ಹಸುಗಳಿಗೆ ಮೂರ್ಛೆ ಬರುವ ಚುಚ್ಚುಮದ್ದು ನೀಡಿ ಕಸಾಯಿಖಾನೆಗೆ ಕಳುಹಿಸಿದ್ದ ಮತಾಂಧ ಹುಡುಗನ ಬಂಧನ

ಮತಾಂಧರ ಮಕ್ಕಳು ಸಹ ಈ ರೀತಿಯ ಗೋಹತ್ಯೆ ಮಾಡಲು ಮತಾಂಧರಿಗೆ ಹೇಗೆ ಸಹಾಯ ಮಾಡುತ್ತಾರೆ ಎಂಬುದು ಗಮನಕ್ಕೆ ಬರುತ್ತದೆ. ಅಂತಹ ಮಕ್ಕಳು ದೊಡ್ಡವರಾದ ಮೇಲೆ ಎಷ್ಟು ಪ್ರಮಾಣದಲ್ಲಿ ಹಿಂದೂ ವಿರೋಧಿ ಕಾರ್ಯಗಳನ್ನು ಮಾಡಬಹುದು ಎಂಬುದರ ಬಗ್ಗೆ ಯೋಚಿಸದಿರುವುದೇ ಉತ್ತಮ !

ನವದೆಹಲಿ – ಜೆಜೆನಗರ ಕಾಲೋನಿಯ ಬವಾನಾ ಪ್ರದೇಶದ ಸಲ್ಮಾನ್ ಎಂಬ ಹುಡುಗನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆತ ಹಸುಗಳಿಗೆ ಚುಚ್ಚುಮದ್ದು ನೀಡಿ ಮೂರ್ಛಿತಗೊಳಿಸುತ್ತಿದ್ದ ಮತ್ತು ಇತರ ಮತಾಂಧರಿಗೆ ಹಸುಗಳನ್ನು ಕಸಾಯಿಖಾನೆಗೆ ತೆಗೆದುಕೊಂಡು ಹೋಗಲು ಹೇಳುತ್ತಿದ್ದ. ಗೋರಕ್ಷಕರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು, ಮತ್ತೊಬ್ಬ ಅರ್ಮಾನ್ ಎಂಬ ಮತಾಂಧನು ಸ್ಥಳದಿಂದ ಪರಾರಿಯಾಗಿದ್ದಾನೆ.

ದೆಹಲಿಯ ಹೊರವಲಯದಲ್ಲಿ, ಹಾಗೆಯೇ ಹರಿಯಾಣಾ, ದೆಹಲಿ ಮತ್ತು ಪಶ್ಚಿಮ ಉತ್ತರ ಪ್ರದೇಶದ ಜಾನುವಾರುಗಳನ್ನು ಮೇಯಿಸಲು ದೊಡ್ಡ ಜಮೀನು ಲಭ್ಯವಿದೆ. ಸಾಮಾನ್ಯವಾಗಿ ಗೋವು ಕಾಯುವವರು ಹಸುಗಳನ್ನು ಮೇಯಿಸಲು ಅಲ್ಲಿಗೆ ಬರುತ್ತಾರೆ. ಕಳೆದ ಕೆಲವು ದಿನಗಳಲ್ಲಿ, ಗೊತ್ತಿಲ್ಲದೇ ಹಸುಗಳ ಸಂಖ್ಯೆ ಕುಸಿಯುತ್ತಿದೆ ಎಂದು ತಿಳಿದುಬಂತು. ಇದರ ಕಾರಣವನ್ನು ತಿಳಿದುಕೊಳ್ಳಲು, ಅವರು ಗೋರಕ್ಷಕರ ಬಳಿ ಹಸುಗಳ ಮೇಲೆ ಕಣ್ಣಿಡಲು ಹೇಳಿದರು. ಆ ಸಮಯದಲ್ಲಿ ಕೆಲವು ಮತಾಂಧ ಮಕ್ಕಳು ಹಸುಗಳಿಗೆ ಮೂರ್ಛೆಬರುವ ಚುಚ್ಚುಮದ್ದನ್ನು ನೀಡುತ್ತಿರುವುದು ಕಂಡುಬಂದಿದೆ. ಈ ಮತಾಂಧ ಮಕ್ಕಳು ಹಸುಗಳನ್ನು ಚುಚ್ಚುಮದ್ದು ನೀಡಲು ಕೆಲವು ಏಕಾಂತ ಸ್ಥಳಗಳನ್ನು ಆಯ್ಕೆ ಮಾಡುತ್ತಾರೆ. ಅವುಗಳಿಗೆ ಮೂರ್ಛಿತಗೊಳಿಸಿದ ನಂತರ ಅವರು ಅದರ ಬಗ್ಗೆ ಇತರ ಮತಾಂಧರಿಗೆ ತಿಳಿಸುತ್ತಾರೆ. ಈ ಮತಾಂಧರು ನಂತರ ರಾತ್ರಿಯ ಕತ್ತಲೆಯಲ್ಲಿ ಮೂರ್ಛೆಬಿದ್ದಿದ್ದ ಹಸುಗಳನ್ನು ಕಸಾಯಿ ಖಾನೆಗೆ ತೆಗೆದುಕೊಂಡು ಹೋಗುತ್ತಾರೆ. ಈ ಮಕ್ಕಳಿಗೆ ಚುಚ್ಚುಮದ್ದಿಗೆ ೭೦೦ ರಿಂದ ೧೦೦೦ ರೂಪಾಯಿ ನೀಡಲಾಗುತ್ತಿತ್ತು. ಅವರಿಗೆ ಔಷಧಿ ತುಂಬಿದ ಇಂಜೆಕ್ಷನ್ ಸಿರಿಂಜ್‍ಗಳನ್ನು ಸಹ ನೀಡಲಾಗುತ್ತದೆ.