ಬಕ್ರೀದ್ ನಂದಾಗುವ ಪ್ರಾಣಿಗಳ ಹತ್ಯೆಯನ್ನು ನಿಲ್ಲಿಸಬೇಕು ಎಂದು ಬಂಗಾಲದ ಮುಸಲ್ಮಾನನಿಂದ ಬೇಡಿಕೆ

ಮುಸಲ್ಮಾನ ಸಮುದಾಯವು ಈಗ ತಮ್ಮ ಸಮಾಜಬಾಂಧವರ ಬೇಡಿಕೆಗಳನ್ನು ಸ್ವೀಕರಿಸುತ್ತದೆಯೇ ? ಎಲ್ಲಾ ನಾಗರಿಕರು ಇಂತಹವರ ಜೊತೆ ಹೆಚ್ಚಿನ ಸಂಖ್ಯೆಯಲ್ಲಿ ನಿಲ್ಲಬೇಕು !

ಅಲ್ತಾಬ್ ಹುಸೇನ್

ಕೊಲಕಾತಾ : ಬಕ್ರೀದ್ ದಿನದಂದು ಪ್ರಾಣಿಗಳ ಹತ್ಯೆಯನ್ನು ಕೊನೆಗೊಳಿಸಬೇಕೆಂದು ಬಂಗಾಲದ ಅಲ್ತಾಬ್ ಹುಸೇನ್ ಒತ್ತಾಯಿಸಿದ್ದಾರೆ. ಪ್ರಾಣಿಗಳ ಹತ್ಯೆಯ ವಿರುದ್ಧ ಧ್ವನಿ ಎತ್ತಿ ಆತ ೭೨ ಗಂಟೆಗಳ ರೋಜಾ (ಉಪವಾಸವನ್ನು) ಆಚರಿಸಿದ. ೩೩ ವರ್ಷದ ಹುಸೇನ್‍ನು ಯಾವುದೇ ಮಾಂಸವನ್ನು ತಿನ್ನದೆ ಈ ವರ್ಷದ ಈದ್ ಆಚರಿಸಿದ. ಆದರೂ ಪ್ರತಿವರ್ಷದಂತೆ ಈ ವರ್ಷವೂ ಹುಸೇನ್ ಅವರ ಸಹೋದರ ಈದ್ ನಿಮಿತ್ತ ಬಲಿ ಕೊಡಲು ಮೇಕೆ ತಂದರು ಎಂದು ಹುಸೇನ್ ವಿಷಾದಿಸಿದರು. ಹುಸೇನ್ ಪ್ರಾಣಿಗಳ ಮೇಲಿನ ಕ್ರೌರ್ಯ ಹೆಚ್ಚಾಗಿದೆ ಮತ್ತು ಯಾರೂ ಇದರ ವಿರುದ್ಧ ಧ್ವನಿ ಎತ್ತುವುದು ತೋರುತ್ತಿಲ್ಲ ನನಗೆ ಪ್ರಾಣಿಗಳ ಹತ್ಯೆಯ ಬಗ್ಗೆ ಜನರ ಗಮನವನ್ನು ಸೆಳೆಯಬೇಕಿದೆ. ಆದ್ದರಿಂದ ನಾನು ೭೨ ಗಂಟೆಗಳ ಕಾಲ ರೋಜಾ ಮಾಡುತ್ತಿದ್ದೇನೆ. ಹುಸೇನ್ ೨೦೧೪ ರಲ್ಲಿ ಒಂದು ಸ್ಥಳದಲ್ಲಿ ಪ್ರಾಣಿಗಳ ಕ್ರೌರ್ಯವನ್ನು ನೋಡಿದ ಮತ್ತು ಅಂದಿನಿಂದ ಮಾಂಸ ತಿನ್ನುವುದನ್ನು ನಿಲ್ಲಿಸಿದ್ದಾನೆ. ಅಂದಿನಿಂದ ಆತ ಸಂಪೂರ್ಣ ಸಸ್ಯಾಹಾರಿ ಆಗಿದ್ದಾನೆ.

ಸಾಮಾಜಿಕ ಮಾಧ್ಯಮದಿಂದ ಬೆದರಿಕೆ !

೩ ವರ್ಷಗಳ ಹಿಂದೆ ನನ್ನ ಸಹೋದರನು ಹತ್ಯೆಗಾಗಿ ತಂದ ಪ್ರಾಣಿಯನ್ನು ಹೇಗಾದರೂ ಉಳಿಸಲು ನನಗೆ ಸಾಧ್ಯವಾಯಿತು. ನನ್ನ ನಿಲುವು ನಮ್ಮ ಮನೆಯಲ್ಲಿ ಯಾರಿಗೂ ಸ್ವೀಕಾರಾರ್ಹವಾಗಲಿಲ್ಲ. ಪ್ರಾಣಿಗಳ ಕ್ರೌರ್ಯದ ವಿರುದ್ಧ ನಾನು ಮಾತನಾಡಲು ಪ್ರಾರಂಭಿಸಿದಾಗಿನಿಂದ ನನಗೆ ಸಾಮಾಜಿಕ ಮಾಧ್ಯಮದ ಮೂಲಕ ಬೆದರಿಕೆಯನ್ನು ನೀಡಲಾಗುತ್ತಿದೆ; ಆದರೆ ಕೆಲವರು ನನಗೆ ಸಹಾಯ ಮಾಡುತ್ತಿದ್ದಾರೆ ಎಂದು ಹೇಳಿದರು.