ಬಿಜೆಪಿಯಿಂದ ವಿರೋಧ !
|
ಚೆನ್ನೈ (ತಮಿಳುನಾಡು) – ತಮಿಳುನಾಡಿನಲ್ಲಿ ಹೊಸದಾಗಿ ಚುನಾಯಿತ ಡಿಎಂಕೆ ಪಕ್ಷದ ಸರಕಾರವು ೧೦೦ ದಿನಗಳಲ್ಲಿ ರಾಜ್ಯದ ದೇವಾಲಯಗಳಲ್ಲಿ ೨೦೦ ಬ್ರಾಹ್ಮಣೇತರ ಪುರೋಹಿತರನ್ನು ನೇಮಕ ಮಾಡುವುದಾಗಿ ಘೋಷಿಸಿದೆ. ಅಲ್ಲದೆ ೧೦೦ ದಿನಗಳ ‘ಶೈವ ಅರ್ಚಕ’ (ಪುಜಾರಿ) ಅಭ್ಯಾಸಕ್ರಮವನ್ನು ಪ್ರಾರಂಭಿಸಲಾಗುವುದು. ಈ ಅಭ್ಯಾಸಕ್ರಮ ಮುಗಿಸಿದವರಲ್ಲಿ ಯಾರು ಬೇಕಾದರೂ ಅರ್ಚಕರಾಗಬಹುದು. ‘ತಮಿಳುನಾಡು ಹಿಂದೂ ರಿಲೀಜಿಯಸ್ ಆಂಡ್ ಚಾರಿಟೇಬಲ ಇಂಡಾಮೆಂಟ್ ಡಿಪಾರ್ಟ್‌ಮೆಂಟ’ನ (ಹಿಂದೂ ಧಾರ್ಮಿಕ ಮತ್ತು ದತ್ತಿ ಆಸ್ತಿ ಇಲಾಖೆ) ಅಡಿಯಲ್ಲಿ ೩೬ ಸಾವಿರ ದೇವಾಲಯಗಳಲ್ಲಿ ಈ ನೇಮಕಾತಿಯನ್ನು ಮಾಡಲಾಗುವುದು. ೭೦ ರಿಂದ ೧೦೦ ಪುರೋಹಿತರ ಮೊದಲ ಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಈ ನೇಮಕಾತಿಗಳನ್ನು ಬಿಜೆಪಿಯು ವಿರೋಧಿಸುವಾಗ, ಡಿಎಂಕೆಯ ಅಡಿಪಾಯವೇ ಹಿಂದೂ ವಿರೋಧದ ಮೂಲ ಸಿದ್ಧಾಂತವನ್ನು ಆಧರಿಸಿದೆ. ಸರಕಾರವು ಮಸೀದಿ ಅಥವಾ ಚರ್ಚ್‌ನ ನಿಯಂತ್ರಣವನ್ನು ತೆಗೆದುಕೊಳ್ಳಲಿದೆಯೇ ? ಎಂದು ಹೇಳಿದೆ.
೧. ರಾಜ್ಯದ ಬಿಜೆಪಿ ಉಪಾಧ್ಯಕ್ಷ ಕೆ.ಟಿ. ರಾಘವನ್ ಅವರ ಪ್ರಕಾರ, ಮಂತ್ರವನ್ನು ತಮಿಳಿನಲ್ಲಿ ಪಠಿಸಬೇಕು, ಎಂದು ಸರಕಾರದ ಇಚ್ಛೆಯಾಗಿದೆ; ಆದರೆ ಇದು ಹೇಗೆ ಸಾಧ್ಯ ? ಡಿಎಮ್‌ಕೆ ರಾಜಕೀಯ ಲಾಭಕ್ಕಾಗಿ ಹಿಂದೂಗಳಲ್ಲಿ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸುತ್ತಿದೆ.
೨. ಡಿಎಂಕೆ ಮಹಿಳಾ ಮೈತ್ರಿಕೂಟದ ಕಾರ್ಯದರ್ಶಿ ಮತ್ತು ಸಂಸದೆ ಕನಿಮೋಳಿಯವರು ‘ತಮ್ಮನ್ನು ಹಿಂದೂಗಳ ರಕ್ಷಕ ಎಂದು ಕರೆದುಕೊಳ್ಳುವ ಬಿಜೆಪಿಯು ಹಿಂದೂಗಳ ಒಂದು ವರ್ಗದೊಂದಿಗೆ ಮಾತ್ರ ಏಕೆ ನಿಲ್ಲುತ್ತದೆ ?’, ಎಂದು ಪ್ರಶ್ನಿಸಿದೆ. (ನಾಸ್ತಿಕ ಡಿಎಂಕೆ ಯಾವಾಗಲೂ ಹಿಂದೂ ವಿರೋಧಿ ನಿಲುವನ್ನು ಏಕೆ ತೆಗೆದುಕೊಳ್ಳುತ್ತದೆ ?, ಇದಕ್ಕೆ ಕನಿಮೋಳಿಯವರು ಉತ್ತರಿಸಬಹುದೇ ? – ಸಂಪಾದಕ)
೩. ಮದ್ರಾಸ್ ವಿಶ್ವವಿದ್ಯಾಲಯದ ಪ್ರಾ. ಮಣಿವನ್ನನ ಅವರು, ಬ್ರಾಹ್ಮಣೇತರ ಪುರೋಹಿತರ ಹೋರಾಟವು ಹಳೆಯದು ಎಂದು ಹೇಳಿದರು. ಪೆರಿಯಾರ್ ೧೯೭೦ ರಲ್ಲಿ ಈ ಸೂತ್ರವನ್ನು ಮಂಡಿಸಿದಾಗ, ಡಿಎಂಕೆ ಸರಕಾರವು ನೇಮಕಕ್ಕೆ ಆದೇಶಿಸಿತು. ೧೯೭೨ ರಲ್ಲಿ ಸರ್ವೋಚ್ಚ ನ್ಯಾಯಾಲಯವು ಈ ಆದೇಶವನ್ನು ತಡೆಹಿಡಿಯಿತು. ೧೯೮೨ ರಲ್ಲಿ ಆಗಿನ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ ಅವರು ಆಯೋಗವನ್ನು ಸ್ಥಾಪಿಸಿದ್ದರು. ಈ ಆಯೋಗವು ಎಲ್ಲಾ ಜಾತಿಯ ವ್ಯಕ್ತಿಗಳನ್ನು ತರಬೇತಿ ನೀಡಿದ ನಂತರ ಅರ್ಚಕರಾಗಿ ನೇಮಿಸಬೇಕು ಎಂದು ಆಯೋಗವು ಆದೇಶಿಸಿತ್ತು.