ಮಡಿಕೇರಿಯಲ್ಲಿ ಯುವತಿಯ ಹೆಸರಿನಲ್ಲಿ ಫೇಸ್‍ಬುಕ್‍ನಿಂದ ಓರ್ವ ಮಹಿಳೆಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಮತಾಂಧನಿಗೆ ಥಳಿತ !

ಮಡಿಕೇರಿ – ಯುವತಿಯ ಹೆಸರಿನಲ್ಲಿ ಫೇಸ್‍ಬುಕ್‍ನಲ್ಲಿ ಮಹಿಳೆಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಮತಾಂಧ ಯುವಕನನ್ನು ಉಪಾಯದಿಂದ ಕರೆಸಿಕೊಂಡು ಥಳಿಸಿ ಪೊಲೀಸರಿಗೆ ಒಪ್ಪಿಸಲಾಗಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಮಡಿಕೇರಿ ಸಮೀಪದ ಹಾಕತ್ತೂರಿನ ಅಶ್ರಫ್ ಎಂಬ ಯುವಕ ಕಳೆದ ೧೫ ದಿನಗಳಿಂದ ಯುವತಿಯ ಹೆಸರಿನಿಂದ ಒಬ್ಬ ಮಹಿಳೆಯೊಂದಿಗೆ ಅಶ್ಲೀಲ ಸಂಭಾಷಣೆ (ಚಾಟಿಂಗ್) ಮಾಡುತ್ತಿದ್ದ. ತನ್ನ ಹೆಸರು ‘ಅರುಣಾ’ ಎಂದು ಹೇಳಿಕೊಂಡಿದ್ದ ಮತಾಂಧನನ್ನು ಉಪಾಯದಿಂದ ಮಡಿಕೇರಿಗೆ ಕರೆಸಲಾಯಿತು. ಬಸ್ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಯುವಕನನ್ನು ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಲಾಗಿದೆ. ಅವನ ವಿಚಾರಣೆಯಲ್ಲಿ ಅವನೊಟ್ಟಿಗೆ ಮತ್ತಿಬ್ಬರೂ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಅವರನ್ನು ಹುಡುಕುತ್ತಿದ್ದಾರೆ.