ಕಲೊಲ(ಗುಜರಾತ)ನಲ್ಲಿ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ ಗೋಮಾಂಸದಿಂದ ತುಂಬಿದ ವಾಹನವನ್ನು ತೆಗೆದುಕೊಂಡು ಪರಾರಿಯಾದ ಮತಾಂಧರು !

ಓರ್ವ ಪೊಲೀಸ್‍ಗೆ ಗಾಯ, ಒಂದು ವಾಹನಕ್ಕೆ ಹಾನಿ !

ಪೊಲೀಸ್ ಠಾಣೆಯೊಂದಿಗೆ ತಮ್ಮ ರಕ್ಷಣೆಯನ್ನು ಮಾಡಿಕೊಳ್ಳಲಾಗದ ಪೊಲೀಸರಿಂದ ಏನು ಪ್ರಯೋಜನ ? ನಾಳೆ ೨-೩ ಭಯೋತ್ಪಾದಕರು ಶಸ್ತ್ರಾಸ್ತ್ರ ಸಹಿತ ದಾಳಿ ಮಾಡಿದರೆ, ಪೊಲೀಸರು ಬದುಕುಳಿಯುವರೇ ? ಇಂತಹವರಿಗೆ ನೀಡುವಂತಹ ತರಬೇತಿಯು ಎಷ್ಟು ಕಳಪೆಮಟ್ಟದ್ದಾಗಿದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ !

ಕಲೊಲ(ಗುಜರಾತ) – ಇಲ್ಲಿ ಜುಲೈ ೮ ರಂದು ಪೊಲೀಸರಿಗೆ ಗೋಮಾಂಸ ತುಂಬಿದ ಒಂದು ವಾಹನವು ಕಂಡುಬಂದಿತ್ತು. ಇಮ್ರಾನ್ ಪಾವಡಾ ಮತ್ತು ಫಾರುಖ ಪಾವಡಾ ಇವರಿಬ್ಬರು ಈ ವಾಹನವನ್ನು ತೆಗೆದುಕೊಂಡು ಹೋಗುತ್ತಿದ್ದರು. ಪೊಲೀಸರನ್ನು ನೋಡಿ ಅವರಿಬ್ಬರು ಪರಾರಿಯಾದರು. ಪೊಲೀಸರು ಈ ವಾಹನವನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋದ ಕೆಲವೇ ಕಾಲಾವಧಿಯಲ್ಲಿ ಇಮ್ರಾನ್ ಮತ್ತು ಫಾರುಖ ಇವರು ಮತಾಂಧರ ಸಮೂಹವನ್ನು ಕರೆತಂದು ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದರು. ಇದರಲ್ಲಿ ಓರ್ವ ಪೊಲೀಸ್ ಗಾಯಗೊಂಡರು, ಹಾಗೂ ಪೊಲೀಸರ ಒಂದು ವಾಹನಕ್ಕೆ ಹಾನಿ ಆಯಿತು. ಈ ಸಮಯದಲ್ಲಿ ಮತಾಂಧರು ಗೋಮಾಂಸದ ವಾಹನವನ್ನು ತೆಗೆದುಕೊಂಡು ಪರಾರಿಯಾದರು.