ಕನ್ಯಾಕುಮಾರಿ (ತಮಿಳನಾಡು)ಯ ಚರ್ಚ್‍ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ಬಹಿರಂಗ !

ಚರ್ಚ್ ಸಂಸ್ಥಾಪಕ ಹಾಗೂ ಅಧ್ಯಕ್ಷನಾಗಿರುವ ಕ್ರೈಸ್ತ ಧರ್ಮಪ್ರಚಾರಕನ ಬಂಧನ

* ಈ ವಾರ್ತೆಯನ್ನು ಭಾರತದ ಪ್ರಸಾರ ಮಾಧ್ಯಮಗಳು ಮುಚ್ಚಿಹಾಕಿವೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ಹಿಂದೂಗಳ ಸಂತರ ಮೇಲಿನ ಸುಳ್ಳು ಆರೋಪದ ಮೇಲೆ ದೊಡ್ಡ ದೊಡ್ಡ ವಾರ್ತೆಗಳನ್ನು ಪ್ರಕಟಿಸುವ ಪ್ರಸಾರ ಮಾಧ್ಯಮಗಳು ಇಂತಹ ಘಟನೆಯ ಸಮಯದಲ್ಲಿ ಮಾತ್ರ ಸುಮ್ಮನಿರುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

* ವಿದೇಶದಲ್ಲಿನ ಚರ್ಚ್‍ಗಳಲ್ಲಿ ಪಾದ್ರಿಯಿಂದ ಮಹಿಳೆ, ನನ್ ಮತ್ತು ಸಣ್ಣ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗುತ್ತದೆ, ಅದೇ ರೀತಿ ಭಾರತದಲ್ಲಿಯೂ ಆಗುತ್ತಿದೆ, ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ !

ಕ್ರೈಸ್ತ ಧರ್ಮಪ್ರಚಾರಕ ಲಾಲ್ ಎನ್.ಎಸ್. ಶಾಯಿನ್ ಸಿಂಗ್

ಕನ್ಯಾಕುಮಾರಿ (ತಮಿಳುನಾಡು) – ತಮಿಳುನಾಡಿನ ಪೊಲೀಸರು ಕನ್ಯಾಕುಮಾರಿ ಜಿಲ್ಲೆಯ ಜ್ಯೋತಿನಗರದಲ್ಲಿನ ‘ಡ್ಯೂಸಿಸ್ ಆಫ್ ಕ್ರೈಸ್ಟ ಆಂಗ್ಲಿಕನ ಚರ್ಚ್ ಆಫ್ ಇಂಡಿಯಾ’ಗೆ ಸಂಬಂಧಿಸಿದ ‘ಫೆಡರಲ ಚರ್ಚ್ ಆಫ್ ಇಂಡಿಯಾ’ದ ಮೇಲೆ ದಾಳಿ ನಡೆಸಿದರು. ಇಲ್ಲಿ ಚರ್ಚ್‍ನ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ಬಹಿರಂಗಗೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕ್ರೈಸ್ತ ಧರ್ಮಪ್ರಚಾರಕ ಲಾಲ್ ಎನ್.ಎಸ್. ಶಾಯಿನ್ ಸಿಂಗ್ ಸೇರಿದಂತೆ ೪ ಮಹಿಳೆಯರು ಮತ್ತು ಇತರ ಇಬ್ಬರನ್ನು ಬಂಧಿಸಿದೆ. ‘ಆ್ಯಪ ಇಂಡಿಯಾ’ ಸುದ್ದಿ ಜಾಲತಾಣವು ಈ ವಾರ್ತೆಯನ್ನು ಪ್ರಕಾಶಿಸಿದೆ.

ಈ ಚರ್ಚ್‍ನಲ್ಲಿ ದುಬಾರಿ ವಾಹನಗಳಲ್ಲಿ ಮಹಿಳೆಯರು ಮತ್ತು ಪುರುಷರು ಯಾವಾಗಲೂ ಬರುತ್ತಿರುತ್ತಾರೆ. ಚರ್ಚ್‍ನ ಅಧಿಕಾರಿಗಳಿಂದ ಚರ್ಚ್‍ನಲ್ಲಿ ವೈಶ್ಯಾವಾಟಿಕೆ ನಡೆಯುತ್ತಿದೆ, ಎಂಬ ಮಾಹಿತಿಯು ಪೊಲೀಸರಿಗೆ ಸಿಕ್ಕಿತ್ತು. ನಂತರ ಈ ದಾಳಿ ಮಾಡಲಾಯಿತು. ಕ್ರೈಸ್ತ ಧರ್ಮಪ್ರಚಾರಕ ಲಾಲ್ ಎನ್.ಎಸ್. ಶಾಯಿನ್ ಸಿಂಗ್ ಈ ಚರ್ಚ್‍ನ ಸಂಸ್ಥಾಪಕ ಮತ್ತು ಅಧ್ಯಕ್ಷನಾಗಿದ್ದಾನೆ.