ಮನೋರಂಜನಾ ಜಗತ್ತನ್ನು ಸಮರ್ಥ ಮೌಲ್ಯಗಳು ಮತ್ತು ವಿವೇಕದ ಆಧಾರದ ಮೇಲೆ ಸಾಬೀತುಪಡಿಸಬೇಕಾಗಿದೆ ! – ನಟಿ ಕಂಗನಾ ರಾಣಾವತ್

ಕಂಗನಾ ರಾಣಾವತ್

ಮುಂಬಯಿ : ನಮಗೆ ಮನರಂಜನಾ ಜಗತ್ತನ್ನು ಸಮರ್ಥ ಮೌಲ್ಯಗಳು ಮತ್ತು ವಿವೇಕದ ಆಧಾರದ ಮೇಲೆ ಸಾಬೀತುಪಡಿಸುವುದು ಅಗತ್ಯವಿದೆ ಎಂದು ನಟಿ ಕಂಗನಾ ರಾಣಾವತರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಅದನ್ನು ಜಾಲತಾಣದಲ್ಲಿ ಪ್ರಸಾರ ಮಾಡಿದ ಪ್ರಕರಣಕ್ಕೆ ನಂಬಂಧಿಸಿದಂತೆ ನಟಿ ಶಿಲ್ಪಾ ಶೆಟ್ಟಿಯ ಪತಿ ರಾಜ ಕುಂದ್ರಾ ಅವರನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. ಈ ಬಗ್ಗೆ ಕಂಗನಾ ರಾಣಾವತ್ ‘ಇನ್ಸ್ಟಾಗ್ರಾಮ್’ ಮೂಲಕ ಮೇಲಿನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ‘ಇಂತಹ ವಿಕೃತಿಯಿಂದ ನಾನು ಚಲನಚಿತ್ರೋದ್ಯಮವನ್ನು ಚರಂಡಿ ಎಂದು ಕರೆಯುತ್ತೇನೆ’ ಎಂದು ಅವರು ಖೇದಕರ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದರು. ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಪ್ರತಿಯೊಂದು ಹೊಳೆಯುವ ವಸ್ತುವೂ ಚಿನ್ನವಲ್ಲ. ನನ್ನ ‘ನಿರ್ಮಾಣ ಸಂಸ್ಥೆ’ಯ ಮೂಲಕ ನಿರ್ಮಿಸಲಾಗುವ ಚಲನಚಿತ್ರವೊಂದರಲ್ಲಿ ನಾನು ಈ ವಿಷಯಗಳನ್ನು ಪ್ರಸ್ತುತಪಡಿಸಲಿದ್ದೇನೆ ಎಂದು ಹೇಳಿದರು.