ದೇಶದಲ್ಲಿ ಅಪರಾಧಿಗಳಿಗೆ ಅನೇಕ ವರ್ಷಗಳ ನಂತರವೂ ಶಿಕ್ಷೆಯಾಗದೇ ಇದ್ದಲ್ಲಿ, ಅಪರಾಧಗಳು ಎಂದಾದರೂ ಕಡಿಮೆಯಾಗಬಹುದೇನು ? ಈ ಸ್ಥಿತಿಯು ಇಂದಿನವರೆಗಿನ ಎಲ್ಲಾ ಪಕ್ಷದ ರಾಜ್ಯಕರ್ತರಿಗೆ ನಾಚಿಕೆಯ ವಿಷಯವಾಗಿದೆ !
ನವ ದೆಹಲಿ – ೨೦೧೪ ರಿಂದ ೨೦೧೯ ಈ ಕಾಲಾವಧಿಯಲ್ಲಿ ದೇಶದ್ರೋಹಕ್ಕೆ ಸಂಬಂಧಿಸಿದಂತೆ ಒಟ್ಟು ೩೨೬ ಅಪರಾಧಗಳನ್ನು ನೊಂದಾಯಿಸಲಾಗಿದೆ ಹಾಗೂ ಈ ಪೈಕಿ ಕೇವಲ ೬ ಜನರಿಗೆ ಶಿಕ್ಷೆ ನೀಡಲಾಗಿದೆ, ಎಂದು ಕೇಂದ್ರದ ಗೃಹ ಮಂತ್ರಾಲಯವು ಮಾಹಿತಿ ನೀಡಿದೆ. ೨೦೨೦ರ ಅಂಕಿಅಂಶಗಳನ್ನು ತಯಾರಿಸಿಲ್ಲ ಎಂದು ಮಂತ್ರಾಲಯದಿಂದ ಹೇಳಲಾಗಿದೆ.
ಐದು ವರ್ಷದಲ್ಲಿ ಒಟ್ಟು 326 ದೇಶದ್ರೋಹ ಕೇಸ್ ದಾಖಲು; ಆದರೆ 6ರಲ್ಲಿ ಮಾತ್ರ ಆರೋಪ ಸಾಬೀತು!
#Unionhomeministry https://t.co/pPYd8VH16W— vijaykarnataka (@Vijaykarnataka) July 19, 2021
೧. ಝಾರಖಂಡದಲ್ಲಿ ೪೦, ಹರಿಯಾಣಾ ೩೧, ಬಿಹಾರ, ಜಮ್ಮು-ಕಾಶ್ಮೀರ ಹಾಗೂ ಕೇರಳದಲ್ಲಿ ೨೫, ಕರ್ನಾಟಕದಲ್ಲಿ ೨೨, ಉತ್ತರಪ್ರದೇಶದಲ್ಲಿ ೧೭, ಬಂಗಾಲದಲ್ಲಿ ೮, ದೆಹಲಿಯಲ್ಲಿ ೪ ಹಾಗೂ ಮಹಾರಾಷ್ಟ್ರ, ಪಂಜಾಬ್ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ೧ ರಂತೆ ಅಪರಾಧಗಳು ದಾಖಲಾಗಿವೆ. ಇನ್ನು ಕೆಲವು ರಾಜ್ಯಗಳಲ್ಲಿಯೂ ಅಪರಾಧಗಳನ್ನು ದಾಖಲಿಸಲಾಗಿದೆ
೨. ೩೨೬ ಅಪರಾಧಗಳ ಪೈಕಿ ಅಸ್ಸಾಂನಲ್ಲಿ ಎಲ್ಲಕ್ಕಿಂತ ಹೆಚ್ಚು ಅಂದರೆ ೫೪ ಅಪರಾಧಗಳು ದಾಖಲಾಗಿವೆ. ವಿಶೇಷವೆಂದರೆ ೨೦೧೪ ರಿಂದ ೨೦೧೯ ಈ ಕಾಲಾವಧಿಯಲ್ಲಿ ರಾಜ್ಯದ ಯಾವುದೇ ವ್ಯಕ್ತಿಗೆ ಶಿಕ್ಷೆಯಾಗಿಲ್ಲ.
೩. ೧೪೧ ಅಪರಾಧಗಳಲ್ಲಿ ಆರೋಪಪತ್ರ ಸಲ್ಲಿಸಲಾಗಿದೆ ಹಾಗೂ ೬ ವರ್ಷದ ಕಾಲಾವಧಿಯಲ್ಲಿ ಇವುಗಳ ಪೈಕಿ ೬ ಜನರಿಗೆ ಶಿಕ್ಷೆಯಾಗಿದೆ.
೪. ‘ಲೋಕಮಾನ್ಯ ತಿಲಕಯವರಂತಹ ಜನರಿಗೆ ಬ್ರಿಟಿಷರು ಉಪಯೋಗಿಸಿದ ಕಾನೂನಿನ ದೇಶದ್ರೋಹದ ಭಾ.ದಂ.ಸಂ. ಕಲಂ ೧೨೪ (ಅ)ನ ಏರ್ಪಾಡನ್ನು ಏಕೆ ರದ್ದು ಪಡಿಸುತ್ತಿಲ್ಲ ?’ ಎಂದು ಸರ್ವೋಚ್ಚ ನ್ಯಾಯಾಲಯವು ಕೆಲವು ದಿನಗಳ ಹಿಂದೆಯೇ ಕೇಂದ್ರಕ್ಕೆ ಕೇಳಿತ್ತು.