ಅಶ್ಲೀಲತೆಯನ್ನು ಬಹಿರಂಗವಾಗಿ ಪ್ರಸಾರ ಮಾಡುವ ‘ಒ.ಟಿ.ಟಿ.’ ಮಾಧ್ಯಮಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ! – ಮುಕೇಶ ಖನ್ನಾ, ಹಿರಿಯ ನಟ

ಇಂತಹ ಬೇಡಿಕೆ ಏಕೆ ಮಾಡಬೇಕಾಗುತ್ತದೆ ? ಸರಕಾರಿ ಸಂಸ್ಥೆಗಳು ಇಂತಹ ಮಾಧ್ಯಮಗಳನ್ನು ತಾವಾಗಿಯೇ ಏಕೆ ನಿಷೇಧಿಸುವುದಿಲ್ಲ ?

ಮುಕೇಶ ಖನ್ನಾ

ಮುಂಬಯಿ : ಕೇವಲ ರಾಜ ಕುಂದ್ರಾ ಅವರು ಅಶ್ಲೀಲ ಚಲನಚಿತ್ರ ನಿರ್ಮಿಸುವ ಪ್ರಕರಣ ಬೆಳಕಿಗೆ ಬಂದಿದೆ, ಇಷ್ಟಕ್ಕೆ ಸಮಾಧಾನ ಪಟ್ಟುಕೊಳ್ಳದೇ ತನಿಖಾ ಸಂಸ್ಥೆಗಳು ಅಶ್ಲೀಲತೆಯನ್ನು ಬಹಿರಂಗವಾಗಿ ಪ್ರಸಾರ ಮಾಡುವ ‘ಒ.ಟಿ.ಟಿ.’ ಮಾಧ್ಯಮಗಳ ವಿರುದ್ಧ ಮತ್ತು ಅಂತಹ ಉದ್ಯೋಗಗಳನ್ನು ತೆರೆಮರೆಯಲ್ಲಿ ಮಾಡುವ ವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಎಂದು ಹಿರಿಯ ನಟ ಮುಕೇಶ ಖನ್ನಾ ಅವರು ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಖಂಡತುಂಡವಾಗಿ ಹೇಳಿದ್ದಾರೆ.

ಮುಕೇಶ್ ಖನ್ನಾ ಅವರು ತಮ್ಮ ಮಾತನ್ನು ಮುಂದುವರೆಸಿ ಹೀಗೆಂದರು,

೧. ಅಶ್ಲೀಲತೆಯನ್ನು ಪ್ರಸಾರ ಮಾಡುವ ರಾಜ ಕುಂದ್ರಾ ಮಾತ್ರವಲ್ಲ. ಅನೇಕರು ಹಣಕ್ಕಾಗಿ ಯುವಜನತೆಯನ್ನು ಅಶ್ಲೀಲತೆಯ ನರಕಕ್ಕೆ ತಳ್ಳುತ್ತಿದ್ದಾರೆ. ಯುವತಿಯರಿಗೆ ಸುಳ್ಳು ಹೇಳಿ ಈ ವ್ಯವಹಾರಕ್ಕೆ ಎಳೆಯಲಾಗುತ್ತಿದೆ. ರಾಜ ಕುಂದ್ರಾ ಅವರ ಪತ್ನಿ ಶಿಲ್ಪಾ ಶೆಟ್ಟಿ ‘ಅವರು ರಾಜ ಕುಂದ್ರಾ ಅವರ ಕೃತ್ಯಗಳಿಗೆ ತಮ್ಮ ಬೆಂಬಲವಿದೆಯೋ ಇಲ್ಲವೋ ?’ ಎಂದು ದೃಢವಾಗಿ ಹೇಳಬೇಕು.

೨. ಬಾಲಿವುಡ್ ಗೆ (ಭಾರತೀಯ ಚಲನಚಿತ್ರೋದ್ಯಮ) ಹಾಲಿವುಡ್‌ನ (ವಿದೇಶದಲ್ಲಿರುವ ಚಲನಚಿತ್ರೋದ್ಯಮ) ಪ್ರತಿಯೊಂದು ವಿಷಯವನ್ನು ನಕಲು ಮಾಡಲು ಇಷ್ಟವಾಗುತ್ತದೆ. ನಂತರ ಅದರಲ್ಲಿ ‘ಅನೇಕ ಬಾರಿ ವಿಚ್ಛೇದನೆ ಪಡೆಯುವುದು’, ಇದು ಸಹ ಬರುತ್ತದೆ.

೩. ಅಶ್ಲೀಲ ಚಲನಚಿತ್ರ ಮಾಡುವ ವ್ಯವಹಾರವನ್ನು ಭಾರತದ ಮೇಲಿನ ದಾಳಿ ಎಂದು ಅರ್ಥ ಮಾಡಿಕೊಳ್ಳಬೇಕು. ಚಿತ್ರಮಂದಿರಗಳಲ್ಲಿ ಹಿಂದೆ, ಬೆರಳೆಣಿಕೆಯಷ್ಟು ವಯಸ್ಕರಿಂದ ಮಾತ್ರ ಚಿತ್ರ ವೀಕ್ಷಿಸಲಾಗುತ್ತಿತ್ತು. ಅಲ್ಲಿ ಸಣ್ಣ ಮಕ್ಕಳಿಗೆ ಪ್ರವೇಶವಿರಲಿಲ್ಲ. ನಮ್ಮ ಕಾಲದಲ್ಲಿ, ೧೮ ವರ್ಷದೊಳಗಿನ ಮಕ್ಕಳು ಚಲನಚಿತ್ರಗಳನ್ನು ನೋಡದಿರುವುದು ಕಡ್ಡಾಯವಾಗಿತ್ತು. ಈಗ ಹಳ್ಳಿಗಳಲ್ಲಿಯೂ ಸಹ, ಅನೇಕ ಬಡ ಮತ್ತು ಅಜ್ಞಾನಿಯಾಗಿರುವ ಅನೇಕ ಬಾಂಧವರು ಹಾಗೂ ಚಿಕ್ಕ ಮಕ್ಕಳು ‘ಇಂಟರನೆಟ್’ದಲ್ಲಿ ಒಂದು ಗುಂಡಿಯನ್ನು ಒತ್ತುವ ಮೂಲಕ ಕ್ರಿಕೆಟ್, ಚಲನಚಿತ್ರಗಳು ಮತ್ತು ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸುತ್ತಿದ್ದಾರೆ.

೪. ಮಾದಕ ಪದಾರ್ಥ, ಅಶ್ಲೀಲತೆ ಅಥವಾ ರಾಷ್ಟ್ರ ವಿರೋಧಿ ಚಟುವಟಿಕೆಗಳು ಇವೆಲ್ಲ ವ್ಯಾವಹಾರಿಕ(ಉದ್ಯಮ) ಕ್ಷೇತ್ರವಾಗಿರಲು ಸಾಧ್ಯವಿಲ್ಲ. ವಿದೇಶಗಳಲ್ಲಿ ಇವುಗಳ ಮೇಲೆ ನಿಷೇಧವಿರಬಹುದು; ಆದರೆ ಭಾರತದಲ್ಲಿ ಅವುಗಳ ಮೇಲೆ ಯಾವುದೇ ನಿರ್ಬಂಧಗಳಿಲ್ಲ. ಇದಕ್ಕಾಗಿ ಕಟ್ಟುನಿಟ್ಟಿನ ಕಾನೂನುಗಳನ್ನು ತಯಾರಿಸಬೇಕು. ಅಶ್ಲೀಲತೆಯ ಚಿತ್ರೀಕರಣಗಳ ವ್ಯವಹಾರದಲ್ಲಿ ತೊಡಗಿರುವ ವರದಿಯಾದ ಅಪರಾಧವು ಕೇವಲ ಮಾಧ್ಯಮಗಳಿಗೆ ‘ಸಂವೇದನಾಶೀಲ ಸುದ್ದಿ’ ಆಗಿರುತ್ತದೆ. ತನಿಖಾ ಸಂಸ್ಥೆಗಳು ಹಲವಾರು ಅಕ್ರಮ ವ್ಯವಹಾರಗಳನ್ನು ಬೇರು ಸಹಿತ ಭೇದಿಸುವ ನಿರೀಕ್ಷೆಯಿದೆ.

‘ಒ.ಟಿ.ಟಿ.’ ಎಂದರೇನು ?

‘ಒ.ಟಿ.ಟಿ.’ ಎಂದರೆ ‘ಓವರ್-ದಿ-ಟಾಪ್.’ ಇದರ ಮೂಲಕ ಹೊಸದಾಗಿ ಪ್ರದರ್ಶಿತವಾಗುವ ಚಲನಚಿತ್ರಗಳು, ವೆಬ್ ಸರಣಿಗಳು, ಅನೇಕ ಹೊಸ ಮತ್ತು ಹಳೆಯ ಚಲನಚಿತ್ರಗಳು, ಸರಣಿಗಳು ಅಥವಾ ಇತರ ಕಾರ್ಯಕ್ರಮಗಳನ್ನು ಆನ್‌ಲೈನ್‌ನಲ್ಲಿ ಹಣ ನೀಡಿ ವೀಕ್ಷಿಸಬಹುದು. ವೀಕ್ಷಕರು ವರ್ಷಕ್ಕೊಮ್ಮೆ ಹಣ ಪಾವತಿಸಬೇಕಾಗುತ್ತದೆ. ಮೊದಲೆಲ್ಲ ಇದಕ್ಕೆ ಅಮೇರಿಕಾದಲ್ಲಿ ಮಾತ್ರ ಬೇಡಿಕೆಯಿತ್ತು; ಆದರೆ ಈಗ ಒ.ಟಿ.ಟಿ.ಗೆ ಪ್ರಪಂಚದಾದ್ಯಂತ ಬೇಡಿಕೆಯಿದೆ. ಭಾರತದಲ್ಲಿ ಪ್ರತಿ ವರ್ಷ ಕೋಟಿಗಟ್ಟಲೆ ರೂಪಾಯಿಗಳ ವ್ಯವಹಾರವನ್ನು ಒ.ಟಿ.ಟಿ. ಮೂಲಕ ಮಾಡಲಾಗುತ್ತದೆ.