ಪುಲ್ವಾಮಾದಲ್ಲಿ ಲಷ್ಕರ್-ಎ-ತೋಯಬಾದ ಕಮಾಂಡರ್ ಸಹಿತ ೩ ಭಯೋತ್ಪಾದಕರ ಹತ್ಯೆ

ಕಾಶ್ಮೀರದಲ್ಲಿ ಭದ್ರತಾ ಪಡೆಗಳು ನಿರಂತರವಾಗಿ ಭಯೋತ್ಪಾದಕರನ್ನು ಹತ್ಯೆ ಮಾಡುತ್ತಿದ್ದರೂ, ಅಲ್ಲಿಯ ಭಯೋತ್ಪಾದನೆ ಸಂಪೂರ್ಣವಾಗಿ ಕೊನೆಗೊಂಡಿಲ್ಲ. ಎಲ್ಲಿಯವರೆಗೆ ಭಯೋತ್ಪಾದಕರನ್ನು ತಯಾರಿಸುವ ಪಾಕಿಸ್ತಾನವನ್ನು ನಾಶ ಮಾಡುವುದಿಲ್ಲವೋ ಅಲ್ಲಿಯವರೆಗೆ ಹೊಸ ಭಯೋತ್ಪಾದಕರು ಹೊರಹೊಮ್ಮುತ್ತಲೇ ಇರುತ್ತಾರೆ ! ಆದ್ದರಿಂದ, ಪಾಕ್ ಎಂಬ ಭಸ್ಮಾಸುರನನ್ನು ನಾಶಮಾಡಿ !

ಪುಲ್ವಾಮಾ (ಜಮ್ಮು – ಕಾಶ್ಮೀರ) – ಇಲ್ಲಿ ನಡೆದ ಚಕಮಕಿಯಲ್ಲಿ ಭದ್ರತಾ ಪಡೆಗಳು ಮೂವರು ಉಗ್ರರನ್ನು ಹೊಡೆದುರುಳಿಸಿವೆ. ಇವರಲ್ಲಿ ಲಷ್ಕರ್-ಎ-ತೋಯಬಾದ ಕಮಾಂಡರ್ ಇಜಾಜ್ ಅಲಿಯಾಸ್ ಅಬು ಹುರೈರಾ ಸಹ ಸೇರಿದ್ದಾರೆ. ಉಳಿದ ಇಬ್ಬರು ಸ್ಥಳೀಯ ಭಯೋತ್ಪಾದಕರಾಗಿದ್ದಾರೆ. ಈ ಭಯೋತ್ಪಾದಕರಿಂದ ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಚಕಮಕಿಯ ನಂತರ ಇಲ್ಲಿ ಕಫ್ರ್ಯೂ ವಿಧಿಸಲಾಗಿದೆ.