ಕೊರೊನಾ ನಿಯಮಗಳ ಪಾಲಿಸದಿದ್ದಲ್ಲಿ ಮೂರನೇ ಅಲೆಯು ಹೆಚ್ಚು ಅಪಾಯಕಾರಿ ! – ಇಂಡಿಯನ್ ಮೆಡಿಕಲ್ ಅಸೊಸಿಯೇಶನ್

ನವ ದೆಹಲಿ – ಪ್ರಧಾನಿ ಮೋದಿಯವರ ಸಕ್ರಿಯವಾದ ನೇತೃತ್ವ, ಅತ್ಯಾಧುನಿಕ ವೈದ್ಯಕೀಯ ವ್ಯವಸ್ಥೆ ಹಾಗೂ ದೇಶದಲ್ಲಿನ ವೈದ್ಯರ ಸೇವಾಭಾವ ಇದರಿಂದ ಭಾರತವು ಕೊರೊನಾ ಮಹಾಮಾರಿಯ ಎರಡನೇ ಅಲೆಯಿಂದ ನಿಧಾನವಾಗಿ ಹೊರ ಬರುತ್ತಿದೆ; ಆದರೆ ಮೂರನೆಯ ಅಲೆಯ ಅಪಾಯವನ್ನು ಗಮನಕ್ಕೆ ತೆಗೆದುಕೊಂಡು ನಮಗೆ ಇನ್ನೂ ಹೆಚ್ಚು ಎಚ್ಚರಿಕೆಯಿಂದ ಹೆಜ್ಜೆಯನ್ನು ಇಡುವುದು ಅಗತ್ಯವಿದೆ. ಕೊರೊನಾದ ಪ್ರಸಾರದ ಬಗ್ಗೆ ಕಳೆದ ಒಂದುವರೆ ವರ್ಷಗಳ ಅನುಭವದ ನಂತರ ಗಮನಕ್ಕೆ ಬಂದ ಒಂದು ಅಂಶವೆಂದರೆ, ವ್ಯಾಕ್ಸಿನೇಶನ್ (ಲಸಿಕೀಕರಣ)ದ ಪ್ರಮಾಣವನ್ನು ಹೆಚ್ಚಿಸುವುದು, ಇದೊಂದೇ ಉಪಾಯವಾಗಿದೆ, ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಒಂದು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದೆ.

ಅಸೋಸಿಯೇಶನ್ ಇದರ ಬಗ್ಗೆ ಹೇಳುವಾಗ, ‘ಪ್ರವಾಸೋದ್ಯಮ, ತೀರ್ಥಕ್ಷೇತ್ರ, ಧಾರ್ಮಿಕ ಉತ್ಸವ ಇವೆಲ್ಲವುಗಳ ನಮಗೆ ಅಗತ್ಯವಿದೆ; ಆದರೆ ಇದಕ್ಕಾಗಿ ಕೆಲವು ತಿಂಗಳು ಕಾಯುವುದು ಹೆಚ್ಚು ಸೂಕ್ತವಾಗಿದೆ. ಸಧ್ಯ ದೇಶದಲ್ಲಿ ಕೆಲವು ಪ್ರವಾಸೋದ್ಯಮ ಸ್ಥಳಗಳಲ್ಲಿ ಕೊರೊನಾ ತಡೆಗಟ್ಟುವಿಕೆ ನಿಯಮಗಳ ಉಲ್ಲಂಘನೆ ಆಗುತ್ತಿರುವುದು ಕಂಡು ಬರುತ್ತಿದೆ. ಒಂದು ವೇಳೆ ಹೀಗೆ ಮುಂದುವರೆದಲ್ಲಿ, ಮೂರನೆಯ ಅಲೆ ಖಂಡಿತವಾಗಿಯೂ ಬರುವುದು. ಶೀಘ್ರಾತಿಶೀಘ್ರ ಕೊರೊನಾ ವಿರುದ್ಧದ ವ್ಯಾಕ್ಸಿನೇಶನ್(ಲಸಿಕೀಕರಣ) ಮತ್ತು ಸಾಮಾಜಿಕ ಅಂತರದ ನಿಯಮಗಳ ಪಾಲನೆ ಮಾಡುವುದು ಅತ್ಯಂತ ಅಗತ್ಯವಿದೆ ಎಂದು ಹೇಳಿದೆ.