ದ್ವಾರಕಾ (ಗುಜರಾತ) ಇಲ್ಲಿರುವ ದ್ವಾರಕಾಧೀಶ ಮಂದಿರಕ್ಕೆ ಸಿಡಿಲಿನ ಆಘಾತ; ಆದರೆ ಮಂದಿರಕ್ಕೆ ಯಾವುದೇ ಹಾನಿಯಾಗಿಲ್ಲ!

ದ್ವಾರಕಾಧೀಶನೇ ನಮ್ಮನ್ನು ಬಹುದೊಡ್ಡ ಸಂಕಟದಿಂದ ಪಾರು ಮಾಡಿದನು – ಸ್ಥಳೀಯ ನಾಗರೀಕರು

ದ್ವಾರಕಾಧೀಶ ಮಂದಿರ

ದ್ವಾರಕಾ(ಗುಜರಾತ)– ಇಲ್ಲಿಯ ಪ್ರಸಿದ್ಧ ದ್ವಾರಕಾಧೀಶ ಮಂದಿರದ ಮೇಲಿರುವ ೫೨ ಫೂಟನ ಧ್ವಜಕ್ಕೆ  ೧೩ ಜುಲೈರಂದು ಮಧ್ಯಾಹ್ನ ೨.೩೦ಕ್ಕೆ ಸಿಡಿಲು ಬಡಿದಾಗ, ಧ್ವಜಕ್ಕೆ ಅತ್ಯಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ. ಆದರೆ ದ್ವಾರಕಾಧೀಶ ಮಂದಿರಕ್ಕೆ ಯಾವುದೇ ಹಾನಿಯಾಗಿಲ್ಲ. ಸಿಡಿಲು ಬಡಿದಾಗಲೂ ಮಂದಿರದಲ್ಲಿ ಪೂಜೆ- ಅರ್ಚನೆ ನಡೆದಿತ್ತು ಮತ್ತು ಭಕ್ತರೂ ಉಪಸ್ಥಿತರಿದ್ದರು. ‘ಮಂದಿರದ ಒಂದು ಭಾಗದ ಮೇಲೆ ಸಿಡಿಲು ಬಡಿಯುವ ಪ್ರಸಂಗ ಇದೇ ಮೊದಲ ಬಾರಿಯಾಗಿದೆ. ದ್ವಾರಕಾಧೀಶರೆಂದರೆ ಸ್ವತಃ ಶ್ರೀಕೃಷ್ಣನು ಎಲ್ಲಿ ನೆಲೆಸಿದ್ದಾನೆಯೋ, ಅಲ್ಲಿಯ ಜನರ ಮೇಲೆ ಯಾವುದೇ ಸಂಕಟ ಬರುವುದಿಲ್ಲ. ದ್ವಾರಕಾಧೀಶನು ನಗರದ ನಾಗರಿಕರನ್ನು ದೊಡ್ಡ ದುರ್ಘಟನೆಯಿಂದ ಪಾರು ಮಾಡಿದ್ದಾನೆ’, ಎಂದು ಸ್ಥಳೀಯ ನಾಗರಿಕರು ಹೇಳುತ್ತಿದ್ದಾರೆ. ದ್ವಾರಕಾಧೀಶ ಮಂದಿರದ ಮೇಲೆ ಸಿಡಿಲು ಬಡಿಯುವಾಗಿನ ವ್ಹಿಡಿಯೋ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗುತ್ತಿದೆ. ಮಂದಿರದ ಅಕ್ಕಪಕ್ಕದಲ್ಲಿ ದಟ್ಟ ಜನವಸತಿಯಿದ್ದು, ಅವರ ಮೇಲೆ ಸಿಡಿಲು ಎರಗಿದ್ದರೆ, ಬಹಳ ದೊಡ್ಡ ಹಾನಿಯಾಗುತ್ತಿತ್ತು. ದ್ವಾರಕಾಧೀಶ ಮಂದಿರದ ಮೇಲೆ ಹಚ್ಚಲಾಗಿರುವ ಧ್ವಜದ ಒಂದು ವಿಶೇಷ ಮಹತ್ವವಿದೆ. ಈ ಧ್ವಜಕ್ಕೆ ‘ ೫೨ ಫೂಟ ಧ್ವಜ’ ಎಂದು ಹೇಳಲಾಗುತ್ತದೆ.

ದ್ವಾರಕಾಧೀಶ ಮಂದಿರದ ಮಹತ್ವ!

ದ್ವಾರಕಾಧೀಶ ಮಂದಿರವನ್ನು ಗುಜರಾತದಲ್ಲಿರುವ ಅತ್ಯಂತ ಪ್ರಾಚೀನ ಮತ್ತು ಪವಿತ್ರ ಮಂದಿರವೆಂದು ತಿಳಿಯಲಾಗುತ್ತದೆ. ಈ ಮಂದಿರವು ಗೋಮತಿ ನದಿಯ ದಡದಲ್ಲಿದೆ. ಭಗವಾನ ಶ್ರೀಕೃಷ್ಣನ ಮಂದಿರವಿದೆ. ದೇಶದ ಶ್ರೀಕೃಷ್ಣನ ಕೆಲವು ಪ್ರಮುಖ ಮಂದಿರಗಳಲ್ಲಿ ಇದೂ ಒಂದೆಂದು ಪರಿಗಣಿಸಲಾಗುತ್ತದೆ. ದ್ವಾರಕಾಧೀಶ ಮಂದಿರವು ಸುಮಾರು ೨ ಸಾವಿರ ೨೦೦ ವರ್ಷಗಳಷ್ಟು ಹಳೆಯದಾಗಿದ್ದು, ಅದನ್ನು ವಜ್ರನಾಭ ಎನ್ನುವವರು ಕಟ್ಟಿಸಿದರೆಂದು ಹೇಳಲಾಗುತ್ತದೆ. ಈ ಮಂದಿರದ ಪರಿಸರದಲ್ಲಿ ಭಗವಾನ ಶ್ರೀಕೃಷ್ಣನೊಂದಿಗೆ ಸುಭದ್ರಾ, ಬಲರಾಮ, ರೇವತಿ, ವಾಸುದೇವ, ರುಕ್ಮಿಣಿಯೊಂದಿಗೆ ಅನೇಕ ದೇವಿ ಮತ್ತು ದೇವತೆಗಳ ಮಂದಿರವಿದೆ. ಇಲ್ಲಿಗೆ ಶ್ರೀಕೃಷ್ಣ ಜನ್ಮಾಷ್ಟಮಿಗೆ ಜರುಗುವ ಉತ್ಸವವನ್ನು ನೋಡಲು ಲಕ್ಷಾಂತರ ನಾಗರಿಕರು ಆಗಮಿಸುತ್ತಾರೆ.