ಸರಕಾರದ ಹೊಸ ನಿಯಮಗಳನ್ನು ಪಾಲಿಸಲು ಸಿದ್ಧರಿದ್ದೇವೆ; ಆದರೆ ಕೆಲವು ಅಂಶಗಳ ಬಗ್ಗೆ ಚರ್ಚೆಯ ಅವಶ್ಯಕತೆಯಿದೆ ! – ಫೇಸ್‍ಬುಕ್

ನಿಯಮಗಳನ್ನು ಪಾಲಿಸಲು ಕೇಂದ್ರ ಸರಕಾರವು ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳಿಗೆ ನೀಡಿದ ೩ ತಿಂಗಳ ಅವಧಿ ಮುಗಿದಿದೆ !

ಭಾರತದಲ್ಲಿ ವ್ಯವಹಾರ ಮಾಡುವಾಗ ಭಾರತದ ನಿಯಮಗಳನ್ನು ಪಾಲಿಸದ ಸಂಸ್ಥೆಗಳನ್ನು ಭಾರತ ಸರಕಾರವು ಈಗ ನಿಷೇಧಿಸಬೇಕು !

ನವ ದೆಹಲಿ – ನಾವು ಮಾಹಿತಿ ಮತ್ತು ತಂತ್ರಜ್ಞಾನದ ನಿಯಮಗಳನ್ನು ಪಾಲಿಸುತ್ತೇವೆ, ಅದರ ಬಗ್ಗೆ ಯಾವುದೇ ಸಂದೇಹವಿಲ್ಲ; ಆದರೆ ಕೆಲವು ಸೂತ್ರಗಳ ಬಗ್ಗೆ ಚರ್ಚೆಯಾಗುವುದು ಸಹ ಅವಶ್ಯಕವೇ ಆಗಿದೆ. ಇದಕ್ಕಾಗಿ ನಾವು ನಮ್ಮ ಅಭಿಪ್ರಾಯಗಳನ್ನು ಸರಕಾರದ ಮುಂದೆ ಪ್ರಸ್ತುತಪಡಿಸುತ್ತೇವೆ ಎಂದು ‘ಫೇಸ್‍ಬುಕ್’ ಸಂಸ್ಥೆ ತಿಳಿಸಿದೆ. ಕೇಂದ್ರ ಸರಕಾರವು ಮೂರು ತಿಂಗಳ ಹಿಂದೆ ಫೇಸ್‍ಬುಕ್, ಟ್ವಿಟರ್ ಮತ್ತು ಇನ್‍ಸ್ಟಾಗ್ರಾಮ್‍ನಂತಹ ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳಿಗೆ ನಿಯಮಗಳನ್ನು ಪಾಲಿಸುವಂತೆ ಆದೇಶಿಸಿತ್ತು. ಈ ಗಡುವು ಮೇ ೨೫ ಕ್ಕೆ ಮುಗಿದಿದೆ. ಈ ಹಿನ್ನೆಲೆಯಲ್ಲಿ ಫೇಸ್‍ಬುಕ್ ಸಂಸ್ಥೆಯು ತನ್ನ ಹೇಳಿಕೆಯನ್ನು ಸ್ಪಷ್ಟಪಡಿಸಿದೆ.

‘ಫೇಸ್‍ಬುಕ್’ ಈ ವ್ಯಾಸಪೀಠವು ಜನರಿಗೆ ಸ್ವತಂತ್ರವಾಗಿ ಮತ್ತು ಸುರಕ್ಷಿತರೀತಿಯಲ್ಲಿ ವ್ಯಕ್ತವಾಗ ಆಗಬೇಕೆಂಬುದಕ್ಕೆ ಬದ್ಧವಾಗಿದೆ, ಎಂದು ಫೇಸ್‍ಬುಕ್ ಹೇಳಿದೆ.

. ಕೇಂದ್ರ ಸರಕಾರದ ಇಲೆಟ್ರೋನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಇಂತಹ ಸಂಸ್ಥೆಗಳಿಗೆ ಭಾರತದಲ್ಲಿ ಅನುಸರಣಾ ಅಧಿಕಾರಿಗಳು ಮತ್ತು ನೋಡಲ್ ಅಧಿಕಾರಿಗಳನ್ನು ನೇಮಿಸುವಂತೆ ಕೇಂದ್ರ ಸರಕಾರವು ಹೇಳಿತ್ತು. ಅದರ ಜೊತೆಗೆ ಅವರ ಕಾರ್ಯಕ್ಷೇತ್ರವು ಭಾರತದಲ್ಲಿಯೇ ಇರಬೇಕು ಎಂದು ಕರಾರು ಹಾಕಿತ್ತು. ದೂರುಗಳಿಗೆ ಸಮಾಧಾನ, ಆಕ್ಷೇಪಾರ್ಹ ಪೋಸ್ಟಗಳು ಮತ್ತು ವಿಷಯಗಳ ಉಸ್ತುವಾರಿ, ಅನುಸರಣೆ ವರದಿಗಳು ಮತ್ತು ಆಕ್ಷೇಪಾರ್ಹ ಕಡತಗಳನ್ನು ತೆಗೆದುಹಾಕುವ ನಿಯಮಗಳನ್ನು ಹಾಕಿ ಕೊಡಲಾಗಿದೆ; ಆದರೆ, ಈ ಸಂಸ್ಥೆಗಳು ನಿಯಮಗಳನ್ನು ಇನ್ನೂ ಜಾರಿಗೆ ತಂದಿಲ್ಲ, ಎಂದು ಹೇಳಲಾಗುತ್ತಿದೆ.

. ಹೊಸ ನಿಯಮಗಳ ಪ್ರಕಾರ ಒಂದು ಸಮಿತಿಯನ್ನೂ ರಚಿಸಲಾಗುವುದು. ಈ ಸಮಿತಿಯಲ್ಲಿ ರಕ್ಷಣಾ, ವಿದೇಶಾಂಗ ವ್ಯವಹಾರ, ಗೃಹ ಸಚಿವಾಲಯ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಕಾನೂನು, ಮಾಹಿತಿ ಮತ್ತು ತಂತ್ರಜ್ಞಾನ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಗಳ ಸದಸ್ಯರನ್ನು ಸೇರಿಸಲಾಗುವುದು.