತ್ಮರಾದರು. ಅದರಲ್ಲಿ ಕ್ಯಾಪ್ಟನ್ ವಿಕ್ರಮ್ ಬತ್ರಾರವರ ಹೆಸರು ಪ್ರಮುಖವಾಗಿದೆ. ಅವರ ಜೀವನದ ಮೇಲಾಧಾರಿತ ‘ಶೇರಶಾಹ’ ಎಂಬ ಹಿಂದಿ ಚಲನಚಿತ್ರವು ಶೀಘ್ರದಲ್ಲಿಯೇ ಪ್ರದರ್ಶಿತವಾಗಲಿದೆ. ಇದರಲ್ಲಿ ಕ್ಯಾಪ್ಟನ್ ಬತ್ರಾರವರ ಪ್ರೇಮಕಥೆಯನ್ನು ತೋರಿಸಲಾಗಿದೆ. ಕ್ಯಾಪ್ಟನ್ ಬತ್ರಾರವರ ಪ್ರೇಯಸಿಯು ಅವರು ಹುತಾತ್ಮಗೊಂಡ ನಂತರ ವಿವಾಹ ಮಾಡಿಕೊಳ್ಳದಿರುವ ತೀರ್ಮಾನ ತೆಗೆದುಕೊಂಡಿದ್ದು ಇಂದಿಗೂ ಅವರು ಅವಿವಾಹಿತರಾಗಿದ್ದಾರೆ. ಡಿಂಪಲ್ ಛಿಮಾ ಎಂಬುದು ಅವರ ಪ್ರೇಯಸಿಯ ಹೆಸರಾಗಿದೆ.

ವರ್ಷ 1995 ರಲ್ಲಿ ಪಂಜಾಬ ವಿಶ್ವವಿದ್ಯಾಲಯದಲ್ಲಿ ಡಿಂಪಲ ಛಿಮಾರವರು ಕ್ಯಾಪ್ಟನ್ ಬತ್ರಾರವರನ್ನು ಮೊಟ್ಟ ಮೊದಲ ಬಾರಿ ಭೇಟಿಯಾದರು. ‘ನಮ್ಮ ಭೇಟಿಯಾಗುವುದು ಭಾಗ್ಯದಲ್ಲಿತ್ತು’, ಎಂದು ಡಿಂಪಲ್‍ರವರು ನುಡಿದರು. ವಿಶ್ವವಿದ್ಯಾಲಯದಲ್ಲಿ ಪ್ರವೇಶ ಸಿಕ್ಕಿದ ಬಳಿಕ ಸ್ವಲ್ಪ ಕಾಲದಲ್ಲಿಯೇ ಬತ್ರಾರಿಗೆ ಡೆಹರಾಡೂನ್‍ನಲ್ಲಿರುವ ಸೈನ್ಯದಳದಲ್ಲಿನ ತರಬೇತಿ ಕೇಂದ್ರದಲ್ಲಿ ಪ್ರವೇಶ ದೊರಕಿತ್ತು. ಅಷ್ಟರಲ್ಲಿ ಅವರಿಬ್ಬರು ಪರಸ್ಪರ ಪ್ರೇಮಿಸತೊಡಗಿದ್ದರು.

ಒಂದು ದಿನ ಮನಸಾ ದೇವಿಗೆ ಹೋಗಿದ್ದಾಗ ಅವರು ಒಟ್ಟಾಗಿ ಪ್ರದಕ್ಷಿಣೆ ಮಾಡಿದರು. ಆಗ ಬತ್ರಾರವರು ಡಿಂಪಲ್‍ರವರ ಅಂಗವಸ್ತ್ರದ ತುದಿಯನ್ನು ಹಿಡಿದುಕೊಂಡಿದ್ದರು. ಆಗ ಕ್ಯಾಪ್ಟನ್ ಬತ್ರಾರವರು `ಇಂದಿನಿಂದ ನೀವು ‘ಸೌ. ಬತ್ರಾ’ ಆಗಿರುವಿರಿ ಎಂದರು. ನಾವು 4 ಸುತ್ತು ಹಾಕಿದ್ದೇವೆ.’ ಎಂದರು. ಅನಂತರ ವಿಕ್ರಮ ಬತ್ರಾರವರು ತಮ್ಮ ಜೇಬಿನಿಂದ ಬ್ಲೇಡ್ ಅನ್ನು ತೆಗೆದು ತಮ್ಮ ಹೆಬ್ಬೆಟ್ಟನ್ನು ಕುಯ್ದಿಕೊಂಡರು. ತಮ್ಮ ಹೆಬ್ಬೆಟ್ಟಿನಿಂದ ಡಿಂಪಲ್‍ರವರ ಹಣೆಯನ್ನು ರಕ್ತದಿಂದ ತುಂಬಿಸಿದರು. ‘ಇದು ಜೀವನದಲ್ಲಿನ ಅತ್ಯಂತ ಅಮೂಲ್ಯವಾದ ಕ್ಷಣವಾಗಿತ್ತು’, ಎಂದು ಡಿಂಪಲ್‍ರವರು ನುಡಿದರು. ಅನಂತರ ಕಾರಗಿಲ್ ಯುದ್ಧ ಪ್ರಾರಂಭವಾದ ಬಳಿಕ ಕ್ಯಾಪ್ಟನ್ ಬತ್ರಾರವರು ಯುದ್ಧಕ್ಕಾಗಿ ಹೋಗಬೇಕಾಗಿ ಬಂತು ಹಾಗೂ ಅಲ್ಲಿ ಅವರು ಹುತಾತ್ಮರಾದರು. ಅನಂತರ ಡಿಂಪಲ್‍ರವರು ಎಂದಿಗೂ ವಿವಾಹವಾಗದಿರುವ ತೀರ್ಮಾನವನ್ನು ತೆಗೆದುಕೊಂಡರು.