೨೪ ಗಂಟೆಗಳ ನಂತರವೂ ಐಎಂಎಯಿಂದ ಇನ್ನು ಯಾವುದೇ ಉತ್ತರವಿಲ್ಲ !ಅಲೋಪಥಿಯ ಬಳಿ ಅಧಿಕ ರಕ್ತದೊತ್ತಡ, ಕಾಮಾಲೆ, ಕಣ್ಣಿನ ಸಂಖ್ಯೆಯನ್ನು ಕಡಿಮೆ ಮಾಡುವುದು, ಮಧುಮೇಹ, ತಲೆನೋವು ಇತ್ಯಾದಿಗಳಿಗೆ ಶಾಶ್ವತ ಚಿಕಿತ್ಸೆಗಳಿವೆಯೇ ? |
ಈ ಪ್ರಶ್ನೆಗಳಿಗೆ ಐಎಂಎ ಉತ್ತರಿಸಬೇಕು ಎಂದು ಜನರಿಗೆ ಅನಿಸುತ್ತದೆ !
ನವದೆಹಲಿ – ಯೋಗ ಋಷಿ ರಾಮದೇವ ಬಾಬಾ ಅವರು ಅಲೋಪಥಿಯ ಬಗ್ಗೆ ಹೇಳಿಕೆ ನೀಡಿದ್ದಕ್ಕೆ ‘ಇಂಡಿಯನ ಮೆಡಿಕಲ ಅಸೊಸಿಯೇಶನ್’ (ಐಎಂಎ) ವಿರೋಧಿಸಿದ ನಂತರ ಬಾಬಾರವರು ಕ್ಷಮೆಯಾಚಿಸಿದ್ದರು; ಆದರೆ ಕೆಲವೇ ಗಂಟೆಗಳಲ್ಲಿ, ಯೋಗಋಷಿ ರಾಮದೇವ ಬಾಬಾ ಅವರು ಅಲೋಪಥಿಯ ಔಷದಿಯನ್ನು ಅಭಿವೃದ್ಧಿ ಪಡಿಸುವ ಸಂಸ್ಥೆಗಳು ಮತ್ತು ಇಂಡಿಯನ ಮೆಡಿಕಲ ಅಸೊಸಿಯೇಶನ್‍ಗೆ ೨೫ ಪ್ರಶ್ನೆಗಳನ್ನು ಕೇಳಿದ್ದಾರೆ. ಅದರಲ್ಲಿ, ಅವರು ‘ಅಲೋಪಥಿಯಲ್ಲಿ ಕೆಲವು ಕಾಯಿಲೆಗಳಿಗೆ ಶಾಶ್ವತ ಚಿಕಿತ್ಸೆ ಇದೆಯೇ ?’, ಎಂದು ಪ್ರಶ್ನೆ ಕೇಳಿದ್ದಾರೆ. ಅದೇರೀತಿ ‘ಅಲೋಪಥಿ ಚಿಕಿತ್ಸೆಗಳು ಇಷ್ಟೊಂದು ಪರಿಣಾಮಕಾರಿಯಾಗಿವೆ ಎಂದಾದರೆ, ಅಲೋಪತಿ ವೈದ್ಯರು ಅನಾರೋಗ್ಯಕ್ಕೆ ಒಳಗಾಗುವುದು ಸರಿಯಲ್ಲ ಎಂದು ಅನಿಸುತ್ತದೆ’, ಎಂದು ಅವರು ಹೇಳಿದರು. ಈ ಪ್ರಶ್ನೆಗಳ ಕರಪತ್ರವನ್ನು ಯೋಗಋಷಿ ರಾಮದೇವ ಬಾಬಾ ಟ್ವೀಟ್ ಮಾಡಿದ್ದಾರೆ.
Smarting under statement withdrawal, Ramdev poses 25 questions to IMA https://t.co/SiyelfS6fg
— TOI India (@TOIIndiaNews) May 24, 2021
ಯೋಗಋಷಿ ರಾಮದೇವ ಬಾಬಾ ಕೇಳಿದ ೨೫ ಪ್ರಶ್ನೆಗಳು !
೧. ಅಲೋಪಥಿಯಲ್ಲಿ ಅಧಿಕ ರಕ್ತದೊತ್ತಡಕ್ಕೆ ಶಾಶ್ವತ ಚಿಕಿತ್ಸೆ ಇದೆಯೇ ?
೨. ಟೈಪ್ ೧ ಮತ್ತು ಟೈಪ್ 2 ಮಧುಮೇಹಕ್ಕೆ ಶಾಶ್ವತವಾದ ಚಿಕಿತ್ಸೆ ಇದೆಯೇ ?
೩. ಥೈರಾಯ್ಡ್, ಸಂಧಿವಾತ, ಕೊಲೈಟಿಸ್, ಆಸ್ತಮಾ ಮುಂತಾದ ಕಾಯಿಲೆಗಳಿಗೆ ಪರಿಹಾರವಿದೆಯೇ ?
೪. ಫಟಿ ಲಿವರ್ ಸಿರೋಸಿಸ್, ಹೆಪಟೈಟಿಸ್‍ಗೆ ಪರಿಹಾರವಿದೆಯೇ ?
೫. ಹಾರ್ಟ್ ಬ್ಲಾಕೆಜ ರಿವರ್ಸ್‍ಗಾಗಿ ಪರಿಹಾರಗಳು ಯಾವುವು ? ಬೈಪಾಸ್, ಆಂಜಿಯೋಪ್ಲ್ಯಾಸ್ಟಿ ಮಾಡದೆ ಇತರ ಚಿಕಿತ್ಸೆಗಳು ಇವೆಯೇ ?
೬. ಎನ್‍ಲಾರ್ಜ್ ಹಾರ್ಟ್ ಮತ್ತು ಇಎಫ್ ಕಡಿಮೆಯಾಗಲು ಪೆಸಮೇಕರ ಇಲ್ಲದೆ ಪರಿಹಾರಗಳಿವೆಯೇ ?
೭. ತಲೆನೋವು ಮತ್ತು ಮೈಗ್ರೇನ್‍ಗೆ ಯಾವುದೇ ಪರಿಹಾರಗಳಿವೆಯೇ ?
೮. ಶಸ್ತ್ರಚಿಕಿತ್ಸೆ ಇಲ್ಲದೆ ಒಬ್ಬ ವ್ಯಕ್ತಿಯು ಪ್ರತಿದಿನ ಅರ್ಧ ಕಿಲೋಗ್ರಾಂ ತೂಕವನ್ನು ಕಳೆದುಕೊಳ್ಳುವಂತಹ ಔಷಧಿ ಇದೆಯೇ ?
೯. ವ್ಯಕ್ತಿಗೆ ತಗಲಿರುವ ಮಾದಕ ವ್ಯಸನವನ್ನು ದೂರ ಮಾಡಲು ಯಾವುದಾದರೂ ಔಷಧಿ ಇದೆಯೇ ?
೧೦. ಅಲೋಪಥಿ ಅಸ್ತಿತ್ವಕ್ಕೆ ಬಂದು ೨೦೦ ವರ್ಷಗಳಾಗಿವೆ. ಆದ್ದರಿಂದ, ಹೇಗೆ ನೀವು ಕ್ಷಯರೋಗಕ್ಕೆ ಶಾಶ್ವತವಾದ ಪರಿಹಾರವನ್ನು ಕಂಡುಕೊಂಡಿರುವಿರೋ, ಯಕೃತ್ತಿನ ಕಾಯಿಲೆಗೂ ಔಷಧಿಯನ್ನು ಕಂಡು ಹಿಡಿಯಬೇಕು.
೧೧. ಕೊಲೆಸ್ಟ್ರಾಲ್ ರೋಗಿಗಳಲ್ಲಿ ಕೊಲೆಸ್ಟ್ರಾಲ್ ಟ್ರೈಗ್ಲಿಸರೈಡ್ ಕಡಿಮೆ ಗೊಳಿಸಲು ಚಿಕಿತ್ಸೆಗಳಿವೆಯೇ ?
೧೨. ಔಷಧಿಯನ್ನು ಅಭಿವೃದ್ಧಿ ಪಡಿಸುವವರು ಕನ್ನಡಕ ಮತ್ತು ಒಳ್ಳೆಯ ರೀತಿಯಲ್ಲಿ ಕೇಳಿಸಬೇಕೆಂದು ಹಾಕುವ ಶ್ರವಣ ಸಾಧನಗಳನ್ನು ಶಾಶ್ವತವಾಗಿ ಇಲ್ಲವಾಗಿಸುವಂತಹ ಸೂಕ್ತವಾದ ಚಿಕಿತ್ಸೆಯ ಬಗ್ಗೆ ತಿಳಿಸಿ ?
೧೩. ಒಸಡುಗಳನ್ನು ಬಲಪಡಿಸುವ ಔಷಧಿಯನ್ನು ತಿಳಿಸಿ.
೧೪. ಸೋರಿಯಾಸಿಸ್, ಸೋರಿಯಾಟಿಕ್ ಸಂಧಿವಾತ ಮತ್ತು ಬಿಳಿ ಕಲೆಗಳಿಗೆ ಶಾಶ್ವತ ಚಿಕಿತ್ಸೆ ಇದೆಯೇ ?
೧೫. ಆಧುನಿಕ ವೈದ್ಯಕೀಯ ಶಾಸ್ತ್ರದ ಬಳಿ ಆಂಕೈಲೋಸಿಂಗ್ ಸ್ಪಾಂಡಿಲೋಸಿಸ್‍ನ ಶಾಶ್ವತ ಔಷಧಿಯನ್ನು ಹೊಂದಿದೆಯೇ ? ಆರ್ಟಿಫಾಕ್ಟರ ಪಾಜಟಿವ್‍ಗೆ ನೆಗೆಟಿವ್ ಮಾಡುವಂತಗ ಪರಿಹಾರ ಇದೆಯೇ ?
೧೬. ಪಾರ್ಕಿನಸನ್‍ಗೆ ಶಾಶ್ವತ ಔಷಧಿ ಇದೆಯೇ ?
೧೭. ಮಲಬದ್ಧತೆ, ವಾಯು, ಪಿತ್ತಕ್ಕೆ ಅಡ್ಡಪರಿಣಾಮಗಳಿಲ್ಲದ ಶಾಶ್ವತ ಚಿಕಿತ್ಸೆ ಇದೆಯೇ ?
೧೮. ಅಲೋಪಥಿ ಔಷಧಿಗಳು ನಿದ್ರಾಹೀನತೆಯಿಂದ ಬಳಲುತ್ತಿರುವ ಜನರ ಮೇಲೆ 4 ರಿಂದ 6 ಗಂಟೆಗಳ ಕಾಲ ಮಾತ್ರ ಪರಿಣಾಮವನ್ನು ಬೀರುತ್ತವೆ, ಇದರಲ್ಲಿ ಅಡ್ಡಪರಿಣಾಮಗಳನ್ನು ಸಹ ಇರುತ್ತದೆ. ಅಲೋಪಥಿಯಲ್ಲಿ ಇದಕ್ಕೆ ಪರಿಹಾರವಿದೆಯೇ ?
೧೯. ಸ್ಟ್ರೆಸ್ ಹಾರ್ಮೋನುಗಳನ್ನು ಕಡಿಮೆ ಮಾಡಲು ಮತ್ತು ಹ್ಯಾಪಿ ಅಥವಾ ಉತ್ತಮ ಹಾರ್ಮೋನುಗಳನ್ನು ಹೆಚ್ಚಿಸಲು, ಮತ್ತು ಅದರಿಂದ ವ್ಯಕ್ತಿಯ ಒತ್ತಡವನ್ನು ಮುಕ್ತ ಮತ್ತು ಸಂತೋಷದಿಂದ ಇರಿಸುವಂತಹ ಔಷಧ ಗಳನ್ನು ಅಲೋಪಥಿ ಸಂಸ್ಥೆಗಳು ಹೇಳಬೇಕು.
೨೦. ಹೆರಿಗೆಗೆ ಕೃತಕ ಉಪಕರಣಗಳನ್ನು ಬಳಸಲಾಗುತ್ತದೆ, ಇದು ಅತ್ಯಂತ ನೋವಿನಿಂದ ಕೂಡಿದೆ, ಅದರ ಶಾಶ್ವತವಾದ ಚಿಕಿತ್ಸೆ ತಿಳಿಸಿ. ಅರ್ಥಾತ್ ಟೆಸ್ಟ್ ಟ್ಯೂಬ್ ಇಲ್ಲದ ಮಗು; ಐವಿಎಫ್ ಮೂಲಕ ಸ್ವಾಭಾವಿಕ ರೀತಿಯಲ್ಲಿ ಮಕ್ಕಳಾಗುವಂತಹ ಪದ್ದತಿಯನ್ನು ಹೇಳಿದರೆ ವ್ಯಕ್ತಿಯು ಲಕ್ಷಗಟ್ಟಲೆ ರೂಪಾಯಿಗಳ ವಂಚನೆಯಿಂದ ಬಚಾವಾಗಬಹುದು.
೨೧. ಔಷಧಿಯನ್ನು ಉದ್ಯಮವು ಏಜಿಂಗ್ ಪ್ರೊಸೆಸ್‍ಅನ್ನು ರಿವರ್ಸ್ ಮಾಡುವಂತಹ ಔಷಧಿಯನ್ನು ತಿಳಿಸಬೇಕು.
೨೨. ಅಲೋಪಥಿಯು ಅಡ್ಡಪರಿಣಾಮಗಳಿಲ್ಲದೇ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುವ ದೋಷರಹಿತ ಪದ್ಧತಿಯನ್ನು ತಿಳಿಸಬೇಕು.
೨೩. ವ್ಯಕ್ತಿಯು ತುಂಬಾ ಹಿಂಸಾತ್ಮಕ, ಕ್ರೂರ ಮತ್ತು ಅಮಾನವೀಯ ಕೃತ್ಯ ಎಸಗುತ್ತಿದ್ದರೆ, ಅವನು ಮನುಷ್ಯನಂತೆ ವರ್ತಿಸುವಂತೆ ಮಾಡಬಲ್ಲ ಔಷಧಿಯನ್ನು ತಿಳಿಸಬೇಕು.
೨೪. ಆಯುರ್ವೇದ ಮತ್ತು ಅಲೋಪತಿ ನಡುವಿನ ವಿವಾದವನ್ನು ಶಾಶ್ವತವಾಗಿ ದೂರ ಮಾಡುವಂತಹ ಔಷಧವನ್ನು ಸಂಸ್ಥೆಗಳು ತಿಳಿಸಬೇಕು.
೨೫. ಕೊರೋನಾ ರೋಗಿಗೆ ಆಮ್ಲಜನಕ ಸಿಲಿಂಡರ್ ಅನ್ನು ಹಾಕದೆ ಆತನ ಆಮ್ಲಜನಕದ ಮಟ್ಟವನ್ನು ಹೆಚ್ಚಿಸುವಂತಹ ಪರಿಹಾರವನ್ನು ಅಲೋಪಥಿಯು ಹೇಳಬೇಕು.