ಕಾಂಗ್ರೆಸ್ ಹಿಂದುತ್ವವಿರೋಧಿ ಪಕ್ಷವಾಗಿದ್ದು ನನಗೆ ಪೂಜೆ ಮಾಡಲು ಬಿಡುವುದಿಲ್ಲ ! – ಕಾಂಗ್ರೆಸ್‍ನ ಶಾಸಕ ರಾಕೇಶ್ ಸಿಂಗ್

ಕಾಂಗ್ರೆಸ್‍ಗೆ ಕಪಾಳಮೋಕ್ಷ !

ಕಾಂಗ್ರೆಸ್‍ನವರಿಗೆ ಇಷ್ಟು ತಡವಾಗಿ ಹೇಗೆ ಗಮನಕ್ಕೆ ಬರುತ್ತಿದೆ ?

ಕಾಂಗ್ರೆಸ್ ಶಾಸಕ ರಾಕೇಶ್ ಸಿಂಗ್

ರಾಯಬರೆಲಿ (ಉತ್ತರಪ್ರದೇಶ) – ನಾನು ಯಾವಾಗ ಪೂಜೆ ಅಥವಾ ಅಖಂಡ ರಾಮಾಯಣವನ್ನು ಓದುತ್ತೇನೆ, ಆಗ ಕಾಂಗ್ರೆಸ್‍ನವರು ನನಗೆ ಅವುಗಳನ್ನು ಮಾಡದಂತೆ ತಡೆಯಲು ಪ್ರಯತ್ನ ಮಾಡುತ್ತಾರೆ. ಯಾರೂ ಒಳ್ಳೆಯ ಕೆಲಸ ಮಾಡಬಾರದು ಎಂದು ಕಾಂಗ್ರೆಸ್‍ನವರ ನೀತಿಯಾಗಿ ಬಿಟ್ಟಿದೆ, ಕಾಂಗ್ರೆಸ್ ಶೇಕಡಾ ನೂರರಷ್ಟು ಹಿಂದುತ್ವವನ್ನು ವಿರೋಧಿಸುವ ಪಕ್ಷವಾಗಿದೆ. ನಾನು ಪಕ್ಷವನ್ನು ಬಿಡುವುದಿಲ್ಲ.(ಕಾಂಗ್ರೆಸ್ ಹಿಂದೂವಿರೋಧಿ ಹಾಗೂ ರಾಷ್ಟ್ರಘಾತಕವಾಗಿದೆ. ಹೀಗಿರುವಾಗ ಈ ಪಕ್ಷವನ್ನು ತ್ಯಜಿಸಬೇಕೆಂದು ಅನಿಸದಿರಲು ಕಾರಣವೇನು?, ಇದರ ಬಗ್ಗೆ ಸಂಬಂಧಪಟ್ಟವರು ಜನರಿಗೆ ಉತ್ತರಿಸಬೇಕು ! – ಸಂಪಾದಕರು) ‘ಕಾಂಗ್ರೆಸ್ ಶೇ. ೮೫ ರಷ್ಟು ಇರುವ ಜನರನ್ನು (ಹಿಂದೂಗಳನ್ನು) ಬಿಟ್ಟು ಶೇ. ೧೫ ರಷ್ಟು ಇರುವವರೊಂದಿಗೆ (ಮುಸಲ್ಮಾನರನ್ನು) ಮುಂದೆ ಸಾಗಲು ಬಯಸುತ್ತಿದ್ದಲ್ಲಿ ಕಾಂಗ್ರೆಸ್‍ನ ಅನೇಕ ನಾಯಕರು ಪಕ್ಷವನ್ನು ಬಿಡಬಹುದು’, ಎಂಬ ಎಚ್ಚರಿಕೆಯನ್ನು ಇಲ್ಲಿಯ ಕಾಂಗ್ರೆಸ್ ಶಾಸಕ ರಾಕೇಶ್ ಸಿಂಗ್ ನೀಡಿದ್ದಾರೆ. ಇತ್ತೀಚೆಗೆ ನಡೆದ ಸ್ಥಳಿಯ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ೧೮ ರ ಪೈಕಿ ಒಂದೇ ಒಂದು ಸ್ಥಾನ ಸಿಕ್ಕಿಲ್ಲ. ರಾಯಬರೆಲಿ ಪರಿಸರದಲ್ಲಿ ಪಂಚವಟಿ ಮನೆತನದ ಪ್ರಭಾವ ಇದೆ ಮತ್ತು ಅದು ಕಾಂಗ್ರೆಸ್‍ಗೆ ಸಂಬಂಧಿಸಿದೆ. ಈ ಚುನಾವಣೆಯಲ್ಲಿ ಈ ಮನೆತನದ ರಾಕೇಶ್ ಸಿಂಗ್ ಪ್ರಚಾರದಿಂದ ದೂರ ಸರಿದಿದ್ದರು. ಆದ್ದರಿಂದ ಕಾಂಗ್ರೆಸ್ ಸೋಲಿಗೆ ರಾಕೇಶ್ ಸಿಂಗ್ ಕಾರಣಕರ್ತರಾಗಿದ್ದಾರೆ, ಎಂದು ಹೇಳಲಾಗುತ್ತಿದೆ.