‘ರಾಜ್ಯದಲ್ಲಿ ನಮ್ಮ ಸರಕಾರವು ಬಂದನಂತರ ಪೊಲೀಸರಿಗೆ ಮತ್ತು ಆಡಳಿತಾಧಿಕಾರಿಗಳಿಗೆ ಮೂತ್ರ ಕುಡಿಸುವೆವು !’(ಅಂತೆ)

  • ಉತ್ತರಪ್ರದೇಶದ ಸಮಾಜವಾದಿ ಪಕ್ಷದ ಮಾಜಿ ಶಾಸಕ ವಿಜಯಪಾಲ ಸಿಂಗ ಇವರಿಂದ ಬೆದರಿಕೆ !

  • ಪೊಲೀಸರಿಂದ ದೂರು ದಾಖಲು !

ಇಂತಹ ನಾಯಕರನ್ನು ಕೂಡಲೇ ಬಂಧಿಸಿ ಸೆರೆಮನೆಗೆ ಅಟ್ಟ ಬೇಕು ಮತ್ತು ಅವರ ಮೇಲೆ ಶೀಘ್ರಗತಿ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಹೂಡಿ ಕಠಿಣ ಶಿಕ್ಷೆಯಾಗುವಂತೆ ಸರಕಾರವು ಪ್ರಯತ್ನಿಸಬೇಕು !

ಬರೆಲಿ (ಉತ್ತರ ಪ್ರದೇಶ) – ಇಲ್ಲಿಯ ಸಮಾಜವಾದಿ ಪಕ್ಷದ ಮಾಜಿ ಶಾಸಕ ವಿಜಯಪಾಲ ಸಿಂಗ್ ಇವರ ಪತ್ನಿಯು ಸ್ಥಳಿಯ ಚುನಾವಣೆಯಲ್ಲಿ ಸೋತರು. ತದನಂತರ ಸಿಂಗ್‌ರು ಆಡಳಿತಾಧಿಕಾರಿ ಮತ್ತು ಪೊಲೀಸರನ್ನು ಉದ್ದೇಶಿಸಿ, ‘ರಾಜ್ಯದಲ್ಲಿ ಸಮಾಜವಾದಿ ಪಕ್ಷದ ಸರಕಾರ ಬಂದರೆ ನಿಮಗೆ ಮೂತ್ರ ಕುಡಿಸಲಾಗುವುದು’, ಎಂದು ಬೆದರಿಕೆಯನ್ನು ನೀಡಿದರು. ಈ ಬೆದರಿಕೆಯ ವಿಡಿಯೋ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗಿದೆ. ನಂತರ ಪೊಲೀಸರು ಸಿಂಗ್ ಹಾಗೂ ಅವರ ೩೦ ಬೆಂಬಲಿಗರ ಮೇಲೆ ಅಪರಾಧವನ್ನು ದಾಖಲಿಸಿದ್ದಾರೆ.

ಪತ್ನಿಯ ಸೋಲಿನ ನಂತರ ವಿಜಯಪಾಲ ಸಿಂಗ್ ತನ್ನ ಪತ್ನಿಯನ್ನು ಕರೆತರಲು ಮತ ಏಣಿಕಾ ಕೇಂದ್ರಕ್ಕೆ ಹೋಗುತ್ತಿರುವಾಗ ಪೊಲೀಸರು ಅವರನ್ನು ಮತ್ತು ಅವರ ಬೆಂಬಲಿಗರನ್ನು ತಡೆದರು. ಇದರಿಂದ ಅವರು ಈ ಬೆದರಿಕೆಯನ್ನು ನೀಡಿದರು.