ಸತತವಾಗಿ ಗೊಂದಲಗಳಿಂದ ಸದನದ ಕಾರ್ಯಕಲಾಪಗಳಾಗಲು ಬಿಡದ ಜನತಾದ್ರೋಹಿ ಜನಪ್ರತಿನಿಧಿಗಳ ಸದಸ್ಯತ್ವವನ್ನು ಸರಕಾರವು ಶಾಶ್ವತವಾಗಿ ರದ್ದುಪಡಿಸಬೇಕು, ಎಂಬುದು ಜನರ ಬೇಡಿಕೆಯಾಗಿದೆ !

‘ಪೆಗಾಸಸ್’ ಬೇಹುಗಾರಿಕೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಪ್ರತಿಪಕ್ಷಗಳ ಗಲಭೆ !

ನವ ದೆಹಲಿ : ‘ಪೆಗಾಸಸ್’ ಎಂಬ ಸಂಗಣಕದ ವ್ಯವಸ್ಥೆಯನ್ನು ಬಳಸಿಕೊಂಡು ಗಣ್ಯ ವ್ಯಕ್ತಿಗಳ ದೂರವಾಣಿಯನ್ನು ‘ಟ್ಯಾಪ್’ ಮಾಡಿದ ಬಗ್ಗೆ ಲೋಕಸಭೆಯಲ್ಲಿ ಜುಲೈ ೨೮ ರಂದು ಪ್ರತಿಪಕ್ಷಗಳು ಗೊಂದಲ ನಡೆಸಿದವು. ಈ ಸಮಯದಲ್ಲಿ ವಿರೋಧಕರು ಕಾಗದಪತ್ರಗಳನ್ನು ಎಸೆದರು ಮತ್ತು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದರಿಂದ ಲೋಕಸಭೆಯ ಕಾರ್ಯಕಲಾಪವನ್ನು ಮಧ್ಯಾಹ್ನ ೧೨.೩೦ ರವರೆಗೆ ಮುಂದೂಡಲಾಯಿತು. ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ವಿರೋಧಕರು ಗೊಂದಲ ನಡೆಸಿದರು. ಜುಲೈ ೨೮ ಇದು ಸಂಸತ್ತಿನ ಮಳೆಗಾಲದ ಅಧಿವೇಶನದ ಎಂಟನೆಯ ದಿನವಾಗಿತ್ತು. ಕಳೆದ ಕೆಲವು ದಿನಗಳಿಂದ ‘ಪೆಗಾಸಸ್’ ಪ್ರಕರಣದ ಬಗ್ಗೆ ಸಂಸತ್ತಿನಲ್ಲಿ ಕೋಲಾಹಲವು ನಡೆಯುತ್ತಿದೆ.

‘ಪೆಗಾಸಸ್ ಬೇಹುಗಾರಿಕೆ ಹಗರಣದ ಬಗ್ಗೆ ಪ್ರತಿಕ್ರಿಯಿಸುವಂತೆ ಪ್ರತಿಪಕ್ಷ ನಾಯಕರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾಹ ಅವರನ್ನು ಒತ್ತಾಯಿಸುತ್ತಿದ್ದಾರೆ. ಪ್ರತಿಪಕ್ಷದ ಸಭೆಯ ನಂತರ ರಾಹುಲ್ ಗಾಂಧಿಯವರು, ಪೆಗಾಸಸ್ ಬೇಹುಗಾರಿಕೆಯ ಪ್ರಕರಣದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸೇರಿದಂತೆ ೧೪ ವಿರೋಧ ಪಕ್ಷಗಳು ಸರಕಾರಕ್ಕೆ ನೋಟಿಸ್ ನೀಡಲಿವೆ. ಮತ್ತೊಂದೆಡೆ, ಸರಕಾರವು ಪ್ರತಿಪಕ್ಷಗಳೊಂದಿಗೆ ಚರ್ಚಿಸಲು ಅಥವಾ ಸದನದ ಕಾರ್ಯವನ್ನು ಪುನರಾರಂಭಿಸುವ ಇಚ್ಛೆಯನ್ನು ಹೊಂದಿಲ್ಲ ಎಂದು ಹೇಳಿದೆ.