ಗುಂಡುಹಾರಿಸಿ ಕಟಿಹಾರ್ (ಬಿಹಾರ) ನಗರದ ಮಹಾಪೌರರ ಹತ್ಯೆ.

ಮಹಾಪೌರರನ್ನೇ ಹಾಡುಹಗಲಲ್ಲಿ ಹತ್ಯೆ ಮಾಡಲಾಗುತ್ತದೆ. ಇದು ಬಿಹಾರದ ಪೊಲೀಸರಿಗೆ ನಾಚಿಕೆಗೇಡಿನ ವಿಚಾರ. ಇದರಿಂದ ಬಿಹಾರದಲ್ಲಿ ಮತ್ತೆ ಜಂಗಲ ರಾಜ್ಯವು ಪ್ರಾರಂಭವಾಗಿದೆ ಅಂತ ತಿಳಿಯಬೇಕೆ?

ಮಹಾಪೌರ ಶಿವರಾಜ್ ಪಾಸ್ವಾನ್

ಕಟಿಹಾರ್(ಬಿಹಾರ) : ಕಟಿಹಾರದ ಮಹಾಪೌರ ಶಿವರಾಜ್ ಪಾಸ್ವಾನ ಅವರನ್ನು ದ್ವಿಚಕ್ರವಾಹನದಲ್ಲಿ ಬಂದ ಅಜ್ಞಾತರು ಎದೆಗೆ ಮೂರು ಗುಂಡುಹಾರಿಸಿ ಹತ್ಯೆ ಮಾಡಿದ್ದಾರೆ. ಗುಂಡು ಹಾರಿಸಿದ ನಂತರ ಅಜ್ಞಾತರು ಪರಾರಿಯಾಗಿದ್ದಾರೆ. ದೇವಸ್ಥಾನದಲ್ಲಿ ದೇವರ ದರ್ಶನ ತೆಗೆದುಕೊಂಡು ಮನೆಗೆ ಹಿಂತಿರುಗುವಾಗ ಪಾಸ್ವಾನರ ಮೇಲೆ ಗುಂಡು ಹಾರಿಸಲಾಯಿತು. ಈ ಹತ್ಯೆಯನ್ನು ಯಾವ ಕಾರಣಕ್ಕಾಗಿ ಮಾಡಲಾಗಿದೆ ಎಂದು ಇದುವರೆಗೆ ಸ್ಪಷ್ಟವಾಗಿಲ್ಲ. ವಿಶೇಷವೆಂದರೆ ಮಹಾಪೌರ ಶಿವರಾಜ್ ಪಾಸ್ವಾನ್ ಇವರನ್ನು ಅವರದ್ದೇ ಸಂತೋಷ ಕಾಲೋನಿ ವಾರ್ಡಿನಲ್ಲಿ ಹತ್ಯೆ ಮಾಡಲಾಗಿದೆ. ಹತ್ಯೆಯ ನಂತರ ಪೊಲೀಸರು ಸಂಪೂರ್ಣ ಪರಿಸರದಲ್ಲಿ ಸಂಚಾರ ನಿರ್ಬಂಧ ಹೇರಿದ್ದಾರೆ.